ಮಯೂರಿ “ಮೌನರಾಗ’ ಬೋಲ್ಡ್ ಆ್ಯಂಡ್ ಬ್ಯೂಟಿ
Team Udayavani, Feb 20, 2020, 7:00 AM IST
ನಟಿ ಮಯೂರಿ ಅಭಿನಯದ “ಮೌನಂ’ ಈ ವಾರ ತೆರೆ ಕಾಣುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ವಿಶೇಷ ಅಂದರೆ, ಇದೇ ಮೊದಲ ಸಲ ಮಯೂರಿ ಅವರು ತುಂಬಾನೇ ಬೋಲ್ಡ್ ಪಾತ್ರದಲ್ಲಿ ಮಿಂಚಿದ್ದಾರೆ. ಆ ಪಾತ್ರವನ್ನು ವಿವರಿಸುವುದಾದರೆ, ದೃಶ್ಯಕ್ಕನುಗುಣವಾಗಿ ಮಯೂರಿ ಅವರು ಧಮ್ ಕೂಡ ಎಳೆದಿದ್ದಾರೆ. ಅದೊಂದು ರೀತಿಯ ಟಾಮ್ ಬಾಯ್ ಲುಕ್ ಇರುವಂತಹ ಪಾತ್ರ.
ಅವರಿಲ್ಲಿ ಡಬಲ್ ಶೇಡ್ ಪಾತ್ರ ನಿರ್ವಹಿಸಿರುವುದು ಇನ್ನೊಂದು ವಿಶೇಷ. ಅಂದಹಾಗೆ, ಮಯೂರಿ ಯಾಕೆ, ಧಮ್ ಎಳೆಯುತ್ತಾರೆ, ಟಾಮ್ ಬಾಯ್ ಆಗಿ ಕಾಣಿಸಿಕೊಂಡಿರುವುದೇಕೆ ಎಂಬ ಕುತೂಹಲಕ್ಕೆ ಸಿನಿಮಾ ನೋಡಬೇಕೆಂಬುದು ನಿರ್ದೇಶಕ ರಾಜ್ ಪಂಡಿತ್ ಮಾತು. ಇನ್ನು ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಚಿತ್ರದಲ್ಲಿ ತಂದೆ ಹಾಗು ಮಗಳ ಬಾಂಧವ್ಯ ಹೈಲೈಟ್ ಆಗಿದೆ. ಮಯೂರಿ ಅವರು ಈವರೆಗೆ ಕಾಣಿಸಿಕೊಂಡ ಪಾತ್ರಗಳೇ ಬೇರೆ, “ಮೌನಂ’ ಮೂಲಕ ಕಾಣಿಸಿಕೊಳ್ಳುತ್ತಿರುವ ಪಾತ್ರವೇ ಬೇರೆ. ಚಿತ್ರ ನೋಡಿದವರಿಗೆ ಮಯೂರಿ ಹೀಗೂ ಕಾಣಾ¤ರಾ ಎನ್ನುವಷ್ಟರ ಮಟ್ಟಿಗೆ ಬೋಲ್ಡ್ ಪಾತ್ರವಿದೆಯಂತೆ. ಇನ್ನು, ನಿಹಾರಿಕಾ ಮೂವೀಸ್ ಬ್ಯಾನರ್ನಲ್ಲಿ ಶ್ರೀಹರಿ ಚಿತ್ರ ನಿರ್ಮಿಸಿದ್ದಾರೆ.
ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಶಂಕರ್ ಕ್ಯಾಮೆರಾ ಹಿಡಿದರೆ, ಆರವ್ ರಿಶಿಕ್ ಸಂಗೀತವಿದೆ. ಗುರುಮೂರ್ತಿ ಹೆಗಡೆ ಸಂಕಲನ, ಕೌರವ ವೆಂಕಟೇಶ್, ಅಲ್ಟಿಮೇಟ್ ಶಿವು ಸಾಹಸವಿದೆ. ಆಕಾಶ್ ಎಸ್., ಸಾಹಿತ್ಯ ಬರೆದಿದ್ದಾರೆ. ಚಿತ್ರದಲ್ಲಿ ಅವಿನಾಶ್, ಬಾಲಾಜಿ ಶರ್ಮ, ಹನುಮಂತೇಗೌಡ, ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ನಯನಾ, ಸಿಂಚನಾ, ಮಂಜುಳಾ ರೆಡ್ಡಿ ಇತರರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.