ವಿನಯಾ ಪ್ರಪಂಚ 


Team Udayavani, Oct 19, 2017, 11:42 AM IST

lead-vinaya-(4.jpg

ಮೂರು ದಶಕಗಳಿಂದ ನಟಿಯಾಗಿ ಕನ್ನಡಿಗರನ್ನು ರಂಜಿಸುತ್ತಿರುವವರು ವಿನಯಾ ಪ್ರಸಾದ್‌. ನಟಿಯಾಗಷ್ಟೇ ಅಲ್ಲದೇ, ಒಬ್ಬ ವ್ಯಕ್ತಿಯಾಗಿಯೂ ಯಾರನ್ನಾದರೂ ಪ್ರಭಾವಿಸುವಂಥ ವ್ಯಕ್ತಿತ್ವ ಇವರದು. ಎಲ್ಲರ ಬಗ್ಗೆ ಕಾಳಜಿ, ಅಪಾರ ಜ್ಞಾನ, ಎಂಥ ಸಂದರ್ಭವನ್ನಾದರೂ ಎದುರಿಸುವ ಧೈರ್ಯ, ಜೊತೆಗಿರುವವರನ್ನು ಪ್ರೋತ್ಸಾಹಿಸುವ ಒಳ್ಳೆಯತನ, ಅಗಾಧ ಪ್ರತಿಭೆ…

ಇವೆಲ್ಲದರ ಒಟ್ಟು ಮೊತ್ತವೇ ವಿನಯಾ ಪ್ರಸಾದ್‌. 1990ರಲ್ಲಿ ಫ‌ಣಿ ರಾಮಚಂದ್ರ ನಿರ್ದೇಶನದ “ಗಣೇಶನ ಮದುವೆ’ ಚಿತ್ರದಿಂದ ನಟನೆ ಆರಂಭಿಸಿದರು. ಕನ್ನಡವಲ್ಲದೇ ಮಲಯಾಳಂ, ತಮಿಳು, ತೆಲುಗು ಚಿತ್ರರಂಗದಲ್ಲೂ ಛಾಪು ಮೂಡಿಸಿರುವ ಹೆಗ್ಗಳಿಕೆ ಇವರದ್ದು. ಈಗ “ಲಕ್ಷ್ಮೀ ನಾರಾಯಣರ ಪ್ರಪಂಚವೇ ಬೇರೆ’ ಚಿತ್ರದ ಮೂಲಕ ನಿರ್ದೇಶಕಿಯಾಗಿದ್ದಾರೆ. “ಅವಳು’ ಜೊತೆ ಅವರು ಮಾತಿಗೆ ಕುಳಿತಾಗ…

* ನಟಿಯಾಗಿದ್ದವರು ಈಗ ನಿರ್ದೇಶಕಿಯಾಗಿದ್ದೀರ? ಇದು ದಿಢೀರ್‌ ನಿರ್ಧಾರವಾ ಅಥವಾ ಈ ಯೋಚನೆ ಮೊದಲೇ ಇತ್ತಾ? 
ನಿರ್ದೇಶನ ಮಾಡಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು. ಮಾಡುತ್ತೇನೆ ಎಂಬ ಆತ್ಮವಿಶ್ವಾಸ ಕೂಡ ಇತ್ತು.  ಬಹಳ ವರ್ಷಗಳಿಂದ ಬೇರೆ ಬೇರೆ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿರುವ ಕಾರಣ ನನಗೆ ತಂತ್ರಜ್ಞರು, ಕಲಾವಿದರ ಪರಿಚಯವೂ ಚೆನ್ನಾಗಿಯೇ ಇತ್ತು. ಎಲ್ಲರೂ ನನ್ನನ್ನು ಪ್ರೋತ್ಸಾಹಿಸಿದರು. ಸ್ಕ್ರಿಪ್ಟ್ ತಯಾರಿ ಕೂಡ ಗೊತ್ತಿದ್ದರಿಂದ ಕೇವಲ ಎರಡೇ ತಿಂಗಳಲ್ಲಿ ಚಿತ್ರದ ಪೂರ್ವ ತಯಾರಿಗಳೆಲ್ಲ ನಡೆದವು. 

* ನಿರ್ದೇಶಕಿಯರಿಗೆ ಚಿತ್ರರಂಗ ಹೇಗೆ ಸಹಕಾರ ನೀಡುತ್ತದೆ? ನಿರ್ದೇಶಕಿಯರು ಎದುರಿಸುವ ಸವಾಲುಗಳೇನು? 
ಕೇವಲ ನಿರ್ದೇಶನದಲ್ಲಿ ಅಂತ ಅಲ್ಲ, ಒಬ್ಬ ಹೆಣ್ಣಿಗೆ ಆಕೆ ಆರಿಸಿಕೊಳ್ಳುವ ಎಲ್ಲಾ ಕ್ಷೇತ್ರಗಳಲ್ಲೂ ಸವಾಲುಗಳು ಇದ್ದೇ ಇರುತ್ತವೆ. ಮೊದಲ ಸವಾಲೆಂದರೆ “ಆಕೆಯ ಸೂಕ್ಷ್ಮ ಮನಸ್ಸು’. ಎಷ್ಟೇ ಗಟ್ಟಿಗಿತ್ತಿಯಾಗಿದ್ದರೂ ಯಾರಾದರೂ ಒಂದು ಮಾತು ಹೇಳಿದರೂ ಅವರಿಂದ ಮನಸ್ಸಿನ ತುಂಬೆಲ್ಲಾ ಕಹಿ ಆವರಿಸುತ್ತದೆ. ಗಮನ ಕೆಲಸದಿಂದ ಬೇರೆಡೆಗೆ ಸರಿಯುತ್ತದೆ. ಹೊಸದಾಗಿ ನಿರ್ದೇಶನಕ್ಕೆ ಬರುವವರಿಗೆ ತನ್ನ ತಂಡದ ಸದಸ್ಯರ ಸಹಕಾರ ಸಿಗುವುದೇ ದೊಡ್ಡ ಸವಾಲಾಗಿರುತ್ತದೆ. ಆದರೆ, ನನಗೆ ಇಂಥ ಯಾವುದೇ ತೊಂದರೆಯಾಗಿಲ್ಲ. 26 ವರ್ಷಗಳಿಂದ ಈ ಕ್ಷೇತ್ರದಲ್ಲಿದ್ದೇನೆ. ನಟ, ನಟಿ, ತಂತ್ರಜ್ಞರ ಜೊತೆ ನನಗೆ ಸೌಹಾರ್ದಯುತ ಸಂಬಂಧ ಇದೆ. ಜೊತೆಗೆ ಕೆಲಸವೂ ಗೊತ್ತಿತ್ತು. ಇನ್ನೂ ಹೇಳಬೇಕೆಂದರೆ, ಇದುವರೆಗೂ  ನಾನು ಎಲ್ಲರೊಡನೆ ಗೌರವಪೂರ್ವಕವಾಗಿ ನಡೆದುಕೊಂಡಿದ್ದೇನೆ. ಆದ್ದರಿಂದ ನನಗೆ ತೊಂದರೆ ಕೊಡದಂತೆ ಎಲ್ಲರೂ ಸಹಕಾರ ನೀಡಿದ್ದಾರೆ. 

* ನಿಮ್ಮಲ್ಲೊಬ್ಬಳು ಗಾಯಕಿ ಇದ್ದಾಳಲ್ಲ, ಈಗ ಅವಳೆಲ್ಲಿದ್ದಾಳೆ? ಒಬ್ಬ ಸೆಲೆಬ್ರೆಟಿ ಗಾಯಕಿಯಾಗಿ ವೇದಿಕೆ ಮೇಲೆ ಹಾಡುವ ಅನುಭವ ಹೇಗಿರುತ್ತದೆ?
ಈಗಲೂ ಆಕೆ ನನ್ನೊಳಗೇ ಇದ್ದಾಳೆ. ನಾನು ಹವ್ಯಾಸಿ ಗಾಯಕಿ. ಗಾಯನವನ್ನು ಪ್ರೀತಿಸುತ್ತೇನೆ, ಆದರೆ, ಅದನ್ನು ವೃತ್ತಿಯನ್ನಾಗಿ ಎಂದೂ ತೆಗೆದುಕೊಂಡಿಲ್ಲ. ವಿಜಯಪುರದಿಂದ ಕಾಸರಗೋಡಿನವರೆಗೂ ಬೇಕಾದಷ್ಟು ಸಂಗೀತ ಕಾರ್ಯಕ್ರಮ ನೀಡಿದ್ದೇನೆ. ಮೊದಮೊದಲು ಭಕ್ತಿಗೀತೆ ಮತ್ತು ಭಾವಗೀತೆ ಹಾಡುತ್ತಿದ್ದೆ. ಆದರೆ, ಜನರು ನನ್ನ ಚಿತ್ರಗಳ ಜನಪ್ರಿಯ ಹಾಡುಗಳನ್ನು ನನ್ನ ಕಂಠದಿಂದಲೇ ಕೇಳಲು ಬಯಸುತ್ತಿದ್ದರು. “ಬಾರೆ ಸಂತೆಗೆ ಹೋಗೋಣ ಬಾ’, “ನಮ್‌ ಕಡೆ ಸಾಂಬಾರ್‌ ಅಂದ್ರೆ’, “ನಾನು ಬಡವಿ’ ಹಾಡುಗಳು ಕೇಳುಗರ ಹಿಟ್‌ಲಿಸ್ಟ್‌ನಲ್ಲಿ ಕಡ್ಡಾಯವಾಗಿ ಇರುತ್ತಿದ್ದವು.   

* ತುಂಬಾ ಪುಸ್ತಕಗಳನ್ನ ಓದುತ್ತೀರಂತೆ? ಲೇಖಕರು ನಿಮಗಿಷ್ಟ? 
ನಾನು ಟಿ.ವಿ ನೋಡೋದು ತುಂಬಾ ಕಡಿಮೆ. ನನ್ನ ಆದಾಯದಲ್ಲಿ ತಿಂಗಳಿಗಿಷ್ಟು ಅಂತ ಪುಸ್ತಕಗಳಿಗಾಗಿಯೇ ಮೀಸಲಿಡುತ್ತೇನೆ. ಕನ್ನಡದ ಬಹುತೇಕ ಜನಪ್ರಿಯ ಕಾದಂಬರಿಗಳೆಲ್ಲವನ್ನೂ ಓದಿದ್ದೇನೆ. “ಮಂಕುತಿಮ್ಮನ ಕಗ್ಗ’ ನನ್ನ ಪಾಲಿನ ಭಗವದ್ಗೀತೆ. ಪ್ರತಿದಿನವೂ ಕಗ್ಗಗಳನ್ನು ಓದುತ್ತೇನೆ. ಎಸ್‌.ಎಲ್‌ ಭೈರಪ್ಪ, ಅನಂತಮೂರ್ತಿ ಅವರ ಕಾದಂಬರಿಗಳು ಇಷ್ಟ. 

* ಇತ್ತೀಚಿನ ಬರಹಗಾರರಲ್ಲಿ ಯಾರ ಬರಹಗಳು ಕಾಡಿವೆ?
ನೇಮಿಚಂದ್ರ ಅವರ ಕಾದಂಬರಿಗಳು. ಇತ್ತೀಚೆಗ ಕವನ, ಚುಟುಕಗಳ ನ್ನು ಹೆಚ್ಚು ಓದು ತ್ತಿ ದ್ದೇ ನೆ. ಜಯಂತ್‌ ಕಾಯ್ಕಿಣಿ, ಜರಗನಹಳ್ಳಿ ಶಿವಶಂಕರ್‌ ಕವನಗಳು ಇಷ್ಟ. ಡುಂಡಿರಾಜ್‌ ಚುಟುಕುಗಳಂತೂ ಆಲ್‌ ಟೈಂ ಫೇವರಿಟ್‌.

* ಬಾಲ್ಯದ ದೀಪಾವಳಿ ನೆನೆದರೆ ಏನೆಲ್ಲಾ ಕಣ್ಮುಂದೆ ಬರುತ್ತದೆ? ನೀವು ಪಟಾಕಿ ಹೊಡೆಯುತ್ತಿದ್ರಾ?
ನಾನು 5 ವರ್ಷದವಳಿದ್ದಾಗಿನಿಂದ 15 ವರ್ಷ ಆಗುವವರೆಗೂ ಪಟಾಕಿ ಹೊಡೆದಿದ್ದೇನೆ. ಆಮೇಲೆ ಪಟಾಕಿ ಹೊಡೆಯುವ ಆಸಕ್ತಿ ಹೋಗಿ, ಮನೆಯೆದುರು ರಂಗೋಲಿ ಹಾಕುವ, ಹಣತೆ ಹಚ್ಚುವ, ಸಿಹಿ ತಿಂಡಿ ತಯಾರಿಸುವ ಆಸಕ್ತಿಗಳು ಶುರುವಾದವು. ಹಬ್ಬದ ದಿನ ಮನೆಯನ್ನು ಸಿಂಗರಿಸಿ ಆಗಿನ ರೀಲ್‌ ಕ್ಯಾಮೆರಾದಲ್ಲಿ ಫೋಟೊ ತೆಗೆಯುತ್ತಿದ್ದೆ. ದೀಪಾವಳಿಗೆ ಖರ್ಜೂರದ ಹೋಳಿಗೆ ತಯಾರಿಸುವುದೆಂದರೆ ನನಗೆ ಎಲ್ಲಿಲ್ಲದ ಖುಷಿ.

* 30 ವರ್ಷ ಹಿಂದಕ್ಕೆ ಹೋದರೆ ನಿಮಗೆ ಆಗ ಯಾರ ಮೇಲೆ ಕ್ರಶ್‌ ಇತ್ತು? ಕಾಲೇಜು ದಿನಗಳಲ್ಲಿ ನಿಮ್ಮ ಕನಸಿನ ರಾಜಕುಮಾರ ಯಾರಾಗಿದ್ದರು?
ಸ್ವಾಮಿ ವಿವೇಕಾನಂದ ಈಗೇನಾದರೂ ಬದುಕಿದ್ದಿದ್ದರೆ ನನಗೆ ಅವರ ಮೇಲೆ ಖಂಡಿತಾ ಕ್ರಶ್‌ ಇರುತ್ತಿತ್ತು. ಆ ವ್ಯಕ್ತಿ ನನಗೆ ಅಷ್ಟು ಇಷ್ಟ. ಕಾಲೇಜು ದಿನಗಳಲ್ಲಿ ಯಾರ ಮೇಲೂ ಕ್ರಶ್‌ ಇರಲಿಲ್ಲ. ಫ‌ಸ್ಟ್‌ ಡೇ ಕಾಲೇಜ್‌ಗೆ ಹೋದಾಗ ತುಂಬಾ ಹುಡುಗರು ಲವ್‌ ಲೆಟರ್‌ ಕೊಟ್ಟರು. ಅವರ ಲೆಟರ್‌ಗಳನ್ನು ಅವರೆದುರೇ ಓದಿ, ಇನ್ಮುಂದೆ ಹೀಗೆಲ್ಲಾ ಬರೆಯಬೇಡಿ. ಇಂಥದ್ದರಲ್ಲೆಲ್ಲಾ ನನಗೆ ಆಸಕ್ತಿ ಇಲ್ಲ ಎಂದು ನೇರವಾಗಿ ಹೇಳಿದ್ದೆ. ಅದನ್ನೇ ಚಾಲೆಂಜ್‌ ಆಗಿ ತೆಗೆದುಕೊಂಡು ಕೆಲವರು ಮೇಲಿಂದ ಮೇಲೆ ಪತ್ರ ಬರೆಯುತ್ತಿದ್ದರು. ಸಮಾಜ ಕೂಡ ನಮಗೆ ಕೆಲವು ಸಂಸ್ಕಾರ ಕಲಿಸಿರುತ್ತದೆ. ಒಬ್ಬ ಪುರುಷನ ಜೊತೆ ಮಾನಸಿಕ ಅಥವಾ ದೈಹಿಕ ಸಂಬಂಧ ಏನಿದ್ದರೂ ಅದು ಮದುವೆ ನಂತರವೇ ಎಂಬ ಯೋಚನೆ ನನ್ನ ತಲೆಯಲ್ಲಿ ಅಚ್ಚೊತ್ತಿತ್ತು. ನನ್ನ ಟ್ರೆಡಿಷನಲ್‌ ಮನಸ್ಸು ಈಗಲೂ ಅದನ್ನೇ ನಂಬಿದೆ.

* ಮನೆಯಲ್ಲಿ ಯಾವೆಲ್ಲಾ ಅಡುಗೆ ಮಾಡ್ತೀರಿ? ಅಮ್ಮನಿಂದ ಕಲಿತ ಅಡುಗೆಗಳು ಯಾವುವು?
ನಾನು ಏನೆಲ್ಲಾ ಅಡುಗೆ ಮಾಡ್ತೀನೋ ಅದನ್ನೆಲ್ಲವನ್ನೂ ಅಮ್ಮನಿಂದಲೇ ಕಲಿತದ್ದು. ನಾವು ಉಡುಪಿಯವರು, 12ರಿಂದ 15 ಬಗೆಯ ದೋಸೆಗಳನ್ನು ಮಾಡುತ್ತೇವೆ. ತೆಂಗಿನಕಾಯಿ ದೋಸೆ, ಉಪ್ಪುಹುಳಿ ದೋಸೆ, ತರಕಾರಿ ದೋಸೆ ಅಯ್ಯೋ… ಹೇಳ್ತಾ ಹೋದರೆ ಪಟ್ಟಿ ಮುಗಿಯುವುದಿಲ್ಲ. ಆರೋಗ್ಯಕರವಾದ ಹುಳಿ, ತಂಬುಳಿಗಳನ್ನು ಮಾಡುತ್ತೇನೆ. ಅಡುಗೆ ಮಾಡುವುದು ನನ್ನ ನೆಚ್ಚಿನ ಹವ್ಯಾಸ. ನನ್ನ ಮಗಳು ನಾನು ಮಾಡುವ ಎಲ್ಲಾ ಅಡುಗೆಯನ್ನು ಖುಷಿಯಿಂದ ತಿಂತಾಳೆ. ಆದರೆ ನನ್ನ ಅಡುಗೆ ಸ್ವಲ್ಪ ಸಪ್ಪೆ ಎನ್ನುವುದು ಅವಳ ಕಂಪ್ಲೇಂಟ್‌. 

* ಈಗಲೂ ಇಷ್ಟು ಫಿಟ್‌ ಆಗಿ ಇದ್ದೀರಿ, ಸೌಂದರ್ಯವತಿ ಆಗಿದ್ದೀರಿ. ನಿಮ್ಮ ಸೌಂದರ್ಯದ ಗುಟ್ಟನ್ನು ನಮಗೂ ಹೇಳಿ.
ನಾನು ಎಲ್ಲರೂ ಸಾಮಾನ್ಯವಾಗಿ ತಿನ್ನುವ ವೆಜ್‌ ಆಹಾರವನ್ನೇ ತಿನ್ನುತ್ತೇನೆ. ಜಂಕ್‌ ಫ‌ುಡ್‌ನಿಂದ ಬಹಳಾ ದೂರ. ತಿನ್ನಬಾರದು ಅಂತ ಅಲ್ಲ. ನನಗದು ಇಷ್ಟ ಆಗಲ್ಲ. ಪ್ರತಿದಿನದ ಆಹಾರದಲ್ಲಿ ಹಾಲು, ಹಣ್ಣು, ಹಣ್ಣಿನ ರಸ, ಒಣ ಹಣ್ಣುಗಳು ಇದ್ದೇ ಇರುತ್ತವೆ. ಆದರೆ ತಿಂದಿದ್ದನ್ನು ಜೀರ್ಣಿಸಿಕೊಳ್ಳಲು ಪ್ರತಿದಿನ ವ್ಯಾಯಾಮ ತಪ್ಪಿಸುವುದಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಮನಸ್ಸನ್ನು ಸ್ವತ್ಛವಾಗಿ ಇರಿಸಿಕೊಳ್ಳಬೇಕು. ಬೇಡದ ಆಲೋಚನೆಗಳನ್ನು ಆಗಾಗ ಆ್ಯಂಟಿ ವೈರಸ್‌ ಹಾಕಿ ಕ್ಲೀನ್‌ ಮಾಡುತ್ತಿರಬೇಕು. ಇನ್ನು ರೂಪ ನನಗೆ ನನ್ನ ಅಜ್ಜಿ, ಅಮ್ಮನಿಂದ ಬಳುವಳಿಯಾಗಿ ಬಂದದ್ದು. ಅದು ನನ್ನ ಸಾಧನೆಯಲ್ಲ. 

* ಸುಂದರವಾಗಿ, ಆರೋಗ್ಯಪೂರ್ಣರಾಗಿ ಕಾಣಲು ಟಿಪ್ಸ್‌ ಕೊಡಿ…
ನಾನು ಪಾರ್ಲರ್‌ಗೆ ಹೋದವಳೇ ಅಲ್ಲ. ಮನೆಯಲ್ಲಿಯೇ ಹಾಲು, ಕೆನೆ, ಅರಿಶಿಣ ಬಳಸಿ ತ್ವಚೆ ಆರೈಕೆ ಮಾಡಿಕೊಳ್ಳುತ್ತೇನೆ. ಹಾಲು, ಚರ್ಮಕ್ಕೆ ಬಿಗಿತನ ಕೊಡುತ್ತದೆ. ಪ್ರತಿದಿನ ಬೆಳಗ್ಗೆ ಏಳುತ್ತಿದ್ದಂತೆ ಉಗುರು ಬೆಚ್ಚಗಿನ ನೀರಿಗೆ ಅರ್ಧ ಚಮಚ ಅರಿಶಿಣ ಹಾಕಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಅದು ನಿಮ್ಮ ದೇಹವನ್ನು ಒಳಗಿನಿಂದ ಕ್ಲೆನ್ಸ್‌ ಮಾಡುತ್ತದೆ. ದಿನದಲ್ಲಿ ಯಾವ ಹೊತ್ತಾದರೂ 1 ಲೋಟ ಬೆಚ್ಚಗಿನ ನೀರಿಗೆ ಅರ್ಥ ಹೋಳು ನಿಂಬೆ ರಸ, 1 ಚಮಚ ಜೇನು ತುಪ್ಪ ಹಾಕಿ ಕುಡಿಯಿರಿ. ಮಧ್ಯಮ ವಯಸ್ಸಿನವರು ಬಿಸಿ ಹಾಲಿಗೆ ಬೆಲ್ಲ ಹಾಕಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. 

* ಈಗಿನ ನಟಿಯರ ಬಗ್ಗೆ ನಿಮ್ಮ ಅನಿಸಿಕೆ ಏನು?
ಈಗಿನ ನಟಿಯರೂ ಸಾಕಷ್ಟು ಶ್ರಮ ವಹಿಸಿ ಉತ್ತಮ ಕೆಲಸವನ್ನೇ ಮಾಡುತ್ತಿದ್ದಾರೆ. ಆದರೆ ಇನ್ನಷ್ಟು  ತೊಡಗಿಸಿಕೊಳ್ಳುವಿಕೆ, ಏಕಾಗ್ರತೆ ಅಗತ್ಯ. ಪಾತ್ರವನ್ನು ಇನ್ನಷ್ಟು ಅಭ್ಯಾಸ ಮಾಡಿ ಕ್ಯಾಮೆರಾ ಮುಂದೆ ಬಂದು ನಿಲ್ಲುವುದನ್ನು ರೂಢಿಸಿಕೊಳ್ಳಬೇಕು. ನಾನು ಸಾಕಷ್ಟು ಸೆಟ್‌ಗಳಲ್ಲಿ ನೋಡುತ್ತೇನೆ. ನಟಿಯರು ಮೊಬೈಲ್‌ ಹಿಡಿದು ಶಾಟ್‌ಗೆ ತಡ ಮಾಡುತ್ತಿರುತ್ತಾರೆ. ಮೊಬೈಲ್‌ನಲ್ಲಿ ಬರುವ ಸಂದೇಶ, ಫೋನ್‌ ಕಾಲ್‌ಗ‌ಳಿಂದ ವಿಚಲಿತರಾಗಿರುತ್ತಾರೆ. ಇಂಥದ್ದನ್ನೆಲ್ಲಾ ಕಡಿಮೆ ಮಾಡಬೇಕು. ಮೇಕಪ್‌ ಮತ್ತು ಡ್ರೆಸ್‌ ಬದಲಿಸಲು ಹೆಚ್ಚೆಂದರೆ 1 ಗಂಟೆ ಸಾಕು. ಆದರೆ, 2 ಗಂಟೆಗಳ ಕಾಲ ಸಮಯ ವ್ಯರ್ಥ ಮಾಡುವುದು ಸರಿಯಲ್ಲ. ಕಲಾವಿದರಿಂದ ದುಡ್ಡು ಹಾಕಿದವರಿಗೆ ಅನ್ಯಾಯ ಆಗಬಾರದು. 

* ದೇವರಲ್ಲಿ 2 ವರ ಕೇಳುವ ಛಾನ್ಸ್‌ ಸಿಕ್ಕಿದರೆ ಏನು ಕೇಳುತ್ತೀರಿ?
ಮೊದಲನೆಯದಾಗಿ ನನ್ನನ್ನು ಸಿಹಿ ನೀರಿನ ಬುಗ್ಗೆ ಮಾಡು ಎಂದು ಕೇಳಿಕೊಳ್ಳುತ್ತೇನೆ. ಎರಡನೆಯದಾಗಿ ನೀರಿಗಾಗಿ ಕಷ್ಟ ಪಡುವ ಪ್ರದೇಶಗಳಲ್ಲಿ ನನ್ನನ್ನು ಒರತೆಯಾಗಿ ಚಿಮ್ಮಿಸು ಎಂದು ಕೇಳುತ್ತೇನೆ. 

* ಈಗ ದೀಪಾವಳಿ ಶುರುವಾಗೋದು 7 ಗಂಟೆ ನಂತರ!
ನಾವು ಚಿಕ್ಕವರಿದ್ದಾಗ ದೀಪಾವಳಿ ಹಬ್ಬದ ದಿನ ಕಡ್ಡಾಯವಾಗಿ 3:30ಕ್ಕೆಲ್ಲಾ ಏಳಬೇಕಿತ್ತು. ಎದ್ದು, ಮೈಗೆಲ್ಲಾ ಎಣ್ಣೆ ಹಚ್ಚಿಕೊಂಡು 6 ಗಂಟೆಯೊಳಗೆ ಸ್ನಾನ ಮಾಡುತ್ತಿದ್ದೆವು. ದೀಪಾವಳಿಯ ದಿನ ಸೂರ್ಯ ಹುಟ್ಟುವ ಮುನ್ನ ಸ್ನಾನ ಮಾಡಿದರೆ ಅದು ನೀರಿನ ಸ್ನಾನ, ಸೂರ್ಯೋದಯದ ನಂತರ ಮಾಡಿದರೆ ಅದು ರಕ್ತದ ಸ್ನಾನ ಎಂಬ ನಂಬಿಕೆ ಇತ್ತು. ಅದಕ್ಕೆ ಕತ್ತಲಲ್ಲೇ ಸ್ನಾನ ಮುಗಿಸಿಬಿಡುತ್ತಿದ್ದೆವು. ಈಗೆಲ್ಲಾ ದೀಪಾವಳಿ ಸಡಗರ ಆರಂಭವಾಗೋದು 7 ಗಂಟೆ ನಂತರವೇ. ಅದಕ್ಕೆ ಸೋಮಾರಿತನ ಕಾರಣವಾ ಅಥವಾ ವಯಸ್ಸು ಕಾರಣವಾ ಗೊತ್ತಿಲ್ಲ. 

* ಹೆಸರಾಂತ ನಟರ ಜೊತೆಗೆ ನಟಿಸಿದ್ದೀರ, ಯಾರ್ಯಾರಿಂದ ಏನೇನು ಕಲಿತಿರಿ? 
ಅನಂತ್‌ನಾಗ್‌ರಿಂದ  ಘನತೆ, ಗಾಂಭೀರ್ಯ, ಅಂಬರೀಶ್‌ರಿಂದ ಧಾರಾಳತನ, ವಿಷ್ಣುವರ್ಧನ್‌ರಿಂದ ತುಂಟತನ ಕಲಿತಿದ್ದೇನೆ. ವಿಷ್ಣುವರ್ಧನ್‌ ಅವರು ಎಷ್ಟು ತಮಾಷೆಯ ವ್ಯಕ್ತಿ ಆಗಿದ್ದರೆಂದರೆ, ಬಣ್ಣ ಎರಚುವ ದೃಶ್ಯ ಇದ್ದರೆ ಅವರು ಶಾಟ್‌ ಮಗಿದ ಬಳಿಕವೂ ಸೆಟ್‌ನಲ್ಲಿದ್ದ ಎಲ್ಲರ ಮೇಲೆ ಬಣ್ಣ ಎರಚಿ ಗೋಳು ಹೊಯ್ದುಕೊಳ್ಳುತ್ತಿದ್ದರು. ಅವರಿದ್ದೆಡೆ ಜೀವಂತಿಕೆ ಇರುತ್ತಿತ್ತು. ಇನ್ನು ಪ್ರಭಾಕರ್‌ರಷ್ಟು ತಾಂತ್ರಿಕ ನಿಪುಣ ಕಲಾವಿದರು ಬಹಳ ಕಡಿಮೆ. ಶ್ರುತಿ, ಸುಧಾರಾಣಿ ಜೊತೆ ನಟಿಸುವಾಗ ಅವರ ಅಭಿನಯ ನೋಡಿ ನಾನೂ ಕೆಲವು ಅಂಶಗಳನ್ನು ಕಲಿತಿದ್ದೇನೆ. 

* ಯಾರಿಗೂ ಅಷ್ಟಾಗಿ ಗೊತ್ತಿಲ್ಲದ ನಿಮ್ಮ ಒಂದು ಹವ್ಯಾಸದ ಬಗ್ಗೆ ಹೇಳಿ?
ನಾನು ರಕ್ತ ದಾನ ಶಿಬಿರಗಳನ್ನು ಏರ್ಪಡಿಸುತ್ತೇನೆ. ಸ್ವತಃ ನಾನೇ ಈವರೆಗೆ 28 ಬಾರಿ ರಕ್ತದಾನ ಮಾಡಿದ್ದೇನೆ. ಮೊದಲೆಲ್ಲ ಸಾಮಾಜಿಕ ಜಾಲತಾಣಗಳಿರಲಿಲ್ಲ. ರಕ್ತ ಹೊಂದಿಸುವುದು ಕಷ್ಟ ಇತ್ತು. ಹಾಗಾಗಿ ಒಂದು ಡೈರಿಯನ್ನು ನನ್ನ ಬಳಿ ಸದಾ ಇರಿಸಿಕೊಂಡಿರುತ್ತಿದ್ದೆ. ಪರಿಚಯದವರು ಸಿಕ್ಕರೆ ಅವರ ಫೋನ್‌ ನಂಬರ್‌, ವಿಳಾಸ ಬರೆದುಕೊಳ್ಳುತ್ತಿದ್ದೆ. ಯಾರಿಗಾದರೂ ರಕ್ತದ ಅಗತ್ಯವಿರುವುದು ನನಗೆ ಗೊತ್ತಾದರೆ, ಅವರಲ್ಲಿ ಯಾರನ್ನಾದರೂ ಸಂಪರ್ಕಿಸಿ ರಕ್ತ ಒದಗಿಸಲು ಸಹಾಯ ಮಾಡುತ್ತಿದ್ದೆ.

– ನನ್ನ ಸೌಂದರ್ಯ ಅಜ್ಜಿಯಿಂದ ಬಂದಿದ್ದು!
– ವಿವೇಕಾನಂದ ರ ಮೇಲೆ ನನಗೆ ಕ್ರಶ್‌ ಇತ್ತು!
– 28 ಬಾರಿ ರಕ್ತದಾನ ಮಾಡಿದೀನಿ ಗೊತ್ತಾ?

* ಚೇತನ ಜೆ.ಕೆ. 

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.