ನಗೆಯ ನಡುವೆ ಬೇಸರ!


Team Udayavani, Sep 7, 2017, 10:38 AM IST

Jack-Manju.jpg

“ಮುಗುಳು ನಗೆ’ ಚಿತ್ರತಂಡವು ಖುಷಿಯಾಗಿದೆ. ಅದಕ್ಕೆ ಕಾರಣ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ. ಎಲ್ಲಾ ಕಡೆಯಿಂದ ಚಿತ್ರಕ್ಕೆ ಸಿಗುತ್ತಿರುವ ಬಗ್ಗೆ ಚಿತ್ರತಂಡವು ಖುಷಿಯಾಗಿದೆ. ಅದೇ ನೆಪದಲ್ಲಿ, ಸಂತೋಕೂಟ ಮಾಡಿ ಸಂತೋಷ ಹಂಚಿಕೊಂಡಿದೆ. ಈ ಸಂದರ್ಭದಲ್ಲಿ ಗಣೇಶ್‌, ಯೋಗರಾಜ್‌ ಭಟ್‌, ನಿಖೀತಾ ನಾರಾಯಣ್‌, ಸಯ್ಯದ್‌ ಸಲಾಂ ಸೇರಿದಂತೆ ಎಲ್ಲರೂ ಖುಷಿಯಿಂದ ಮಾತನಾಡಿದರು.

ಬೇಸರದಿಂದ ಮಾತನಾಡಿದ್ದು ವಿತರಕ ಜಾಕ್‌ ಮಂಜು ಒಬ್ಬರೇ. ಇಷ್ಟಕ್ಕೂ ಜಾಕ್‌ ಮಂಜುಗೆ ಯಾಕೆ ಮತ್ತು ಯಾರ ಮೇಲೆ ಬೇಸರ ಎಂದರೆ ಅದಕ್ಕೆ ಉತ್ತರ ಇಲ್ಲಿದೆ. ಜಾಕ್‌ ಮಂಜು ಬೇಸರ ಬುಕ್‌ ಮೈ ಶೋ ವಿರುದ್ಧ. ಅದಕ್ಕೆ ಕಾರಣ, “ಮುಗುಳು ನಗೆ’ ಚಿತ್ರದ ಬಗ್ಗೆ ಹಾಕುತ್ತಿರುವ ಸ್ಟೇಟಸ್‌. “ಬುಕ್‌ ಮೈ ಶೋಗೆ ಕನ್ನಡ ಸಿನಿಮಾದವರು ಲಕ್ಷಗಟ್ಟಲೆ ಜಾಹಿರಾತು ಕೊಡಬೇಕು. ಕೊಟ್ಟ ಸಿನಿಮಾಗಳನ್ನು ಎತ್ತುತ್ತಾರೆ.

ಇಲ್ಲದಿದ್ದರೆ, ಅಪಪ್ರಚಾರ ಮಾಡುತ್ತಾರೆ. ಸಿನಿಮಾ ನಿರ್ಮಾಪಕರು ಅವರಿಗೆ ಜಾಹಿರಾತು ಕೊಡದೇ ಇದ್ದಲ್ಲಿ, ಅವರೇ, ಒಂದಷ್ಟು ಮಂದಿಯಿಂದ ವೋಟ್‌ ಮಾಡಿಸುತ್ತಾರೆ. ಅದರಲ್ಲಿ ನೆಗೆಟಿವ್‌ ವೋಟ್‌ಗಳೇ ಹೆಚ್ಚಿರುತ್ತವೆ. ಉಳಿದಂತೆ ಮೊದ ಮೊದಲು ಮೂರು, ನಾಲ್ಕು ಸ್ಟಾರ್‌ಗಳಿರುತ್ತವೆ. ಆಮೇಲೆ, ಒಂದು, ಅರ್ಧ ಸ್ಟಾರ್‌ಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಆ ಚಿತ್ರದ ಬಗ್ಗೆ ಜನರಿಗೆ ತಪ್ಪು ಪ್ರಚಾರ ತಲುಪುತ್ತದೆ.

ಸಿನಿಮಾ ಬಗ್ಗೆ ನೆಗೆಟಿವ್‌ ಅಂಶಗಳು ಜನರನ್ನು ತಲುಪಿದರೆ, ಯಾರೂ ಆ ಸಿನಿಮಾ ವೀಕ್ಷಣೆಗೆ ಬರುವುದಿಲ್ಲ. ಅಷ್ಟೇ ಅಲ್ಲ, ಅಲ್ಲಿ ಪ್ರತಿ ಟಿಕೆಟ್‌ಗೆ 40 ರೂಪಾಯಿಗಳನ್ನು ಹೆಚ್ಚು ಪಡೆಯಲಾಗುತ್ತದೆ. ಆ ಹಣದಲ್ಲಿ ಥಿಯೇಟರ್‌ಗೆ ಅರ್ಧ ಮತ್ತು ಆ್ಯಪ್‌ ನಡೆಸುವವರಿಗೆ ಅರ್ಧ ಹೋಗುತ್ತೆ. ನಿರ್ಮಾಪಕರಿಗೆ ಅದರಿಂದ ಏನೂ ಲಾಭ ಇಲ್ಲ. ಕೇವಲ ಜಾಹಿರಾತು ಹಾಕಿಸಿಲ್ಲ ಎಂಬ ಕಾರಣಕ್ಕೆ ಇಷ್ಟೆಲ್ಲಾ ಮಾಡಲಾಗುತ್ತಿದೆ. ಇದು “ಮುಗುಳು ನಗೆ’ ಸಿನಿಮಾ ವಿಚಾರದಲ್ಲೂ ಆಗಿದೆ’ ಎಂಬುದು ಅವರ ಆಕ್ರೋಶ.

ಇಷ್ಟಕ್ಕೇ ಮುಗಿಯುವುದಿಲ್ಲ. “ಒಂದು ವೇಳೆ ಕನ್ನಡ ಸಿನಿಮಾಗಳ ಜಾಹಿರಾತು ಕೊಟ್ಟರೆ, ಸೋಮವಾರ, ಮಂಗಳವಾರ ಮತ್ತು ಬುಧವಾರ ಆ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು, ವಿಮರ್ಶೆಗಳು ಬುಕ್‌ಮೈ ಶೋನಲ್ಲಿರುತ್ತವೆ. ಆದರೆ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಬೇರೆ ಭಾಷೆಯ ಸಿನಿಮಾಗಳಿಗೆ ಹೆಚ್ಚು ಆದ್ಯತೆ ಕೊಡಲಾಗುತ್ತಿದೆ. ಆಸನಗಳು ಖಾಲಿ ಇದ್ದರೂ, ರೆಡ್‌ಮಾರ್ಕ್‌ ತೋರಿಸಲಾಗುತ್ತೆ.

ಅದರಿಂದ ಯಾವುದೇ ನಿರ್ಮಾಪಕರಿಗೂ ಲಾಭ ಇಲ್ಲ’ ಎಂಬುದು ಅವರ ಅಭಿಪ್ರಾಯ. ಈ ಕುರಿತು ಜಾಕ್‌ ಮಂಜು, ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಜಾಕ್‌ ಮಂಜು ಜತೆಗೆ ಒಂದಷ್ಟು ನಿರ್ಮಾಪಕರು ಸಹ ದನಿಗೂಡಿಸಿದ್ದಾರೆ. ಹಾಗಾಗಿ, ನಿರ್ಮಾಪಕರ ಸಂಘದಿಂದಲೇ ಒಂದು ಹೊಸ ಆ್ಯಪ್‌ ಮಾಡುವ ಕುರಿತು ಪ್ರಕ್ರಿಯೆ ಶುರುವಾಗಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.