ಶಿವಣ್ಣ ರುಸ್ತುಂನಲ್ಲಿ ಬಾಲಿವುಡ್ ನಟ
Team Udayavani, Mar 12, 2018, 11:18 AM IST
ಶಿವರಾಜಕುಮಾರ್ ಅವರು “ರುಸ್ತುಂ’ ಎಂಬ ಸಿನಿಮಾ ಒಪ್ಪಿಕೊಂಡಿರುವ ವಿಚಾರ ನಿಮಗೆ ಗೊತ್ತೇ ಇದೆ. ಈ ಚಿತ್ರವನ್ನು ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶಿಸುತ್ತಿದ್ದು, ಜಯಣ್ಣ ನಿರ್ಮಿಸುತ್ತಿದ್ದಾರೆ. ಚಿತ್ರ ಏಪ್ರಿಲ್‌ನಲ್ಲಿ ಶುರುವಾಗಲಿದೆ. ಈಗ ಈ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್ ನಟರೊಬ್ಬರನ್ನು ಕರೆತರುವ ಪ್ರಯತ್ನದಲ್ಲಿದೆ ಚಿತ್ರತಂಡ.
ಹಾಗಾದರೆ ಯಾರು ಆ ಬಾಲಿವುಡ್ ನಟ ಎಂದರೆ ಸದ್ಯಕ್ಕೆ ಉತ್ತರವಿಲ್ಲ. ಸಂಜಯ್ ದತ್, ಅನಿಲ್ ಕಪೂರ್, ಸುನೀಲ್ ಶೆಟ್ಟಿ ಹಾಗೂ ಮನೋಜ್ ಬಾಜ್‌ಪೇಯಿ ಅವರಲ್ಲಿ ಒಬ್ಬರನ್ನು “ರುಸ್ತುಂ’ಗೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಈ ನಾಲ್ವರಲ್ಲೂ ಮಾತುಕತೆ ನಡೆಯುತ್ತಿದ್ದು, ಅವರ ಡೇಟ್ಸ್ ಸೇರಿದಂತೆ ಇತರ ವಿಷಯಗಳು ಪಕ್ಕಾ ಆದರೆ ಈ ನಾಲ್ವರಲ್ಲಿ ಒಬ್ಬರು ಬರೋದು ಪಕ್ಕಾ.
ಇನ್ನು, “ಮಫ್ತಿ’ ನಂತರ ಜಯಣ್ಣ, ಮುರಳಿ ನಟನೆಯ ಮತ್ತೂಂದು ಸಿನಿಮಾವನ್ನು ನಿರ್ಮಿಸಲಿದ್ದಾರೆನ್ನಲಾಗಿತ್ತು. ಸದ್ಯಕ್ಕೆ ಆ ಸಿನಿಮಾ ಮುಂದಕ್ಕೆ ಹೋಗಿದ್ದು, ನರ್ತನ್ ನಿರ್ದೇಶನದಲ್ಲಿ ಯಶ್ ಸಿನಿಮಾವನ್ನೂ ಜಯಣ್ಣ ಮಾಡಲಿದ್ದಾರೆ. ಸದ್ಯ ಹರ್ಷ, ನಿಖೀಲ್ ಸಿನಿಮಾದಲ್ಲಿ ಬಿಝಿ ಇರುವುದರಿಂದ “ರಾಣಾ’ ಕೂಡಾ ಮುಂದಕ್ಕೆ ಹೋಗಿದೆ. ಈ ಚಿತ್ರದ ನಿರ್ಮಾಣ ಕೂಡಾ ಜಯಣ್ಣ ಅವರದ್ದೇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhuvanam Gaganam Movie: ಭುವನಂ ವಿತರಣಾ ಹಕ್ಕು ಕೋಟಿ ಬೆಲೆಗೆ ಮಾರಾಟ
State Film Awards: 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ; ಇಲ್ಲಿದೆ ಸಂಪೂರ್ಣ ಪಟ್ಟಿ
ಚೀನಾದ ಸೂಪರ್ ಮಾರ್ಕೆಟ್‌ನಲ್ಲಿ ಡಾ. ರಾಜ್‌ಕುಮಾರ್ ʼಗಂಧದ ಗುಡಿʼ ಹಾಡು: ವಿಡಿಯೋ ವೈರಲ್
Sandalwood: ಥಿಯೇಟರ್, ಓಟಿಟಿ ಬಳಿಕ ಟಿವಿಯಲ್ಲಿ ಬರಲಿದೆ ʼಭೈರತಿ ರಣಗಲ್ʼ: ಯಾವಾಗ, ಎಲ್ಲಿ?
Royal movie: ರಾಯಲ್ ಚಿತ್ರ ವೀಕ್ಷಿಸಿದ ದರ್ಶನ್ ಆ್ಯಂಡ್ ಫ್ಯಾಮಿಲಿ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್