Kaatera: ಓಟಿಟಿಯಲ್ಲಿ ರಿಲೀಸ್ ಆದ ಐದೇ ದಿನದಲ್ಲಿ ಹೊಸ ದಾಖಲೆ ಬರೆದ ʼಕಾಟೇರʼ
Team Udayavani, Feb 14, 2024, 4:11 PM IST
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ʼಕಾಟೇರʼ ಬಾಕ್ಸ್ ಆಫೀಸ್ ನಲ್ಲಿ ಹತ್ತಾರು ದಾಖಲೆಗಳನ್ನು ಬ್ರೇಕ್ ಮಾಡಿದೆ. ಓಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಿದ್ದರೂ, ಇನ್ನು ಕೂಡ ಕೆಲ ಥಿಯೇಟರ್ ನಲ್ಲಿ ಓಡುತ್ತಿದೆ.
ಡಿಬಾಸ್ ವೃತ್ತಿ ಬದುಕಿನಲ್ಲಿ ʼಕಾಟೇರʼ ಒಂದು ಹೊಸ ದಾಖಲೆ ಬರೆದ ಸಿನಿಮಾವಾಗಿದೆ. ʼರಾಬರ್ಟ್ʼ ಬಳಿಕ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ದರ್ಶನ್ ಅವರೊಂದಿಗೆ ʼಕಾಟೇರʼದ ಮೂಲಕ ಮತ್ತೊಂದು ದೊಡ್ಡ ಹಿಟ್ ಕೊಟ್ಟಿದ್ದಾರೆ. ಕನ್ನಡದಲ್ಲಿ ಮಾತ್ರ ತೆರೆಕಂಡ ʼಕಾಟೇರʼ ಕಲೆಕ್ಷನ್ ವಿಚಾರದಲ್ಲಿ ಯಾವುದಕ್ಕೂ ಕಮ್ಮಿಯಿಲ್ಲದಂತೆ 100 ಕೋಟಿ ಗಳಿಕೆ ಕಂಡಿದೆ.
ಕೆಲ ಥಿಯೇಟರ್ ನಲ್ಲಿ ರನ್ನಿಂಗ್ ಆಗುತ್ತಿರುವಾಗಲೇ ಸಿನಿಮಾ ಫೆ.9 ರಂದು ಓಟಿಟಿಗೆ ಲಗ್ಗೆ ಇಟ್ಟಿದೆ. ಜೀ5 ಯಲ್ಲಿ ʼಕಾಟೇರʼ ಸ್ಟ್ರೀಮ್ ಆಗುತ್ತಿದೆ. ಓಟಿಟಿಯಲ್ಲಿ ರಿಲೀಸ್ ಆದ ಐದೇ ದಿನದಲ್ಲಿ ಹೊಸ ದಾಖಲೆ ಬರೆದಿದೆ. 100 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳನ್ನು ʼಕಾಟೇರʼ ದಾಟಿದೆ. ಆ ಮೂಲಕ ಓಟಿಟಿಯಲ್ಲೂ ʼಕಾಟೇರʼ ಹವಾ ಜೋರಾಗಿದೆ.
70 ರ ದಶಕದ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ರೈತರು ಮತ್ತು ಕೆಳವರ್ಗದ ಜನರು ಶ್ರೀಮಂತ ಭೂಮಾಲೀಕರಿಂದ ಹೇಗೆ ತುಳಿತಕ್ಕೆ ಒಳಗಾಗುತ್ತಾರೆ ಎನ್ನುವುದನ್ನು ಸಿನಿಮಾದಲ್ಲಿ ಹೇಳಲಾಗಿದೆ.
ʼಕಾಟೇರʼ ದ ಬಳಿಕ ದರ್ಶನ್ ಅವರು ಪ್ರಕಾಶ್ ವೀರ್ ನಿರ್ದೇಶನದ ʼಡೆವಿಲ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಅನೌನ್ಸ್ ಮೆಂಟ್ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಆಗುವ ಸಾಧ್ಯತೆಯಿದೆ.
ದಾಖಲೆಯ ಸರದಾರ ಅಂತ ಸುಮ್ನೆ ಕರಿಯಲ್ಲ ಇವ್ರ್ನ. 100 ಮಿಲಿಯನ್ ಮಿನಟ್ಸ್ ವೀಕ್ಷಣೆ ದಾಟಿದ ಕಾಟೇರ. ನೋಡಿ ನಿಮ್ಮ ZEE5 ನಲ್ಲಿ.#Kaatera #KaateraOnZEE5 @dasadarshan @TharunSudhir @RocklineEnt @Aradhanaa_r @harimonium @aanandaaudio @IamJagguBhai #DBossMassOnZEE5 #WatchOnZEE5 #ZEE5 #ZEE5Kannada pic.twitter.com/KXDcbVljNr
— ZEE5 Kannada (@ZEE5Kannada) February 14, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.