ಯುವಕರ ಎದೆಯಲ್ಲಿ ಕಚಗಳಿಯ “ಫೈರ್’ ಹಚ್ಚಿದ ಚಂದನ್ ಶೆಟ್ಟಿ: Watch
Team Udayavani, Aug 28, 2018, 4:16 PM IST
ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿಯ “3ಪೆಗ್’, “ಹಾಳಾಗೋದೆ’, “ಚಾಕ್ಲೇಟ್ ಗರ್ಲ್’, “ಟಕಿಲ’, ಮತ್ತು “ಟಾಪ್ ಟು ಬಾಟಮ್ ಗಾಂಚಾಲಿ’ ರ‍್ಯಾಪ್ ಸಾಂಗ್ ದಾಖಲೆಯ ಬೆನ್ನಲ್ಲೇ ಇದೀಗ “ಫೈರ್’ ಎಂಬ ಹೊಸ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಈ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಇದುವೆರೆಗೆ 6 ಲಕ್ಷಕ್ಕೂ ಹೆಚ್ಚು ರ‍್ಯಾಪ್‍ಪ್ರಿಯರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.
ಈ ಹಾಡಿಗೆ ಸಂಗೀತ ಸಾಹಿತ್ಯವನ್ನು ಚಂದನ್ ಶೆಟ್ಟಿ ಅವರೇ ನೀಡಿದ್ದಾರೆ. ಈ ಹಿಂದಿನಂತೆ ಇಲ್ಲಿಯೂ ಚಂದನ್ ಮ್ಯೂಸಿಕ್ ಮತ್ತು ಲಿರಿಕ್ಸ್ ಗಮನ ಸೆಳೆಯುತ್ತದೆ. “ಟಕಿಲ’, “ಟಾಪ್ ಟು ಬಾಟಮ್ ಗಾಂಚಾಲಿ’ ಹಾಡಿನ ಬಳಿಕ ಚಂದನ್ “ಫೈರ್’ ಲಿರಿಕಲ್ ವಿಡಿಯೋ ಹಾಡನ್ನು ಮಾಡಿದ್ದು, ಮತ್ತೊಮ್ಮೆ ಯುವಕರ ಎದೆಯಲ್ಲಿ ಕಚಗಳಿಯ ಫೈರ್ ಹಚ್ಚಿದ್ದಾರೆ. ಚಂದನ್ ಶೆಟ್ಟಿಯ “ಫೈರ್’ ರ‍್ಯಾಪ್ ಸಾಹಿತ್ಯ ಇಲ್ಲಿದೆ.
ಹಚ್ಚ ಬನ್ನಿ Fire
ಬನ್ನಿ ಬನ್ನಿ ಹಚ್ಚ ಬನ್ನಿ Fire
ಹಚ್ಚ ಬನ್ನಿ Fire
ಬನ್ನಿ ಬನ್ನಿ ಹಚ್ಚ ಬನ್ನಿ Fire
ಹಾಡಿದುನ್ನೇ ಹಾಡಿ ನಂಗು ಸಾಕಾಗಿದೆ
ಕೇಳಿದುನ್ನೇ ಕೇಳಿ ನಿಮಗೂ Bore ಆಗಿದೆ
ಹಾಡುತೀನಿ ಕೇಳಿ ಕನ್ನಡ Rap
ನಿಮಗೆ ಇಷ್ಟ ಆಗದಿದ್ರೂ ಒಮ್ಮೆ ಹೊಡಿರಿ Clap
ಕಾಣಲೇ ಬೇಕು ದೊಡ್ಡ ಕನಸ
ನನಸು ಮಾಡಬೇಕಂದ್ರೆ ಮಾಡು ಕೆಲಸ
ದಿವಸ ಕಷ್ಟನೋ ಸುಖಾನೋ ಲಾಭಾನೂ ನಷ್ಟನೋ
ದುಡಿತಿರು ನಿಂಗೆ ಗೊತಿಲ್ದಂಗೆ ನೀ King ಆಗುವೆ
ಬೇಜಾರು ಆಗಬೇಡಿ ಗೆಳೆಯರೇ
ಭಗವಂತ
ನಮಗಂತ ಲೈಫು ಕೊಟ್ಟವರೇ
ಹಂಗಂತ
ಬೇಡದನ್ನ ಮಾಡಿ Time Waste ಮಾಡಬೇಡ
ಶತ್ರುಗೆ ಆಗಲಿ ಕೆಟ್ಟದನ್ನ ಬಯಸಬೇಡ
ಕೇಳುತ್ತೀರೋ ಕಿವಿ ನಿಮ್ದು
ಹೌದಪ್ಪ
ಹಾಡುತ್ತೀರೋ ಬಾಯಿ ನಂದು
ಹಾಡಪ್ಪ
ಎಲ್ಲರೂ ಇಂದು ಖುಷಿಯಲ್ಲಿ ಮಿಂದು
ಪ್ರೀತಿಇಂದ ಕನ್ನಡದ ದೀಪವನು ಹಚ್ಚಬನ್ನಿ
Fire
ಬನ್ನಿ ಬನ್ನಿ ಹಚ್ಚ ಬನ್ನಿ Fire
ಹಚ್ಚ ಬನ್ನಿ Fire
ಬನ್ನಿ ಬನ್ನಿ ಹಚ್ಚ ಬನ್ನಿ Fire
ಹಾಡಿದುನ್ನೇ ಹಾಡಿ ನಂಗು ಸಾಕಾಗಿದೆ
ಕೇಳಿದುನ್ನೇ ಕೇಳಿ ನಿಮಗೂ Bore ಆಗಿದೆ
ಹಾಡುತೀನಿ ಕೇಳಿ ಕನ್ನಡ Rap
ನಿಮಗೆ ಇಷ್ಟ ಆಗದಿದ್ರೂ ಒಮ್ಮೆ ಹೊಡಿರಿ Clap
ನ ತುಂಬ ಸಲ ಒಂದೇ ಕನಸು ಕಂಡಿದಿದ್ದೆ
ನನ್ ಹಾಡು ಪರ್ದೆಸದಲ್ಲಿ Play ಆಗಬೇಕೆಂದು
ಹಾಗೆಯೆ ಬೇರ್ ಬೇರೆ ದೇಶದ ಪ್ರಜೆಗಳ್ಳೆಲ್ಲ
ಕನ್ನಡ ಹಾಡನ್ನು ಕೇಳಿ ಎಲ್ಲ ಖುಷಿಯಾಗುತ
ಕೂಡಿ ನಲಿದು ತಾಳಕ್ಕೆ ಕುಣಿದು
ಅಹ್ ಹ ಕನ್ನಡವೇ ಸತ್ಯ ಅಂತ ಮೆರೆದು
ಆ ಮರಳುಗಾಡಿನಲ್ಲಿ ಆ ಗುಡ್ಡಗಾಡಿನಲ್ಲಿ
ಆ ಬಯಲುಸೀಮೆಯಲ್ಲಿ ಆ ಬರಡುಭೂಮಿಯಲ್ಲಿ
ಆ ದೊಡ್ಡ ದೇಶದಿಂದ ಈ ಚಿಕ್ಕ ಹಳ್ಳಿವರೆಗೂ
ಅಹ್ ಹ ಎಲ್ಲೆಲ್ಲೂ ಕನ್ನಡವೇ ಹರಿದಾಡಿದೆ
ನಂಗೆ ಖುಷಿಯೋ ತುಂಬಾನೇ ಖುಷಿಯೋ
ನನ್ನಾಸೆ ತೀರಿತೆಂದು ಬಹಳಾನೇ ಖುಷಿಯೋ
ಹಚ್ಚ ಬನ್ನಿ Fire
ಬನ್ನಿ ಬನ್ನಿ ಹಚ್ಚ ಬನ್ನಿ Fire
ಹಚ್ಚ ಬನ್ನಿ Fire
ಬನ್ನಿ ಬನ್ನಿ ಹಚ್ಚ ಬನ್ನಿ Fire
ನಮಜ್ಜಿ ಹಾಡ್ತಿದ್ರು ಬಾಯಿತುಂಬ ಜಾನಪದ
ಕನ್ನಡನಾಡಲ್ಲಿ ಈಗ ಬರಿ Rap ಪದ
ಹಾಡುತಿರೋದು ನಾನು ಕನ್ನಡ Rap
ನಿಮಗೆ ಇಷ್ಟವಾಗದಿದ್ರೂ ಒಮ್ಮೆ ಹೊಡಿರಿ Clap
ಭಗವಂತ ಕೊಟ್ಟಿರೋ ಲೈಫು ಒಂದೇ
ಶುರುಮಾಡುನಿ ಕೆಲ್ಸಮಾಡಕೆ ಇಂದೇ
ಕಷ್ಟನೋ ಸುಖಾನೋ ಲಾಭಾನೂ ನಷ್ಟನೋ
ದುಡಿ ನಿಂಗೆ ಗೊತಿಲ್ದಂಗೆ ನೀ King ಆಗುವೆ
ಕೇಳುತ್ತೀರೋ ಕಿವಿ ನಿಮ್ದು
ಹೌದಪ್ಪ
ಹಾಡುತ್ತೀರೋ ಬಾಯಿ ನಂದು
ಹಾಡಪ್ಪ
ಎಲ್ಲರೂ ಇಂದು ಖುಷಿಯಿಂದ ಎಂದು
ಇರುತೀವಿ ಅಂತ ನಿಮ್ಮ ಮೇಲೆ ನೀವು ಆಣೆ ಮಾಡಿ
Fire
ಬನ್ನಿ ಬನ್ನಿ ಹಚ್ಚ ಬನ್ನಿ Fire
ಹಚ್ಚ ಬನ್ನಿ Fire
ಬನ್ನಿ ಬನ್ನಿ ಹಚ್ಚ ಬನ್ನಿ Fire
Heyya this is ಕನ್ನಡ Rapper ಚಂದನ್ ಶೆಟ್ಟಿ
ಶಬಾಷ್ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.