ಮತ ಹಬ್ಬದಲ್ಲಿ ಸಿನಿತಾರೆಯರ ಸಂಭ್ರಮ
Team Udayavani, May 13, 2018, 11:40 AM IST
ಪ್ರಜಾಪ್ರಭುತ್ವದ ಮಹಾ ಹಬ್ಬದಲ್ಲಿ ಸಿನಿತಾರೆಯರು ಸಂಭ್ರಮದಿಂದ ಪಾಲ್ಗೊಂಡು, ನಗರದ ವಿವಿಧ ಕ್ಷೇತ್ರಗಳಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ಕತ್ರಿಗುಪ್ಪೆಯಲ್ಲಿ ನಟ ಉಪೇಂದ್ರ, ಪತ್ನಿ ಪ್ರಿಯಾಂಕ ಉಪೇಂದ್ರ ಜತೆಯಾಗಿ ಆಗಮಿಸಿ ಮತದಾನ ಮಾಡಿದರು. ಬ್ಯಾಟರಾಯನ ಪುರ ಕ್ಷೇತ್ರದ ರಾಚೇನಹಳ್ಳಿಯಲ್ಲಿ ಶಿವರಾಜಕುಮಾರ್ ಮತ್ತು ಅವರ ಪತ್ನಿ ಗೀತಾ ಹಾಗೂ ಪುತ್ರಿ ನಿವೇದಿತಾ ಜತೆಗೆ ಆಗಮಿಸಿ ಮತ ಚಲಾಯಿಸಿದರು.
ಪುನೀತ್ ರಾಜಕುಮಾರ್, ಪತ್ನಿ ಅಶ್ವಿನಿ ಜತೆ ಆಗಮಿಸಿ ಸದಾಶಿವ ನಗರದ ಪೂರ್ಣಪ್ರಜ್ಞಾ ಶಾಲೆಯ ಮತಗಟ್ಟ ಕೇಂದ್ರದಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಪುನೀತ್, “ಕಳೆದ 18 ವರ್ಷದಿಂದ ಮತದಾನ ಮಾಡುತ್ತಿದ್ದು, ಇಲ್ಲಿಯ ತನಕ ಒಂದು ಚುನಾವಣೆಯಲ್ಲಿ ಮಾತ್ರ ಮತದಾನ ಮಾಡಿರಲು ಸಾಧ್ಯವಾಗಿರಲಿಲ್ಲ. ರಾಜ್ಯದ ಪ್ರಗತಿಗೆ ಪ್ರತಿ ಓಟ್ ಕೂಡ ಅಮೂಲ್ಯ’ ಎಂದರು.
ಇದೇ ಸ್ಥಳದಲ್ಲಿ ರಾಘವೇಂದ್ರ ರಾಜಕುಮಾರ್ ಕೂಡ ಕಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಜೆ.ಪಿ.ನಗರದ ಪುಟ್ಟೇನಹಳ್ಳಿ ಮತಗಟ್ಟೆ 178ರಲ್ಲಿ ಸುದೀಪ್, ಯಶವಂತಪುರ ಕ್ಷೇತ್ರದ ಚಿಕ್ಕಬಿದಿರೆಕಲ್‌ನಲ್ಲಿ ಹಿರಿಯ ನಟ ದೊಡ್ಡಣ್ಣ , ಬನಶಂಕರಿ ಎರಡನೇ ಹಂತದಲ್ಲಿರುವ ರಮೇಶ್ ಅರವಿಂದ್, ಶುಭಾ ಪೂಂಜ, ಸೃಜನ್ ಲೋಕೇಶ್, ಸೋನು ಗೌಡ, ಚಂದ್ರ ಲೇಔಟ್‌ನಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್,
ಶಿವಾಜಿನಗರ ವಿಧಾನ ಸಭಾಕ್ಷೇತ್ರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಟ ಶ್ರೀಮುರಳಿ, ಕೆ.ಆರ್.ಪುರಂ ಕ್ಷೇತ್ರದ ಕಲ್ಕೆರೆ ಕ್ಷೇತ್ರದ ಮತಗಟ್ಟೆ 42ರಲ್ಲಿ ಹರ್ಷಿಕಾ ಪೂರ್ಣಚ್ಚ ಮತದಾನ ಮಾಡಿ ಸಂಭ್ರಮಿಸಿದರು. ಇನ್ನು, ಸುಧಾರಾಣಿ ಅವರು ಗಾಂಧಿನಗರದ ಮತಗಟ್ಟೆ ಕೇಂದ್ರ 11ರಲ್ಲಿ, ರೂಪಶ್ರೀ ನ್ಯೂ ತಿಪ್ಪಸಂದ್ರದಲ್ಲಿ, ಕೋಣನಕುಂಟೆಯಲ್ಲಿ ಧ್ರುವ ಸರ್ಜಾ, ಚಿರಂಜೀವಿ ಸರ್ಜಾ, ಹೊಸಕೆರೆಹಳ್ಳಿಯಲ್ಲಿ ಯಶ್ ಸರದಿಯಲ್ಲಿ ಮತ ಚಲಾಯಿಸಿದರು.
ವಿಜಯನಗರದ ಕೆವಿಎನ್ ಪಬ್ಲಿಕ್ ಶಾಲೆಯಲ್ಲಿ ನಟ ಮತ್ತು ನಿರ್ದೇಶಕ ಪ್ರೇಮ್, ಪತ್ನಿ ರಕ್ಷಿತಾ ಜತೆಗೂಡಿ ಓಟ್ ಮಾಡಿದರು. ಗಿರಿನಗರದ ವಿಜಯಭಾರತಿ ಶಾಲೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್, ಅಶ್ವತ್ಥ್ ನಗರದಲ್ಲಿ ಅನಂತ್ ನಾಗ್, ಮಲ್ಲೇಶ್ವರಂನಲ್ಲಿ ಹಿರಿಯ ಬಿ. ಸರೋಜಾದೇವಿ ಸಂಭ್ರಮದಿಂದ ಮತಚಲಾಯಿಸಿದರು. ಹಿರಿಯ ನಟರಾದ ಲೀಲಾವತಿ, ದ್ವಾರಕೀಶ್, ರಾಜೇಶ್,
ಹಿರಿಯ ಚಿತ್ರ ನಿರ್ದೇಶಕ ಭಗವಾನ್, ಜಗ್ಗೇಶ್, ಅಜೇಯ್ ರಾವ್, ಮಾಲಾಶ್ರೀ, ದತ್ತಣ್ಣ, ಚಿತ್ರ ಶೆಣೈ, ರವಿಶಂಕರ್ ಗೌಡ, ಅನು ಪ್ರಭಾಕರ್, ಭಾವನಾ ರಾವ್, ದತ್ತಣ್ಣ, ಚಿತ್ರ ಶೆಣೈ, ದೇವರಾಜ್, ಪ್ರಜ್ವಲ್ ದೇವರಾಜ್, ಧನಂಜಯ್, “ದುನಿಯಾ’ ವಿಜಯ್, ಮಾನ್ವಿತಾ ಹರೀಶ್, ನೀತು, ಪ್ರಣೀತಾ, ರಘು ಮುಖರ್ಜಿ, ಅನಿತಾ ಭಟ್, ಪ್ರದೀಪ್ ನಿರ್ದೇಶಕರಾದ ಬಿ. ಸುರೇಶ, ಇಂದ್ರಜಿತ್ ಲಂಕೇಶ್, ದಿನಕರ್ ತೂಗುದೀಪ,
ಶಶಾಂಕ್, ಸಂತೋಷ್ ಆನಂದರಾಮ್, ಪವನ್ ಒಡೆಯರ್, ಸುನಿ, ಪಿ.ಸಿ. ಶೇಖರ್ ಸೇರಿದಂತೆ ಹಲವು ನಟರು ತಮ್ಮ ಅಮೂಲ್ಯವಾದ ಮತ ಚಲಾಯಿಸಿದರು. ಈ ವೇಳೆ ಮತದಾನ ಮಾಡಲು ಬಂದಿದ್ದ ಹಲವರು ನೆಚ್ಚಿನ ತಾರೆಗಳೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದದ್ದು ಅಲ್ಲಲ್ಲಿ ಕಂಡು ಬಂತು. ಇನ್ನು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಹಿನ್ನೆಲೆಯಲ್ಲಿ ಆದಿತ್ಯ ಮುಂತಾದವರು ಮತ ಚಲಾಯಿಸದೇ ಹಿಂದುರುಗಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.