Cannes 2024: ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪಡೆದ ಮೈಸೂರಿನ ಚಿದಾನಂದ ಎಸ್ ನಾಯಕ್
Team Udayavani, May 24, 2024, 12:18 PM IST
ಕ್ಯಾನೆಸ್: ಮೈಸೂರು ಮೂಲದ ಫಿಲ್ಮ್ ಮೇಕರ್ ಚಿದಾನಂದ ಎಸ್ ನಾಯಕ್ ಅವರ ‘ಸನ್ ಫ್ಲವರ್ಸ್ ವರ್ ದಿ ಫರ್ಸ್ಟ್ ಒನ್ಸ್ ಟು ನೋ’ (Sunflowers Were the First Ones to Know) ಕಿರುಚಿತ್ರವು ಕ್ಯಾನೆಸ್ 2024 ರಲ್ಲಿ ಅತ್ಯುತ್ತಮ ಕಿರುಚಿತ್ರ ಲಾ ಸಿನೆಫ್‌ನ ಮೊದಲ ಬಹುಮಾನವನ್ನು ಗೆದ್ದುಕೊಂಡಿತು.
ಮಾನ್ಸಿ ಮಹೇಶ್ವರಿ ಅವರ ‘ಬನ್ನಿಹುಡ್’ ಅದೇ ವಿಭಾಗದಲ್ಲಿ ಮೂರನೇ ಬಹುಮಾನವನ್ನು ಗೆದ್ದುಕೊಂಡಿತು. ‘ಬನ್ನಿಹುಡ್’ ಯುಕೆ ಚಿತ್ರವಾಗಿದ್ದರೆ, ಇದನ್ನು ಮೀರತ್‌ನ ಭಾರತೀಯರು ನಿರ್ಮಿಸಿದ್ದಾರೆ. ಲಾ ಸಿನೆಫ್ ಪ್ರಶಸ್ತಿಗಳನ್ನು ಮೇ 23 ರಂದು ಘೋಷಿಸಲಾಯಿತು.
ಕ್ಯಾನೆಸ್ ಮೊದಲ ಬಹುಮಾನಕ್ಕಾಗಿ 15,000 ಯೂರೋಗಳನ್ನು ಮತ್ತು ಎರಡನೇ ಮತ್ತು ಮೂರನೇ ಬಹುಮಾನಗಳಿಗೆ ಕ್ರಮವಾಗಿ 11,250 ಯುರೋಗಳು ಮತ್ತು 7,500 ಯುರೋಗಳ ಬಹುಮಾನ ನೀಡುತ್ತದೆ.
ಮೈಸೂರಿನ ವೈದ್ಯ-ಫಿಲ್ಮ್ ಮೇಕರ್ ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ದೂರದರ್ಶನ ವಿಭಾಗದಲ್ಲಿ ತಮ್ಮ ಒಂದು ವರ್ಷದ ಕೋರ್ಸ್‌ನ ಕೊನೆಯಲ್ಲಿ ಈ ಕಿರುಚಿತ್ರ ನಿರ್ಮಿಸಿದ್ದಾರೆ.
ಎಫ್‌ಟಿಐಐ ವಿದ್ಯಾರ್ಥಿ ಚಿದಾನಂದ ಎಸ್ ನಾಯಕ್ ಅವರ ಚಿತ್ರವು 17 ಇತರ ಚಲನಚಿತ್ರಗಳಲ್ಲಿ ಮೊದಲ ಬಹುಮಾನವನ್ನು ಗಳಿಸಿತು.
Many congratulations @Chidanandasnaik for winning the La Cinef Award for Best Short Film at Cannes for ‘Sunflowers Were the First Ones to Know’!
Proud to see you take Kannada folklore to the global stage and set new benchmarks for Indian cinema! pic.twitter.com/gi072JMCFK— Yash (@TheNameIsYash) May 24, 2024
Sunflowers Were the First Ones to Know ಚಿತ್ರವು ಹುಂಜವನ್ನು ಕದಿಯುವ ಮುದುಕಿಯ ಕುರಿತಾದ ಕನ್ನಡ ಜಾನಪದ ಕಥೆಯನ್ನು ಆಧರಿಸಿದೆ.
ಪ್ರಶಸ್ತಿ ಪಡೆದ ಚಲನಚಿತ್ರಗಳನ್ನು ಜೂನ್ 3 ರಂದು ಸಿನಿಮಾ ಡು ಪ್ಯಾಂಥಿಯಾನ್‌ನಲ್ಲಿ ಮತ್ತು ಜೂನ್ 4 ರಂದು MK2 ಕ್ವಾಯ್ ಡಿ ಸೀನ್‌ನಲ್ಲಿ ಪ್ರದರ್ಶಿಸಲಾಗುತ್ತದೆ.
ಕ್ಯಾನೆಸ್ ನಲ್ಲಿ ಮೊದಲ ಬಹುಮಾನ ಪಡೆದ ಭಾರತೀಯರಲ್ಲಿ ಐದು ವರ್ಷಗಳಲ್ಲಿ ಚಿದಾನಂದ ಅವರು ಎರಡನೆಯವರು. 2020 ರಲ್ಲಿ, ಎಫ್‌ಟಿಐಐನ ಅಶ್ಮಿತಾ ಗುಹಾ ನಿಯೋಗಿ ಅವರ “ಕ್ಯಾಟ್‌ಡಾಗ್” ಚಿತ್ರಕ್ಕಾಗಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.