Birthday ಅಂದರೆ ಭಯ ಬರುತ್ತದೆ…ಅಸಹ್ಯ ಆಗಿ ಬಿಟ್ಟಿದೆ: ಯಶ್ ನೋವಿನ ನುಡಿ
ಬೇಜಾರು ಮಾಡಿಕೊಂಡರೂ ಪರವಾಗಿಲ್ಲ...
Team Udayavani, Jan 8, 2024, 7:31 PM IST
ಗದಗ: ನನಗೆ ಬರ್ತ್ ಡೇ ಅಂದರೆ ಭಯ ಬರುತ್ತದೆ, ಅಸಹ್ಯ ಆಗಿ ಬಿಟ್ಟಿದೆ. ನಾವ್ಯಾರು ಕಟೌಟ್, ಬ್ಯಾನರ್ ಹಾಕಬೇಕೆಂದು ಇಷ್ಟಪಡುವುದಿಲ್ಲ ಎಂದು ರಾಕಿಂಗ್ ಸ್ಟಾರ್ ಯಶ್ ಅವರು ನೋವಿನ ನುಡಿಗಳನ್ನು ಸೋಮವಾರ ರಾತ್ರಿ ಆಡಿದ್ದಾರೆ.
ಯಶ್ ಅವರ ಫೋಟೋವಿದ್ದ ಜನ್ಮ ದಿನದ ಶುಭಾಶಯ ಕೋರುವ ಕಬ್ಬಿಣದ ರಾಡ್ ಗಳಿದ್ದ ಬೃಹತ್ ಕಟೌಟ್ ಗೆ ವಿದ್ಯುತ್ ತಂತಿ ತಗುಲಿ ಮೂವರು ಅಭಿಮಾನಿಗಳು ಮೃತಪಟ್ಟ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿಗೆ ಆಗಮಿಸಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಯಶ್ ”ಇಂತಹದ್ದನ್ನೂ ಯಾರೂ ಇಷ್ಟಪಡುವುದಿಲ್ಲ. ಬರ್ತ್ ಡೇ ಅಂದರೆ ಭಯ ಬರುತ್ತದೆ. ಅಸಹ್ಯ ಆಗಿ ಬಿಟ್ಟಿದೆ. ಕೆಲವು ದಿನಗಳ ಹಿಂದೆ ಕೋವಿಡ್.. ಕೋವಿಡ್.. ಎಂದ ಕಾರಣ ನಮ್ಮಿಂದ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಯಾರೂ ಬರಬೇಡಿ ಅಂದಿದ್ದೆ. ಬೇಡ ಅಂದರೂ ಬೇಜಾರು ಮಾಡಿಕೊಳ್ಳುತ್ತಾರೆ. ಆಚರಣೆ ಮಾಡಿದರೆ ಈ ರೀತಿ ಆಗುತ್ತದೆ ಎಂದು ನೋವು ಹೊರ ಹಾಕಿದರು.
ಸಾಂತ್ವನ ಏನು ಹೇಳುವುದು, ಮನೆ ಮಗ ಬರುತ್ತಾನಾ, ನಮ್ಮ ಮನೆಯಲ್ಲಿ ಆದರೂ ಹೀಗೆ ಅಲ್ಲವೇ? ಏನು ಕೊಟ್ಟರೂ ಮಗ ಬರುತ್ತಾನಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Tragedy ನಡೆದ ಸೂರಣಗಿ ಗ್ರಾಮಕ್ಕೆ ಬಂದ ಯಶ್; ಆಕ್ರಂದನ ಕಂಡು ಭಾವುಕ
ನನಗೆ ನನ್ನ ಹಿಂದೆ ಮುಂದೆ ಜನ ಓಡಾಡಿಸಿಕೊಳ್ಳುವುದು ಇಷ್ಟವಿಲ್ಲ. ಈ ಬ್ಯಾನರ್, ಕಟೌಟ್ ಹಾಕುವುದನ್ನು, ಬೈಕ್ ನಲ್ಲಿ ನನ್ನನ್ನು ಚೇಸ್ ಮಾಡುವುದನ್ನು ಬಿಟ್ಟು ಬಿಡಿ. ಜೀವನಕ್ಕೆ ಬೇಕಾದುದನ್ನು ಮಾಡಿ. ನಾವು ಕೆಲಸ ಮಾಡಿದ್ದನ್ನು ನೋಡಿ ಜನ ಆಶೀರ್ವಾದ ಮಾಡುತ್ತಾರೆ. ಅಭಿಮಾನಿಗಳು ಅವರ ಬದುಕಿನಲ್ಲಿ ಖುಷಿಯಾಗಿರುವುದೇ ದೊಡ್ಡ ಅಭಿಮಾನ ಎಂದರು.
ಯಾರು ಬೇಜಾರು ಮಾಡಿಕೊಂಡರೂ ಪರವಾಗಿಲ್ಲ,ತಂದೆ, ತಾಯಿಯ ಮೇಲಿರುವ ಗೌರವ ಉಳಿಸಿಕೊಳ್ಳಿ. ಜವಾಬ್ದಾರಿಯಿಂದ ನಡೆದುಕೊಳ್ಳಿ ಇಲ್ಲಿಗೆ ನಾನು ಬರುವಾಗಲೂ ಹಲವರು ನನ್ನನ್ನು ಬೈಕ್ ನಲ್ಲಿ ಚೇಸ್ ಮಾಡಿಕೊಂಡು ಬಂದರು. ಈ ರೀತಿಯ ಅಭಿಮಾನ ಬೇಡ. ಈ ವಿಚಾರದಲ್ಲಿ ರಾಜಕೀಯ ಬೇಡ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.