ಚಂಬಲ್ ಕಣಿವೇಲಿ ಅಡಗಿದೆಯಾ ನೀನಾಸಂ ಸತೀಶ್ ಅದೃಷ್ಟ?
Team Udayavani, Feb 20, 2019, 5:16 AM IST
ಜೇಕಬ್ ವರ್ಗೀಸ್ ನಿರ್ದೇಶನದ ಚಂಬಲ್ ಚಿತ್ರ ಈ ವಾರ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ನೀನಾಸಂ ಸತೀಶ್ ಈ ಸಿನಿಮಾದಲ್ಲಿ ವಿಭಿನ್ನವಾದ ಗೆಟಪ್ಪಿನಲ್ಲಿ, ಬೇರೆಯದ್ದೇ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಖುದ್ದು ಸತೀಶ್ ಹೇಳಿಕೊಂಡಿರೋ ಪ್ರಕಾರ ಚಂಬಲ್ ಎಂಬುದು ಅವರ ಇಮೇಜ್ ಅನ್ನು ಬದಲಿಸಲಿರೋ ಚಿತ್ರ!
ಸತೀಶ್ ಪಾಲಿಗೆ ಅಯೋಗ್ಯ ಚಿತ್ರದ ಮೂಲಕವೇ ಅದೃಷ್ಟ ಖುಲಾಯಿಸಿದೆ. ಆದರೆ ಅದನ್ನೂ ಮೀರಿಸುವಂಥಾ ಮಹಾ ಅದೃಷ್ಟವೊಂದು ಚಂಬಲ್ ಕಣಿವೇಲಿ ಕಾದು ಕೂತಿರುವಂತಿದೆ. ಸತೀಶ್ ಸಾಮಾನ್ಯ ಹುಡುಗನೊಬ್ಬ ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗ ಎಂತೆಂಥಾ ಪಡಿಪಾಟಲುಗಳನ್ನು ಅನುಭವಿಸಬಹುದೋ ಅದೆಲ್ಲವನ್ನೂ ಎದುರುಗೊಂಡಿರುವವರು. ಅದೆಷ್ಟೋ ನೋವು ನಿರಾಸೆಗಳನ್ನ ನುಂಗಿಕೊಂಡೇ ಮೇಲೆದ್ದು ನಿಂತವರು. ಅಂಥಾ ಶ್ರಮವೆಲ್ಲವೂ ಚಂಬಲ್ ಮೂಲಕ ಸಾರ್ಥಕ್ಯ ಪಡೆಯೋ ಲಕ್ಷಣಗಳೇ ದಟ್ಟವಾಗಿವೆ.
ಮೊದಲು ಜೇಕಬ್ ವರ್ಗೀಸ್ ಕಥೆ ಹೇಳಿದಾಗಲೇ ಥ್ರಿಲ್ ಆಗಿದ್ದವರು ನೀನಾಸಂ ಸತೀಶ್. ಆದರೆ ಚಿತ್ರೀಕರಣದ ಪ್ರತೀ ಹಂತದಲ್ಲಿಯೂ ಕೂಡಾ ಹಲವಾರು ನಿಗೂಢಗಳನ್ನು ಜಾಹೀರು ಮಾಡಿದ ನಿರ್ದೇಶಕರ ಇ್ಫನ್ಮೆ ಕಂಡು ಸತೀಶ್ ಬೆರಗಾಗಿದ್ದರಂತೆ. ಚಿತ್ರೀಕರಣ ಮುಗಿಯುತ್ತಾ ಬಂದಂತೆಲ್ಲ ತಾನೆಂಥಾ ಒಳ್ಳೆ ಕಥೆಯನ್ನು ಒಪ್ಪಿಕೊಂಡಿದ್ದೇನಲ್ಲ ಅನ್ನೋ ಆತ್ಮತೃಪ್ತಿ ಸತೀಶ್ ಅವರನ್ನು ಆವರಿಸಿಕೊಂಡಿತ್ತಂತೆ.
ಬರೀ ನಾಯಕ ನೀನಾಸಂ ಸತೀಶ್ ಅವರಿಗೆ ಮಾತ್ರವಲ್ಲ; ಪುಟ್ಟ ಪಾತ್ರ ನಿರ್ವಹಿಸಿದ ಕಲಾವಿದರಿಗೂ ಇಂಥಾದ್ದೇ ಭಾವ ತುಂಬಿರೋ ಈ ಸಿನಿಮಾ ಖಂಡಿತವಾಗಿಯೂ ಪ್ರೇಕ್ಷಕರ ಮನ ಗೆಲ್ಲುವಂತಿದೆ. ಅದು ನಿಜವಾಗಲು ದಿನಗಳಷ್ಟೇ ಬಾಕಿ ಉಳಿದಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.