ಸ್ಯಾಂಡಲ್ ವುಡ್ ಗೂ ಇಮ್ತಿಯಾಜ್ ಗೂ, ಕರ್ನಾಟಕದ ರಾಜಕಾರಣಿಗೂ ಏನು ನಂಟು? ಸಂಬರಗಿ ಹೇಳಿದ್ದೇನು
ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದು ಗೆದ್ದಿರುವ ಶಾಸಕರೊಬ್ಬರ ಹುಟ್ಟುಹಬ್ಬದ ಪಾರ್ಟಿಗೆ ಬಾಲಿವುಡ್ ದಂಡು ಬಂದಿತ್ತು
Team Udayavani, Sep 3, 2020, 12:34 PM IST
ಬೆಂಗಳೂರು: ಬಾಲಿವುಡ್ ಗೂ, ಕರ್ನಾಟಕದ ಸ್ಯಾಂಡಲ್ ವುಡ್ ಗೂ ಏನು ಸಂಬಂಧ ಇದೆ ಎಂದು ಗೊತ್ತಾಗಬೇಕಾದರೆ 2017ರಲ್ಲಿ ಮುಂಬೈನಲ್ಲಿ ನಡೆದ ಇಮ್ತಿಯಾಜ್ ಖತ್ರಿಯ ಹುಟ್ಟುಹಬ್ಬದ ಪಾರ್ಟಿಗೆ ಕರ್ನಾಟಕದಿಂದ ಯಾರೆಲ್ಲಾ ಹೋಗಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಿ…ಇದು ಸಾಮಾಜಿಕ ಹೋರಾಟಗಾರ, ಚಿತ್ರ ವಿತರಕ ಪ್ರಶಾಂತ್ ಸಂಬರಗಿ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಆರೋಪದ ಬಗ್ಗೆ ಗುರುವಾರ(ಸೆ.03, 2020) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರರಂಗಕ್ಕೆ ನನ್ನ ಕೊಡುಗೆ ಏನು ಎಂಬುದನ್ನು ಹುಡುಕಿದರೆ ಸಿಗುತ್ತೆ. ನಾನು ಹೀರೋ ಆಗಬೇಕೆಂಬ ಇಚ್ಛೆಯಿಂದ ಕನ್ನಡ ಚಿತ್ರರಂಗಕ್ಕೆ ಬಂದವನು. ಆದರೆ ನಾನಾ ಕಾರಣಗಳಿಂದ ನನಗೆ ಅವಕಾಶ ಸಿಗಲಿಲ್ಲ ಎಂದರು.
ಶಾಸಕರೊಬ್ಬರ ಹುಟ್ಟುಹಬ್ಬಕ್ಕೆ ಖತ್ರಿ ಭೇಟಿ!
ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದು ಗೆದ್ದಿರುವ ಶಾಸಕರೊಬ್ಬರ ಹುಟ್ಟುಹಬ್ಬದ ಪಾರ್ಟಿಗೆ ಬಾಲಿವುಡ್ ದಂಡು ಬಂದಿತ್ತು. ಅಂದು ಇಮ್ತಿಯಾಜ್ ಖತ್ರಿ ಕೂಡಾ ಬಂದಿದ್ದು, ಹುಟ್ಟುಹಬ್ಬದ ಪಾರ್ಟಿ ನಂತರ ಯಾರ, ಯಾರ ಕಾರಿನಲ್ಲಿ ಸುತ್ತಾಡಿದ್ದಾರೆ…ಎಲ್ಲೆಲ್ಲಾ ಹೋಗಿದ್ದಾರೆ ಎಂಬ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸಬೇಕು. ನಾನೊಬ್ಬ ದೇಶಭಕ್ತನಾಗಿ, ದೇಶದ ಒಳಿಗಾಗಿ ಮಾಹಿತಿಯನ್ನಷ್ಟೇ ನೀಡುತ್ತಿದ್ದೇನೆ. ತನಿಖೆ ನಡೆಸಲು ಪೊಲೀಸರಿದ್ದಾರೆ ಎಂದು ಈ ಸಂದರ್ಭದಲ್ಲಿ ಸಂಬರಗಿ ಹೇಳಿದರು.
ಫಿಲ್ಮ್ ಛೇಂಬರ್ ವಿರುದ್ಧ ಆಕ್ರೋಶ:
ಸಾ.ರಾ.ಗೋವಿಂದು ಅವರು ನನ್ನ ಪ್ರಶ್ನೆ ಮಾಡುತ್ತಾರೆ. ನಾನು ಕನ್ನಡ ಚಿತ್ರರಂಗಕ್ಕಾಗಿಯೂ ಕೆಲಸ ಮಾಡಿದ್ದೇನೆ. ಬಾಹುಬಲಿ ಚಿತ್ರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ ಯಾಕೆ? ಬಾಹುಬಲಿ 1 ಚಿತ್ರದ ಬಿಡುಗಡೆಗೆ ಅನುಮತಿ ನೀಡಿದ್ದೀರಿ. ಈಗ ಬಾಹುಬಲಿ 2 ಚಿತ್ರದ ಬಿಡುಗಡೆಗೆ ಅನುಮತಿ ಯಾಕೆ ನೀಡುತ್ತಿಲ್ಲ? ಇದರಿಂದ ನಾನು 5 ಕೋಟಿ ರೂಪಾಯಿ ಕಳೆದುಕೊಂಡಿದ್ದೇನೆ. ಈಗ ಹೇಳುತ್ತಾರೆ…ಸಂಬರಗಿಗೂ ಚಿತ್ರರಂಗಕ್ಕೂ ಏನು ಸಂಬಂಧ ಎಂದು ಪ್ರಶ್ನಿಸುತ್ತಾರೆ. ನಾನು ಫಿಲ್ಮ್ ಚೇಂಬರ್ ಗೆ ಸದಸ್ಯನಾಗಿಲ್ಲ, ಸದಸ್ಯನಾಗೋದು ಇಲ್ಲ ಎಂದು ಹೇಳಿದರು.
ಯಾರೀದು ಇಮ್ತಿಯಾಜ್ ಖತ್ರಿ?
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಾಜಿ ಮ್ಯಾನೇಜರ್ ಶ್ರುತಿ ಮೋದಿ ಅವರನ್ನು ಸಿಬಿಐ ವಿಶೇಷ ತನಿಖಾ ತಂಡ ವಿಚಾರಣೆಗೆ ಒಳಪಡಿಸಿದಾಗ ಹಲವಾರು ಮಾಹಿತಿ ನೀಡಿದ್ದರು. ಆ ಬಳಿಕ ಶ್ರುತಿ ಮೋದಿ ವಕೀಲರು ಸ್ಫೋಟಕ ಸತ್ಯವನ್ನು ಬಯಲುಗೊಳಿಸಿದ್ದರು. ಆ ವ್ಯಕ್ತಿ ಬೇರೆ ಯಾರು ಅಲ್ಲ ಮುಂಬೈ ಮೂಲದ ಬಿಲ್ಡರ್ ಪುತ್ರ, ಇಮ್ತಿಯಾಜ್ ಖತ್ರಿ ಸುಶಾಂತ್ ಸಿಂಗ್ ಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎಂದು ತಿಳಿಸಿದ್ದರು!
ಈತ ಬೇರೆ ಯಾರು ಅಲ್ಲ ಪ್ರಶಾಂತ್ ಸಂಬರಗಿ ಆರೋಪಿಸಿದ್ದ ಇಮ್ತಿಯಾಜ್ ಖತ್ರಿ. ಬಾಲಿವುಡ್ ಗೂ, ಸ್ಯಾಂಡಲ್ ವುಡ್ ಗೂ ಏನು ಸಂಬಂಧ ಎಂಬ ಬಗ್ಗೆ ಇನ್ನಷ್ಟು ತನಿಖೆಯಿಂದ ಹೊರ ಬರಬೇಕಾಗಿದೆ. ಇಮ್ತಿಯಾಜ್ ಖತ್ರಿ ಬಾಲಿವುಡ್ ನ ಗಣ್ಯ ನಟರಿಗೆ ಡ್ರಗ್ ಸರಬರಾಜು ಮಾಡುವ ಪ್ರಮುಖ ದಂಧೆಕೋರ! ಅಷ್ಟೇ ಅಲ್ಲ ರಾಜಕೀಯ ಕುಟುಂಬದ ಜತೆಯೂ ನಂಟು ಹೊಂದಿರುವ ಖತ್ರಿ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾನೆ ಎಂದು ದೂರಿದ್ದಾರೆ.
ಬಾಲಿವುಡ್ ನ ಪ್ರತಿಷ್ಠಿತರಿಗೆ ಡ್ರಗ್ಸ್ ಸಪ್ಲೈ ಮಾಡುವ ಇಮ್ತಿಯಾಜ್ ಖತ್ರಿ ಕೇವಲ ಬಾಲಿವುಡ್ ನಲ್ಲಿ ಮಾತ್ರ ಪ್ರಭಾವಶಾಲಿ ಅಲ್ಲ, ಸಚಿವಾಲಯದ ಹಾಗೂ ಸಚಿವರ ಮಟ್ಟದಲ್ಲಿಯೂ ಪ್ರಭಾವ ಬೆಳೆಸಿಕೊಂಡಿರುವುದಾಗಿ ವಕೀಲರು ಆರೋಪಿಸಿದ್ದಾರೆ. ಎನ್ ಸಿಪಿ ಜತೆ ಖತ್ರಿ ನಿಕಟ ಸಂಬಂಧ ಹೊಂದಿದ್ದಾನೆ.
ಬಾಲಿವುಡ್ ನಲ್ಲಿ ಕೆಲಸ ಮಾಡುವ ಹಲವು ಜನರನ್ನು ನಾನು ಭೇಟಿಯಾಗಿದ್ದೇನೆ. ಮತ್ತು ಅವರಲ್ಲಿ ಬಹುತೇಕರು ನಿರಂತರವಾಗಿ ಡ್ರಗ್ಸ್ ಸೇವಿಸುತ್ತಿರುವುದನ್ನು ಕಂಡಿದ್ದೇನೆ ಎಂದು ವಕೀಲ ರಸ್ತೋಗಿ ತಿಳಿಸಿದ್ದಾರೆ.
ಇಮ್ತಿಯಾಜ್ ಖತ್ರಿ ಮೂಲತಃ ಬಿಲ್ಡರ್ ಆಗಿದ್ದು, ಈತ ಐಎನ್ ಕೆ ಇನ್ ಫ್ರಾಸ್ಟಕ್ಚರ್ ಒಡೆತನ ಹೊಂದಿದ್ದಾನೆ. ಸಿನಿಮಾ ನಿರ್ಮಾಪಕ ಕೂಡಾ ಹೌದು…ವಿವಿಐಪಿ ಯೂನಿರ್ವಸಲ್ ಎಂಟರ್ ಟೈನ್ ಮೆಂಟ್ ಕಂಪನಿ ನಡೆಸುತ್ತಿದ್ದಾನರೆ. 2017ರಲ್ಲಿ ಮರಾಠಿ ಸಿನಿಮಾ ಹೃದಯಂತರ್ ಅನ್ನು ನಿರ್ಮಿಸಿದ್ದು, ವಿಕ್ರಮ್ ಫಾಂಡಿಸ್ ಸಿನಿಮಾದ ನಿರ್ದೇಶಕರಾಗಿದ್ದರು. ಸುಶ್ಮಿತಾ ಸೇನ್ ಜತೆಗಿನ ಸಂಬಂಧದ ಬಗ್ಗೆ ಹಲವಾರು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮನೀಶ್ ಮಲೋತ್ರಾ, ನಟ ಸೂರಜ್ ಪಾಂಚೋಲಿ ಸೇರಿದಂತೆ ಸ್ಟಾರ್ ನಟರ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಖತ್ರಿ ಪಾಲ್ಗೊಳ್ಳುತ್ತಾನೆ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.