ಮರ್ಯಾದಸ್ಥನಾದ ವಸಿಷ್ಠಗೆ ಹುಟುಹಬ್ಬದ ಸಂಭ್ರಮ
Team Udayavani, Oct 19, 2020, 1:48 PM IST
ತಮ್ಮ ಪ್ರತಿಭೆ ಮೂಲಕಕನ್ನಡ ಚಿತ್ರರಂಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ನಟ ವಸಿಷ್ಠಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಸಿನಿಮಾಗಳಕಡೆಯಿಂದಲೂ ಹೊಸ ಸುದ್ದಿಗಳು ಬಂದಿದೆ.
ಮುಖ್ಯವಾಗಿ ವಸಿಷ್ಠ ಅವರ ಹೊಸ ಚಿತ್ರವೊಂದಕ್ಕೆ ಟೈಟಲ್ ಫಿಕ್ಸ್ ಆಗಿದೆ. ಅದು “ಮರ್ಯಾದಸ್ಥ’. ಇದು ವಸಿಷ್ಠ ನಟನೆಯ ಹೊಸ ಸಿನಿಮಾ. ಮಹೇಶ್‌ಕೃಷ್ಣ ಈ ಸಿನಿಮಾದ ನಿರ್ದೇಶಕರು. ಸಾಯಿ ಚರಣ್ ನಿರ್ಮಾಪಕರು. ಇದರ ಜೊತೆಗೆ ವಸಿಷ್ಠ ನಟನೆಯ “ತಲ್ವಾರ್‌ಪೇಟೆ’ ಚಿತ್ರದ ಚಿತ್ರೀಕರಣ ಕೂಡಾ ನಡೆಯುತ್ತಿದೆ. ಈ ಚಿತ್ರದಲ್ಲೂ ವಸಿಷ್ಠ ಅವರಿಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಈ ನಡುವೆಯೇ ವಸಿಷ್ಠ ಅವರ ಸಿನಿಮಾದಿಂದ ಹೊಸ ಸುದ್ದಿಯೊಂದು ಬಂದಿದೆ.
ಅದು ರೀಮೇಕ್ ರೈಟ್ಸ್ ಮಾರಾಟದ ಕುರಿತಾಗಿರೋದು. ವಸಿಷ್ಠ ನಟನೆಯ “ಕಾಲಚಕ್ರ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರದ ರೀಮೇಕ್ ರೈಟ್ಸ್ ಮಲಯಾಳಂಗೆ ಮಾರಾಟವಾಗಿದೆ. ಈ ಮೂಲಕ ಚಿತ್ರತಂಡ ಖುಷಿಯಾಗಿದೆ. ದಿಗಂತ್, ಹರಿಪ್ರಿಯಾ ನಾಯಕ-ನಾಯಕಿಯಾಗಿರುವ “ಎವರು’ ಸಿನಿಮಾದ ರೀಮೇಕ್‌ನಲ್ಲೂ ನಟಿಸುತ್ತಿದ್ದಾರೆ. ಇದರ ಜೊತೆಗೆ ವಸಿಷ್ಠ ತೆಲುಗು ಸಿನಿಮಾದಲ್ಲೂ ಬಿಝಿಯಾಗಿದ್ದಾರೆ.
“ಸದ್ಯಕ್ಕೆ ಕೈ ತುಂಬಾ ಸಿನಿಮಾಗಳಿವೆ. ಹೊಸ ಹೊಸ ಪಾತ್ರಗಳು ಸಿಗುತ್ತಿವೆ. ಆ ಪಾತ್ರಗಳಿಗೆಲ್ಲಾ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿ ದ್ದೇನೆ. ಒಟ್ಟಾರೆಯಾಗಿ ವಸಿಷ್ಠ ಸಿಂಹಬೇರೆ ಬೇರೆ ಸಿನಿಮಾಗಳಲ್ಲಿ ಬಿಝಿಯಾಗಿರೋದಂತೂ ಸುಳ್ಳಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.