‘ಬೈಟು ಲವ್’ ಮಾಸ್ ಟೀಸರ್ ಬಂತು
Team Udayavani, Sep 9, 2021, 12:08 PM IST
“ಬೈ ಟು ಲವ್’ ಚಿತ್ರತಂಡ ಕೂಡಾ ತಮ್ಮ ನಾಯಕ ನಟನ ಬರ್ತ್ಡೇಗೆ ಸರ್ಪ್ರೈಸ್ ನೀಡಲು ಸಿದ್ಧವಾಗಿದ್ದ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಸರ್ಪ್ರೈಸ್ ರಿಲೀಸ್ ಆಗಿದೆ. ಹೌದು,ಕೆವಿಎನ್ ಪ್ರೊಡಕ್ಷನ್ಸ್ನಡಿ ನಿರ್ಮಾಣವಾಗುತ್ತಿರುವ “ಬೈ ಟು ಲವ್’ ಚಿತ್ರದ ಟೀಸರ್ ಬುಧವಾರ ಬಿಡುಗಡೆಯಾಗಿದೆ.
ಅದಕ್ಕೆಕಾರಣ ನಾಯಕ ಧನ್ವೀರ್ ಹುಟ್ಟುಹಬ್ಬ. ಸೆ.08 ಧನ್ವೀರ್ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಚಿತ್ರತಂಡ ವಿಶೇಷವಾದ ಗಿಫ್ಟ್ವೊಂದನ್ನು ನೀಡಿದೆ. ಮಾಸ್ ಡೈಲಾಗ್ನೊಂದಿಗೆ ಬಿಡುಗಡೆಯಾಗಿರುವ ಟೀಸರ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನುಕೆವಿಎನ್ ಬ್ಯಾನರ್ ನಿರ್ಮಿಸುತ್ತಿದೆ.
ಇದನ್ನೂ ಓದಿ:‘’ಮನಿ ಹೈಸ್ಟ್’’ ಜಗತ್ತನ್ನೇ ದೋಚಿಬಿಟ್ಟ ಖದೀಮರ ಕತೆ…!
ಮೊದಲ ಚಿತ್ರದಲ್ಲಿ ಮಾಸ್ ಲುಕ್ನಲ್ಲಿಕಾಣಿಸಿಕೊಂಡಿರುವ ಧನ್ವೀರ್ ಈ ಚಿತ್ರದಲ್ಲಿ ಲವರ್ ಬಾಯ್ ಲುಕ್ನಲ್ಲಿಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫಸ್ಟ್ಲುಕ್ ಎಲ್ಲರ ಮೆಚ್ಚುಗೆ ಪಡೆದಿದೆ. ಸುಮಾರು 70 ದಿನಗಳಿಗೂ ಹೆಚ್ಚುಕಾಲ ಚಿತ್ರೀಕರಣವಾಗಿದ್ದು, ಮಾತಿನ ಭಾಗದ ಚಿತ್ರೀಕರಣ ಪೂರ್ಣವಾಗಿದೆ. ಚಿತ್ರದಲ್ಲಿ ಧನ್ವೀರ್ಗೆ ಜೋಡಿಯಾಗಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಕೆವಿಎನ್ ನಿರ್ಮಾಣ ಸಂಸ್ಥೆಯಡಿ “ಸಖತ್’, “ಬೈ ಟು ಲವ್’, ನಿಖೀಲ್ ಅಭಿನಯದ ಒಂದು ಚಿತ್ರ ಹಾಗೂ ಪ್ರೇಮ್ ಹಾಗೂ ಧ್ರುವಕಾಂಬಿನೇಶನ್ನ ಸಿನಿಮಾಗಳಿವೆ. ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಯೋಗಾನಂದ್ ಸಂಭಾಷಣೆ ಇದ್ದು, ಹರಿ ಸಂತೋಷ್ ನಿರ್ದೇಶಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.