“ಇದು ಬೆಳಕಲ್ಲಾ… 100 ದಿನದ ದರ್ಶನ… ʼಕಾಂತಾರʼ 100 ದಿನ ಪೊರೈಸಿದ ಸಂತಸದಲ್ಲಿ ರಿಷಬ್ ಶೆಟ್ಟಿ
Team Udayavani, Jan 7, 2023, 1:01 PM IST
ಬೆಂಗಳೂರು: 2022 ರ ಸಾಲಿನಲ್ಲಿ ದೊಡ್ಡ ಹಿಟ್ ಕೊಟ್ಟ ಸಿನಿಮಾಗಳ ಸಾಲಿನಲ್ಲಿ ರಿಷಬ್ ಶೆಟ್ಟಿ ಅವರ ʼಕಾಂತಾರʼ ಸಿನಿಮಾವೂ ಒಂದು. ಪ್ಯಾನ್ ಇಂಡಿಯಾದಲ್ಲಿ ರಿಷಬ್ ಶೆಟ್ಟಿ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾಕ್ಕಿಂದು 100ನೇ ದಿನದ ಸಂಭ್ರಮ.
16 ಕೋಟಿ ರೂ. ಬಜೆಟ್ ನಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿ ಆ ಬಳಿಕ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ತುಳು ಭಾಷೆಯಲ್ಲಿ ತೆರೆಗೆ ಬಂದಿತ್ತು. 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಸಿನಿಮಾವನ್ನು ಅಮೇಜಾನ್ ಪ್ರೈಮ್ ಓಟಿಟಿಯಲ್ಲಿ ಖರೀದಿ ಮಾಡಿತ್ತು. ಇದೇ ಜ.15 ರಂದು ಕಿರುತೆರೆಯಲ್ಲೂ ಕಾಂತಾರ ಪ್ರಿಮಿಯರ್ ಆಗಲಿದೆ.
ತುಳುನಾಡಿನ ಆಚರಣೆ ಹಾಗೂ ಕಾಡಿನಲ್ಲಿ ವಾಸಿಸುವ ಜನರ ಬದುಕನ್ನು ಸಿನಿಮಾದಲ್ಲಿ ತೋರಿಸಲಾಗಿದ್ದು, ದೈವದ ಬಗೆಗಿನ ನಂಬಿಕೆಯ ಮೇಲೆ ಸಿನಿಮಾ ಸಾಗುತ್ತದೆ. ಸಾಮಾನ್ಯವಾಗಿ ಇಂಥಹ ಸಿನಿಮಾಗಳು ಕರಾವಳಿ ಭಾಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದರೆ ʼಕಾಂತಾರʼ ಮಾತ್ರ ಕರಾವಳಿ ಮಾತ್ರವಲ್ಲದೆ ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡಿದ್ದು ವಿಶೇಷ.
ರಜಿನಿಕಾಂತ್, ಕಮಲ್ ಹಾಸನ್ ಸೇರಿದಂತೆ ದೊಡ್ಡ ಸ್ಟಾರ್ ಗಳು ಸಿನಿಮಾದ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿದ್ದರು. ಸಿನಿಮಾಕ್ಕೆ ಎಲ್ಲೆಡೆ ಸಿಕ್ಕ ಪ್ರತಿಕ್ರಿಯೆ ಕೇಳಿ, ಇದರ ಎರಡನೇ ಭಾಗವೂ ಬರಬೇಕೆಂದು ಅನೇಕರು ಬಯಸಿದ್ದಾರೆ. ಆದರೆ ಇದುವೆರೆಗೂ ಕಾಂತಾರ -2 ಸಿನಿಮಾ ಬರುತ್ತದೆ ಎನ್ನುವ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರ ಬಿದ್ದಿಲ್ಲ.
ಸಿನಿಮಾ ತೆರೆಕಂಡು 100 ದಿನಗಳು ಪೊರೈಸಿದ್ದು, ಈ ಬಗ್ಗೆ ನಟ- ನಿರ್ದೇಶಕ ರಿಷಬ್ ಶೆಟ್ಟಿ ಅವರು ಟ್ವಿಟರ್ ನಲ್ಲಿ “ ಬೆಳಕು..!! ಆದರೆ ಇದು ಬೆಳಕಲ್ಲಾ 100 ದಿನದ ದರ್ಶನವೆಂದು ಬರೆದುಕೊಂಡಿದ್ದಾರೆ.
ಸಿನಿಮಾದ ಪ್ರಧಾನ ಪಾತ್ರದಲ್ಲಿ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ನಟಿಸಿದ್ದು, ದೀಪಕ್ ರೈ, ಗುರು ಸುನಿಲ್, ಪ್ರಕಾಶ್ ತುಮಿನಾಡು, ರಂಜನ್, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್ ಸೇರಿ ಇನ್ನು ಅನೇಕರು ಅಭಿನಯಿಸಿದ್ದಾರೆ.
ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ಶುರುವಾಗಿದೆ. ʼಬೆಲ್ ಬಾಟಂ-2ʼ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲಿ ಅವರು ಸಿನಿಮಾ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಬೆಳಕು..!! ಆದರೆ ಇದು ಬೆಳಕಲ್ಲ ೧೦೦ ದಿನದ ದರ್ಶನ🔥
Celebrating #DivineBlockbusterKantara 100 Days 🙏
A film we’ll always cherish, that took us back to our roots n made us fell in awe of our traditions. Kudos everyone who made it happen.#Kantara #100DaysOfKantara pic.twitter.com/uog4lsf6G6
— Rishab Shetty (@shetty_rishab) January 7, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.