ಅಂಬೇಡ್ಕರ್ ಜನ್ಮದಿನ; ತಾರೆಯರ ಮಾತುಕತೆ
ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಸತೀಶ್ ಮತ್ತು ತಂಡ
Team Udayavani, Apr 14, 2020, 11:33 AM IST
ಎಲ್ಲೆಡೆ ಲಾಕ್‌ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಚಿತ್ರರಂಗದ ನಟ,ನಟಿಯರು ಸುಮ್ಮನೆ ಕೂರತೆ, ಒಂದಲ್ಲ, ಒಂದು ಕೆಲಸ ದಲ್ಲಿ ನಿರತರಾಗಿದ್ದಾರೆ. ತಮ್ಮ ತಮ್ಮ ಮನೆಯಲ್ಲಿದ್ದುಕೊಂಡೇ ಸಾಮಾಜಿಕ ತಾಣಗಳ ಮೂಳಕ ಅಭಿಮಾನಿಗಳೊಂದಿಗೆ ಸಂಪರ್ಕ ಮಾಡುತ್ತಿದ್ದಾರೆ. ಅದರೊಂದಿಗೆ ಒಂದಷ್ಟು ಹರಟುತ್ತಿದ್ದಾರೆ. ಇದಕ್ಕೆ ನಟ ನೀನಾಸಂ ಸತೀಶ್ ಕೂಡ ಹೊರತಲ್ಲ. ಹಾಗಂತ, ಅವರು ಬೇರೆ ಯಾವುದಾದರೊಂದು ಸಿನಿ ಮಾ ವಿಷಯ ಇಟ್ಟುಕೊಂಡು, ಸಾಮಾಜಿಕ ತಾಣದಲ್ಲಿ ಹರಟಿದ್ದಾರಾ ಅಂದುಕೊಳ್ಳುವಂತಿಲ್ಲ. ಈ ಬಾರಿ ಅವರು ಸಿನಿಮಾ ಚಟುವಟಿಕೆ ಬದಲು ಹೊಸದೊಂದು ವಿಷಯ ದತ್ತ ಗಮನಹರಿಸಿದ್ದಾರೆ. ಹೌದು. ಈ ಸಲ ನೀನಾಸಂ ಸತೀಶ್, ಒಂದಷ್ಟು ಕವನ ವಾಚನ, ಹಾಡು, ಚರ್ಚೆ ಇತ್ಯಾದಿ ವಿಷಯಗಳ ಕುರಿತು ಮಾತನಾಡಿದ್ದಾರೆ.
ಅದಕ್ಕೆಲ್ಲಾ ಕಾರಣವಾಗಿದ್ದು, ಅಂಬೇಡ್ಕರ್ ಜನ್ಮದಿನ. ಹೌದು, ಏಪ್ರಿಲ್ 14 (ಇಂದು) ಡಾ.ಬಿ. ಆರ್.ಅಂಬೇಡ್ಕರ್ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಸತೀಶ್ ಸೋಮವಾರ ತಮ್ಮ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಒಂದಿಷ್ಟು ಸಿನಿಮಾ ಗೆಳೆಯರನ್ನು ಸೇರಿಸಿಕೊಂಡು ಅಂಬೇಡ್ಕರ್ ಕುರಿತು ಮಾತನಾಡಿದ್ದಾರೆ. ಅವರ ಅಪಿಶಿಯಲ್ ಪೇಜ್‌ನಲ್ಲಿ ನಟರಾಜ್ ಹುಳಿಯಾ ರ್, ನಟ ಅಚ್ಯುತ ಕುಮಾರ್, ನಿರ್ದೇಶಕ ಬಿ.ಎಂ.ಗಿರಿರಾಜ್, ಬಾಲಾಜಿ ಮನೋಹರ್, ಚಿಂತನ್, ಕಿರಣ್ ನಾಯ್ಕ, ಗೋಪಾಲಕೃಷ್ಣ ದೇಶಪಾಂಡೆ, ರಾಘು ಶಿವಮೊಗ್ಗ ಸೇರಿದಂತೆ ಇತರರು ಸೇರಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳ ಕುರಿತು ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಹಾಡು, ಕವಿತೆ ಪ್ರಸ್ತುತ ಸಿದ್ಧಾಂತ ಇತ್ಯಾದಿ ಕುರಿತು ಮಾತನಾಡಿದ್ದಾರೆ. ಅಭಿಮಾನಿಗಳು ಕೂಡ ಸತೀಶ್ ಅವರ ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Lacchi Kannada Movie: ಲಚ್ಚಿ ಚಿತ್ರಕ್ಕೆ ಪ್ರಶಸ್ತಿ ಗರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.