ಅಪ್ಪು ನೆನಪಲ್ಲಿ ‘ಬಾಂಡ್ ರವಿ’; ಪ್ರಮೋದ್ ಚಿತ್ರದ ಟೀಸರ್ ಗೆ ಮೆಚ್ಚುಗೆ
Team Udayavani, Sep 27, 2022, 12:04 PM IST
“ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಈ ಹಿಂದೆ ನನ್ನ ಸಿನಿಮಾವನ್ನು ನೋಡಿ ತುಂಬ ಖುಷಿ ಪಟ್ಟಿದ್ದರು. ಸ್ವತಃ ಅವರೇ ಪೋನ್ ಮಾಡಿ ನನ್ನ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಶೀಘ್ರದಲ್ಲಿಯೇ ಭೇಟಿಯಾಗೋಣ ಎಂದೂ ಹೇಳಿದ್ದರು. ಆದರೆ, ಅಷ್ಟರಲ್ಲಿ ವಿಧಿಯಾಟವೇ ಬೇರೆಯಾಗಿತ್ತು. ಅವರನ್ನು ಭೇಟಿಯಾಗುವಷ್ಟರಲ್ಲಿ ಅವರು ನಮ್ಮಿಂದ ದೂರವಾದರು. ಈಗ ಅವರ ನೆನಪಿನಲ್ಲಿಯೇ, ಅವರದ್ದೇ ಪಾತ್ರದ ಹೆಸರನ್ನು ನಮ್ಮ ಸಿನಿಮಾದ ಟೈಟಲ್ ಆಗಿಟ್ಟುಕೊಂಡು ತೆರೆಗೆ ತರುತ್ತಿದ್ದೇವೆ. ಪುನೀತ್ ರಾಜಕುಮಾರ್ ಅವರಿದ್ದರೆ, ಖಂಡಿತವಾಗಿಯೂ ನಮ್ಮ ಪ್ರಯತ್ನವನ್ನು ನೋಡಿ ಬೆನ್ನುತಟ್ಟುತ್ತಿದ್ದರು’ ಹೀಗೆ ಹೇಳುತ್ತ “ಬಾಂಡ್ ರವಿ’ ಸಿನಿಮಾದ ಬಗ್ಗೆ ಮಾತಿಗಿಳಿದರು ನಟ ಪ್ರಮೋದ್.
“ಬಾಂಡ್ ರವಿ’ ಸಿನಿಮಾದ ಟೈಟಲ್‌ಗೆ ಸ್ಫೂರ್ತಿಯಾಗಿದ್ದು ಪುನೀತ್ ರಾಜಕುಮಾರ್ ಅಭಿನಯದ “ಅಣ್ಣಾಬಾಂಡ್’ ಸಿನಿಮಾದಲ್ಲಿ ಬರುವ “ಬಾಂಡ್ ರವಿ’ ಪಾತ್ರವಂತೆ. ಇತ್ತೀಚೆಗಷ್ಟೇ “ಬಾಂಡ್ ರವಿ’ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಿದ್ದು, ಇದೇ ವೇಳೆ ಪುನೀತ್ ಅವರನ್ನು ನೆನಪು ಮಾಡಿಕೊಂಡ ನಟ ಪ್ರಮೋದ್,
“ಬಾಂಡ್ ರವಿ’ ಅಂದ್ರೆ, ಎಲ್ಲರಿಗೂ ಪುನೀತ್ ರಾಜಕುಮಾರ್ ನೆನಪಾಗುತ್ತಾರೆ. ನಮ್ಮ ಸಿನಿಮಾದ ಟೈಟಲ್‌ಗೂ ಅವರ ಪಾತ್ರವೇ ಸ್ಫೂರ್ತಿ. ನಮ್ಮ ಸಿನಿಮಾಕ್ಕೂ ಅವರ ಹಾರೈಕೆ, ಆಶೀರ್ವಾದ ಇರುತ್ತದೆ’ ಎಂದು ಪುನೀತ್ ರಾಜಕುಮಾರ್ ಮತ್ತು “ಬಾಂಡ್ ರವಿ’ ಬಾಂಡಿಂಗ್ ಬಗ್ಗೆ ಮಾತನಾಡಿದರು.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಪಿಎಫ್ಐ- ಎಸ್ ಡಿಪಿಐ ವಿರುದ್ಧ ಎನ್ಐಎ ಸಮರ: ರಾಜ್ಯದಲ್ಲಿ 75 ಮಂದಿ ವಶಕ್ಕೆ
“ಈ ಸಿನಿಮಾದ ಕಥೆ ಎಲ್ಲರಿಗೂ ಕನೆಕ್ಟ್ ಆಗುವಂತಿದೆ. “ಬಾಂಡ್ ರವಿ’ ಸಿನಿಮಾದ ಜೊತೆ ಎಲ್ಲರಿಗೂ ಒಂದು ಬಾಂಡಿಂಗ್ ಇದೆ. ಸಿನಿಮಾ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಮೇಲ್ನೋಟಕ್ಕೆ ಮಾಸ್ ಸಿನಿಮಾದಂತೆ ಕಂಡರೂ, ಒಳಗೆ ಬೇರೆಯದ್ದೇ ವಿಷಯವಿದೆ. ಆದಷ್ಟು ಬೇಗ ಜನರಿಗೆ ಸಿನಿಮಾ ತೋರಿಸಬೇಕೆಂಬ ಉತ್ಸಾಹದಲ್ಲಿದ್ದೇವೆ’ ಎಂಬುದು “ಬಾಂಡ್ ರವಿ’ ಬಳಗದ ಮಾತು.
“ಬಾಂಡ್ ರವಿ’ ಸಿನಿಮಾದಲ್ಲಿ ನಾಯಕ ಪ್ರಮೋದ್ ಅವರಿಗೆ ನಾಯಕಿಯಾಗಿ ಕಾಜಲ್ ಕುಂದರ್ ಜೋಡಿಯಾಗಿದ್ದಾರೆ. ಉಳಿದಂತೆ ಪ್ರಸನ್ನ, ಗೋವಿಂದೇ ಗೌಡ, ವಿಜಯ ಚೆಂಡೂರ್, ಪವನ್, ಮಿಮಿಕ್ರಿ ಗೋಪಿ, ಧರ್ಮ, ಸಂತೂ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಪ್ರಜ್ವಲ್ ಎಸ್. ಪಿ ಕಥೆ, ಚಿತ್ರಕಥೆ ಬರೆದು “ಬಾಂಡ್ ರವಿ’ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದು, “ಲೈಫ್ ಲೈನ್ ಫಿಲಂಸ್’ ಬ್ಯಾನರಿನಲ್ಲಿ ನರಸಿಂಹ ಮೂರ್ತಿ ವಿ. ನಿರ್ಮಿಸಿರುವ ಈ ಸಿನಿಮಾಕ್ಕೆ ಮಲ್ಲಿಕಾರ್ಜುನ ಕಾಶಿ ಮತ್ತು ಕ್ಸೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣವಿದೆ. ಚಿತ್ರಕ್ಕೆ ಕೆ. ಎಸ್ ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಸಂಕಲನವಿದೆ.
“ಬಾಂಡ್ ರವಿ’ ಸಿನಿಮಾದ ಐದು ಹಾಡುಗಳಿಗೆ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದು, ಸೋನು ನಿಗಂ, ಶ್ರೇಯಾ ಘೋಷಾಲ್, ವಿಜಯ ಪ್ರಕಾಶ್ ಮೊದಲಾದವರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಜಯಂತ ಕಾಯ್ಕಿಣಿ, ವಿ. ನಾಗೇಂದ್ರ ಪ್ರಸಾದ್, ಚಿನ್ಮಯ್ ಭಾವಿಕೆರೆ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಬಿ. ಧನಂಜಯ್ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ
Thalapathy69: ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟನೆ
Bhairathi Ranagal: ಭೈರತಿಗೆ ಸ್ಯಾಂಡಲ್‌ವುಡ್ ಆರತಿ
BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ
Sandalwood: ಪ್ಯಾನ್ ಇಂಡಿಯಾ ʼಪುಷ್ಪʼ ಜೊತೆ ರಿಲೀಸ್ ಆಗಲಿದೆ ಕನ್ನಡದ ʼಭಗತ್ʼ
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.