ಚಂಬಲ್‌ನಲ್ಲಿ ಸತೀಶ್‌ ನರ್ವಸ್‌ ಆಗಿದ್ದು ಯಾಕೆ ಗೊತ್ತಾ?


Team Udayavani, Dec 24, 2018, 3:59 PM IST

chambal108.jpg

ನೀನಾಸಂ ಸತೀಶ್‌ ನಾಯಕರಾಗಿರುವ “ಚಂಬಲ್‌’ ಚಿತ್ರದ ಟೀಸರ್‌ ಈಗಾಗಲೇ ಬಿಡುಗಡೆಯಾಗಿದೆ. ಟೀಸರ್‌ ನೋಡಿದವರಿಂದ ಇದೊಂದು ಸೂಕ್ಷ್ಮ ವಿಚಾರಗಳಿರುವ ಚಿತ್ರ ಎಂದು ಬಿಂಬಿತವಾಗಿದೆ. ಜೇಕಬ್‌ ವರ್ಗಿಸ್‌ ಈ ಚಿತ್ರದ ನಿರ್ದೇಶಕರು. ಈಗಾಗಲೇ ಜೇಕಬ್‌ “ಪೃಥ್ವಿ’ ಹಾಗೂ “ಸವಾರಿ 2′ ಚಿತ್ರಗಳನ್ನು ಮಾಡಿದ್ದು, ಆ ಎರಡೂ ಚಿತ್ರಗಳಿಗಿಂತ “ಚಂಬಲ್‌’ ಬೇರೆ ತರಹದ ಚಿತ್ರವಾಗುತ್ತದೆ ಎಂಬ ನಂಬಿಕೆ ಇದೆ. 

ನೀನಾಸಂ ಸತೀಶ್‌ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಕಥೆಯ ಸೂಕ್ಷ್ಮತೆ. ಈ ಚಿತ್ರ ಮಾಡುವಾಗ ಮೊದಲ ಬಾರಿಗೆ ಸತೀಶ್‌ ನರ್ವಸ್‌ ಆದರಂತೆ. “ನಾನು ಇಷ್ಟೊಂದು ಸಿನಿಮಾ ಮಾಡಿದರೂ ಯಾವತ್ತೂ ನರ್ವಸ್‌ ಆಗಿರಲಿಲ್ಲ. ಆದರೆ, ಈ ಸಿನಿಮಾ ಮಾಡುವಾಗ ತುಂಬಾ ನರ್ವಸ್‌ ಆದೆ. 10-15 ಟೇಕ್‌ ತಗೊಂಡರೂ ಓಕೆಯಾಗುತ್ತಿರಲಿಲ್ಲ. ಆದರೆ, ಕಾರಣ ನಿರ್ದೇಶಕರ ಕಲ್ಪನೆ. ತುಂಬಾ ಸೆಟಲ್ಡ್‌ ಆದ ನಟನೆ ಬೇಕಿತ್ತು. ಸಣ್ಣ ಸಣ್ಣ ಅಂಶಗಳನ್ನು ಕೂಡಾ ತುಂಬಾ ಗಮನದಲ್ಲಿರಿಸಿಕೊಂಡು ಹೀಗೆ ಬರಬೇಕೆಂದು ಹೇಳುತ್ತಿದ್ದರು.

ಹಾಗಾಗಿ, ನನಗೆ ಈ ಸಿನಿಮಾ ಹೊಸ ಅನುಭವ ಕೊಟ್ಟಿದೆ. ನಾನೇನಾದರೂ ಈ ಸಿನಿಮಾನಾ ಒಪ್ಪದೇ ಇದ್ದರೆ ದೊಡ್ಡ ನಷ್ಟವಾಗುತ್ತಿತ್ತು’ ಎಂದು “ಚಂಬಲ್‌’ ಬಗ್ಗೆ ಹೇಳಿಕೊಳ್ಳುತ್ತಾರೆ ಸತೀಶ್‌. ಎಲ್ಲಾ ಓಕೆ, “ಚಂಬಲ್‌’ ಶೀರ್ಷಿಕೆ ಕಥೆಗೆ ಹೇಗೆ ಹೊಂದಿಕೊಳ್ಳುತ್ತದೆ ಎಂದು ನೀವು ಕೇಳಬಹುದು. ಅದಕ್ಕೂ ಸತೀಶ್‌ ಉತ್ತರಿಸುತ್ತಾರೆ. “ಡಕಾಯಿತರಿರುವ ಜಾಗದಲ್ಲಿನ ಹುಡುಗನ ಕಥೆ. ಹಾಗಂತ ಚಂಬಲ್‌ ಕಣಿವೆಯ ಡಕಾಯಿತರಲ್ಲ. ನಗರದ ಡಕಾಯಿತರು’ ಎನುವುದು ಸತೀಶ್‌ ಮಾತು. 

ಚಿತ್ರದಲ್ಲಿ ಸೋನು ನಾಯಕಿಯಾಗಿ ನಟಿಸಿದ್ದಾರೆ. ಇನ್ನು ತನಗೆ ಯಾರೂ ಅವಕಾಶ ಕೊಡಲ್ಲ ಎಂದು ಬೇಜಾರಲ್ಲಿದ್ದ ಸಮಯದಲ್ಲಿ ನಿರ್ದೇಶಕ ಜೇಕಬ್‌ ವರ್ಗಿಸ್‌ ಕರೆ ಮಾಡಿ, “ಚಂಬಲ್‌’ ಸಿನಿಮಾದಲ್ಲಿ ಅವಕಾಶ ಕೊಟ್ಟರಂತೆ. ಮೊದಲ ಭೇಟಿಯಲ್ಲಿ ಸೋನು, “ಇದು ಯಾವ ತರಹದ ಸಿನಿಮಾ’ ಎಂದಾಗ, “ಎಲ್ಲರೂ ಕುಳಿತು ನೋಡುವಂತಹ ಸಿನಿಮಾ’ ಎಂದಷ್ಟೇ ಉತ್ತರಿಸಿದರಂತೆ ಜೇಕಬ್‌. ಚಿತ್ರದಲ್ಲಿ ಸೋನು ಸಾಮಾನ್ಯ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಹೆಚ್ಚು ಮೇಕಪ್‌ ಕೂಡಾ ಮಾಡಿಲ್ಲವಂತೆ. ರೋಜರ್‌ ನಾರಾಯಣ್‌ ಕೂಡಾ ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ. ಈ ಅವಕಾಶವನ್ನು ಜೇಕಬ್‌ ಅವರಲ್ಲಿ ಅವರೇ ಕೇಳಿಕೊಂಡು ಪಡೆದರಂತೆ. 

ಟಾಪ್ ನ್ಯೂಸ್

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

shreyas manju’s Vishnupriya movie releasing on Feb 21

ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ

31 days kannada movie

Kannada Movie: ನಿರಂಜನ್‌ ಶೆಟ್ಟಿಯ ʼ31 ಡೇಸ್‌ʼ ಚಿತ್ರ

kuladalli keelyavudo movie

Sandalwood: ಫಸ್ಟ್‌ಲುಕ್‌ನಲ್ಲಿ”ಕುಲದಲ್ಲಿ ಕೀಳ್ಯಾವುದೋ’

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.