Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್ʼ
Team Udayavani, May 6, 2024, 2:34 PM IST
ಬೆಂಗಳೂರು: ಇತ್ತೀಚೆಗೆ ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರು ಥಿಯೇಟರ್ ನತ್ತ ಬರುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸ್ಟಾರ್ ನಟರ ಸಿನಿಮಾಗಳನ್ನು ನೋಡಲು ಒಂದಷ್ಟು ಜನ ಬರುತ್ತಾರೆ ವಿನಃ ಹೊಸಬರ ಸಿನಿಮಾಗಳು ಬಂದರೆ ಅಲ್ಲಿ ಬೆರಳಣಿಕೆಯಷ್ಟು ಜನ ಮಾತ್ರ ಸಿನಿಮಾ ನೋಡಲು ಬರುತ್ತಾರೆ. ಆ ಕಾರಣದಿಂದ ಬೆಂಗಳೂರಿನ ಅನೇಕ ಥಿಯೇಟರ್ ಬಾಗಿಲು ಮುಚ್ಚಿವೆ.
ಇದೀಗ ಈ ಸಾಲಿಗೆ ಮತ್ತೊಂದು ಥಿಯೇಟರ್ ಸೇರಿದೆ. ಬೆಂಗಳೂರಿನ ಸ್ಯಾಂಕಿ ರಸ್ತೆಯ, ಪ್ಯಾಲೇಸ್ ಗುಟ್ಟಳ್ಳಿಯಲ್ಲಿರುವ ‘ಕಾವೇರಿ’ ಚಿತ್ರಮಂದಿರ ಇನ್ಮುಂದೆ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಲಿದೆ ಎಂದು ವರದಿಯಾಗಿದೆ.
ʼಕಾವೇರಿʼ ಚಿತ್ರಮಂದಿರಕ್ಕೆ ಕಳೆದ ಜನವರಿ 11ಕ್ಕೆ ಭರ್ತಿ 50 ವರ್ಷ ತುಂಬಿತ್ತು. ಈ ಸಂಭ್ರಮದಲ್ಲಿ ಗೋಲ್ಡನ್ ಜ್ಯುಬಿಲಿ ಆಚರಣೆಯನ್ನು ಮಾಡಲಾಗಿತ್ತು.
ಹಳೆಯ ಥಿಯೇಟರ್ ಗಳಲ್ಲಿ ಒಂದು: ಕಾವೇರಿ ಥಿಯೇಟರ್ ಬೆಂಗಳೂರಿನ ಹಳೆಯ ಥಿಯೇಟರ್ ಗಳಲ್ಲಿ ಒಂದು. 1974, ಜನವರಿ 11ರಂದು ಈ ಚಿತ್ರಮಂದಿರ ಆರಂಭಗೊಂಡ ಈ ಥಿಯೇಟರ್‌ನಲ್ಲಿ ಡಾ. ರಾಜ್ ಕುಮಾರ್ ಅವರ ‘ಬಂಗಾರದ ಪಂಜರ’ ಮೊದಲು ಪ್ರದರ್ಶನಗೊಂಡ ಸಿನಿಮಾವಾಗಿತ್ತು ಎನ್ನಲಾಗಿದೆ.
ಸಿಂಗಲ್ ಸ್ಕ್ರೀನ್ ಆಗಿದ್ದರೂ, ವಿಶಾಲವಾದ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿರುವ ಈ ಥಿಯೇಟರ್ ನಲ್ಲಿ 1300ರಷ್ಟು ಸೀಟುಗಳಿವೆ.
ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಕಮಲ್ ಹಾಸನ್ ಅವರ ಸಿನಿಮಾಗಳು ಸೇರಿದಂತೆ ಅನೇಕ ಸಿನಿಮಾಗಳು ಇಲ್ಲಿ ಶತದಿನ ಪ್ರದರ್ಶನ ಕಂಡಿವೆ. ಕನ್ನಡ, ತಮಿಳು, ಹಿಂದೆ, ಮಲಯಾಳಂ ಜೊತೆಗೆ ಹಾಲಿವುಡ್ ನ ಅನೇಕ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ.
ಬಂದ್ ಯಾಕೆ? : ಇತ್ತೀಚೆಗೆ ಜನ ಥಿಯೇಟರ್ ಗೆ ಬರುತ್ತಿಲ್ಲ. ಅಲ್ಪಸ್ವಲ್ಪ ಜನ ಬಂದು ಸಿನಿಮಾವನ್ನು ನೋಡುತ್ತಿದ್ದಾರೆ. ಇದರಿಂದ ಇಷ್ಟು ದೊಡ್ಡ ಕಟ್ಟಡವನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ಥಿಯೇಟರ್ ನ್ನು ಮುಚ್ಚಿ, ಈ ಜಾಗದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗುತ್ತದೆ ಎಂದು ವರದಿ ಆಗಿದೆ.
ಸಾಲು ಸಾಲು ಥಿಯೇಟರ್ ಗಳು ಬಂದ್.. ʼಕಾವೇರಿʼ ಥಿಯೇಟರ್ ನಲ್ಲಿ ಇತ್ತೀಚೆಗೆ ಹಿಂದಿ, ತೆಲುಗು ಹಾಗೂ ತಮಿಳು ಸಿನಿಮಾಗಳನ್ನೇ ಹೆಚ್ಚಾಗಿ ಪ್ರದರ್ಶನ ಮಾಡಲಾಗುತ್ತಿತ್ತು. ಹಿಂದಿಯ ‘ಬಡೇ ಮಿಯ್ಯಾ ಚೋಟೆ ಮಿಯ್ಯಾ’, ‘ಮೈದಾನ್’ ಈ ಎರಡು ಸಿನಿಮಾಗಳನ್ನು ಪ್ರದರ್ಶನ ಮಾಡಿದ ಬಳಿಕ ಚಿತ್ರಮಂದಿರವನ್ನು ಮುಚ್ಚಲಾಗಿದೆ.
ಬೆಂಗಳೂರಿನಲ್ಲಿ ಸಿನಿಮಾ ಥಿಯೇಟರ್ ಬಂದ್ ಆಗಿರುವುದು ಇದೇ ಮೊದಲಲ್ಲ. ಪ್ರೇಕ್ಷಕರು ಓಟಿಟಿಯತ್ತ ಹಾಗೂ ಮಲ್ಟಿಫ್ಲೆಕ್ಸ್ ನತ್ತ ಮುಖ ಮಾಡಿರುವುದರಿಂದ, ಜನಪ್ರಿಯ ಚಿತ್ರಮಂದಿರಗಳಾದ ಕಪಾಲಿ, ಸಾಗರ್, ಕಲ್ಪನಾ, ಮೆಜೆಸ್ಟಿಕ್, ಪಲ್ಲವಿ ಥಿಯೇಟರ್ ಗಳು ಈ ಹಿಂದೆಯೇ ಬಾಗಿಲು ಮುಚ್ಚಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.