‘ಕಳೆದೇ ಹೋದೆ ನಾನು ಅರಸುತ್ತಾ ನನ್ನನ್ನೇ’: ಚಂಬಲ್ ಚಿತ್ರದ ಹಾಡಿನ ಮೋಡಿ
Team Udayavani, Feb 14, 2019, 12:01 PM IST
ಈಗಾಗಲೇ ಟ್ರೈಲರ್ ಮೂಲಕ ಬಹುನಿರೀಕ್ಷೆ ಹುಟ್ಟಿಸಿರುವ ಕನ್ನಡ ಚಿತ್ರ ‘ಚಂಬಲ್’. ನೀನಾಸಂ ಸತೀಶ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿರುವ ಪಾತ್ರದಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಗೊಂಡು ಸೆಸ್ಸೇಷನ್ ಹುಟ್ಟುಹಾಕಿತ್ತು.
ಇದೀಗ ಚಿತ್ರತಂಡವು ‘ಚಂಬಲ್’ನ ಹಾಡನ್ನು ಬಿಡುಗಡೆ ಮಾಡಿದ್ದು ಜಯಂತ್ ಕಾಯ್ಕಣಿ ಅವರ ಸಾಹಿತ್ಯ ಗಮನ ಸೆಳೆಯುವಂತಿದೆ. ಒಂದೊಂದು ಸಾಲುಗಳೂ ಅರ್ಥಪೂರ್ಣವಾಗಿ ಮೂಡಿಬಂದಿರುವುದು ಈ ಹಾಡಿನ ವಿಶೇಷತೆಯಾಗಿದೆ.
‘ಕಳೆದೇ ಹೋದೆ ನಾನು ಅರಸುತ್ತ ನನ್ನನ್ನೇ ಹಿಡಿದ ದಾರಿಯೊಂದು ಮರೆತಂತೆ ಊರನ್ನೇ’ ಎಂಬ ಸಾಲುಗಳಿಂದ ಪ್ರಾರಂಭಗೊಳ್ಳುವ ಈ ಹಾಡಿನ ಉಳಿದ ಸಾಲುಗಳೂ ಸಹ ಅರ್ಥಪೂರ್ಣವಾಗಿವೆ. ‘ಬೀಸೋ ಗಾಳಿಯೇ ಹೇಳು ಯಾರ ಸಾಕ್ಷಿ ನೀನು’, ‘ಪ್ರತಿಯೊಂದು ಮುಂಜಾವು ನನ್ನನ್ನು ಮೀರೋಕೆ ಹೊಸದಾಗಿ ಸಿಕ್ಕಂತಹ ಅವಕಾಶವೇ’, ‘ಮನಸ್ಸಲ್ಲಿ ಕೂತಂತ ಮತಬೇಧದ ಕಸವ ಗುಡಿಸೋದೆ ನಿಜವಾದ ಅಧ್ಯಾತ್ಮವೇ’ ಅನ್ನುವಂತಹ ಅರ್ಥಪೂರ್ಣ ಸಾಲುಗಳು ಈ ಪದ್ಯ ಪೂರ್ತಿ ನಿಮಗೆ ಸಿಗುತ್ತದೆ.
ಜಯಂತ್ ಕಾಯ್ಕಿಣಿಯವರ ಸಾಹಿತ್ಯಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಕೇಳುಗರಿಗೆ ಹಿತ ನೀಡುತ್ತದೆ. ಉದಿತ್ ಹರಿತಾಸ್ ಧ್ವನಿ ಮೋಡಿ ಮಾಡುತ್ತದೆ. ಜಾಕೊಬ್ ವರ್ಗೀಸ್ ಅವರು ಈ ಚಿತ್ರಕ್ಕೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ದಿನೇಶ್ ರಾಜ್ ಕುಮಾರ್ ಮತ್ತು ಮ್ಯಾಥ್ಯೂವರ್ಗೀಸ್ ಅವರು ‘ಚಂಬಲ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.