ಮಜವಾದ ಅನುಭವ ತುಂಬಲಿದೆ ಬಡ್ಡಿಮಗನ್ ಲೈಫು!
Team Udayavani, Dec 23, 2019, 6:26 PM IST
ಗ್ರೀನ್ ಚಿಲ್ಲಿ ಎಂಟರ್‌ಟೈನ್ಮೆಂಟ್ ಲಾಂಛನದಲ್ಲಿ ಪವನ್ ನಿರ್ಮಾಣ ಮಾಡಿರುವ ಬಡ್ಡಿಮಗನ್ ಲೈಫು ಚಿತ್ರ ಈ ವಾರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಗೊಳ್ಳುತ್ತಿದೆ. ಸಚಿನ್ ಶ್ರೀಧರ್ ಮತ್ತು ಐಶ್ವರ್ಯಾ ರಾವ್ ನಾಯಕ ನಾಯಕಿಯರಾಗಿ ನಟಿಸಿರುವ ಈ ಚಿತ್ರ ಹಳ್ಳಿಗಾಡಿನ ಜೀವನದಲ್ಲಿ ಹಾಸು ಹೊಕ್ಕಾಗಿರುವಂಥಾ ಸೊಗಸಾದ ಕಥೆಯೊಂದನ್ನು ಒಳಗೊಂಡಿದೆ ಎಂಬ ವಿಚಾರ ಈಗಾಗಲೇ ಪಕ್ಕಾ ಆಗಿದೆ. ಏನ್ ಚಂದಾನೋ ತಕ್ಕೋ ಎಂಬ ಹಾಡಿನ ಮೂಲಕವೇ ಮುನ್ನೆಲೆಗೆ ಬಂದಿದ್ದ ಈ ಚಿತ್ರ ಮೈಸೂರು ಭಾಗದ ಕಾಲ್ಪನಿಕ ಹಳ್ಳಿಯೊಂದರಲ್ಲಿ ನಡೆಯುವ ಮಜವಾದ ಕಥೆಯನ್ನೊಳಗೊಂಡಿದೆ.
ಪವನ್ ಮತ್ತು ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಮನೋರಂಜನೆಯನ್ನೇ ಮೂಲ ಧ್ಯೇಯವಾಗಿಸಿಕೊಂಡು ರೂಪುಗೊಂಡಿದೆ. ಆರಂಭದಿಂದ ಕಡೆಯವರೆಗೂ ಭರ್ಜರಿ ಮನರಂಜನೆ ನೀಡುವಂಥಾ ಕಂಟೆಂಟಿನೊಂದಿಗೇ ಬಡ್ಡಿಮಗನ್ ಲೈಫನ್ನು ಚಿತ್ರೀಕರಿಸಲಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರೋ ಟ್ರೇಲರ್‌ನೊಂದಿಗೆ ಈ ಚಿತ್ರ ಎಲ್ಲ ವರ್ಗಗಳ ಪ್ರೇಕ್ಷಕರನ್ನೂ ಬಹುವಾಗಿಯೇ ಸೆಳೆದುಕೊಂಡಿದೆ. ಪ್ರೇಕ್ಷಕ ವಲಯದಲ್ಲಿ ಯಾವುದೇ ಸಿನಿಮಾ ಇದರಲ್ಲೇನೋ ಇದೆ ಎಂಬಂಥಾ ಭಾವವನ್ನು ಹುಟ್ಟು ಹಾಕೋದೇ ಗೆಲುವಿನ ಮೊದಲ ಹೆಜ್ಜೆ. ಅದನ್ನು ಈ ಚಿತ್ರ ಸಲೀಸಾಗಿಯೇ ಸಾಧ್ಯವಾಗಿಸಿಕೊಂಡಿದೆ.
ಈ ಚಿತ್ರ ಸುತ್ತೋದೇ ಬಡ್ಡಿ ಸೀನಪ್ಪ ಎಂಬ ಪಾತ್ರದ ಸುತ್ತ. ಇದು ಊರಿಗೆಲ್ಲ ಬಡ್ಡಿ ಕೊಟ್ಟು, ಭಯಾನಕವಾಗಿಯೇ ವಸೂಲಿ ಮಾಡುತ್ತಾ ಊರವರೆಲ್ಲರ ಹಿಡಿ ಶಾಪಕ್ಕೆ ತುತ್ತಾಗುವಂಥ ಪಾತ್ರ. ಇಂಥಾ ಬಡ್ಡಿ ಸೀನಪ್ಪನ ಮಗಳು ಹುಡುಗನೊಬ್ಬನೊಂದಿಗೆ ಲವ್ವಲ್ಲಿ ಬಿದ್ದು ಓಡಿ ಹೋದಾಗ ಆ ಊರ ಮಂದಿ ಏನೇನೆಲ್ಲ ಮಾತಾಡಿಕೊಳ್ಳುತ್ತಾರೆಂಬುದರ ಸುತ್ತಾ ಈ ಕಥೆ ಜರುಗುತ್ತದೆ. ಆದರೆ ಈ ಕಥಾ ಎಳೆಯಷ್ಟು ಸಿನಿಮಾ ಸಲೀಸಾಗಿಲ್ಲ. ಇಲ್ಲಿನ ಕಥೆಗೆ ಹಲವಾರು ಟಿಸಿಲುಗಳಿದ್ದಾವೆ. ಬಲ ರಾಜವಾಡಿ ಬಡ್ಡಿ ಸೀನಪ್ಪನಾಗಿ ವಿಜೃಂಭಿಸಿರುವ ಈ ಸಿನಿಮಾದಲ್ಲಿ ಆರಂಭದಿಂದ ಕಡೇಯವರೆಗೂ ಭರ್ಜರಿ ಮನರಂಜನಾತ್ಮಕ ಅಂಶಗಳೇ ಪ್ರೇಕ್ಷಕರನ್ನು ಮುದಗೊಳಿಸಲಿದ್ದಾವೆ. ಇದೆಲ್ಲವೂ ಈ ವಾರವೇ ನಿಮ್ಮೆಲ್ಲರೆದುರು ತೆರೆದುಕೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.