Sandalwood: ಚಂದನವನ ಫಿಲಂ ಕ್ರಿಟಿಕ್ಸ್ ಅಕಾಡೆಮಿ ಟ್ರೋಫಿ ಅನಾವರಣ
Team Udayavani, Jan 18, 2024, 6:25 PM IST
“ಚಂದನವನ ಫಿಲಂ ಕ್ರಿಟಿಕ್ಸ್ ಅಕಾಡೆಮಿ’ಯ 5ನೇ ವರ್ಷದ ಪ್ರಶಸ್ತಿಗಳ ನಾಮ ನಿರ್ದೇಶನ ಘೋಷಣೆ ಮತ್ತು ಟ್ರೋಫಿ ಅನಾವರಣ ಇತ್ತೀಚೆಗೆ ನಡೆಯಿತು. ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ನಟಿ ಅಮೂಲ್ಯ ಈ ಬಾರಿಯ “ಚಂದನವನ ಫಿಲಂ ಕ್ರಿಟಿಕ್ಸ್ ಅಕಾಡೆಮಿ ಅವಾಡ್ಸ್’ನ ಟ್ರೋಫಿಯನ್ನು ಅನಾವರಣಗೊಳಿಸಿದರು.
ನಟ ಶರಣ್ ನಾಮ ನಿರ್ದೇಶನದ ಪಟ್ಟಿಯನ್ನು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ 5ನೇ ವರ್ಷದ ಪ್ರಶಸ್ತಿಗಳಿಗಾಗಿ ನಾಮ ನಿರ್ದೇಶನ ಆಯ್ಕೆಗಳನ್ನು ಘೋಷಣೆ ಮಾಡಿದ್ದು ದರ್ಶನ್ ನಟನೆಯ “ಕಾಟೇರ’ ಸಿನಿಮಾ ಅತೀ ಹೆಚ್ಚು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ರಕ್ಷಿತ್ ನಟನೆಯ “ಸಪ್ತ ಸಾಗರದಾಚೆ ಎಲ್ಲೋ’ ಎರಡನೇ ಸ್ಥಾನವನ್ನು ಅಲಂಕರಿಸಿದೆ.
ಅತ್ಯುತ್ತಮ ನಟ (ದರ್ಶನ್) ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ (ತರುಣ್ ಸುಧೀರ್) ಸೇರಿದಂತೆ “ಕಾಟೇರ’ ಸಿನಿಮಾ ಬರೋಬ್ಬರಿ 15 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ಅತ್ಯುತ್ತಮ ನಟ (ರಕ್ಷಿತ್ ಶೆಟ್ಟಿ) ಸೇರಿದಂತೆ “ಸಪ್ತಸಾಗರದಾಚೆ ಎಲ್ಲೋ’ 13 ವಿಭಾಗಗಳಲ್ಲಿ ಕಾಣಿಸಿಕೊಂಡಿದೆ.
ಐದು ಚೊಚ್ಚಲ ಪ್ರಶಸ್ತಿಗಳು ಸೇರಿದಂತೆ ಒಟ್ಟು 25 ವಿಭಾಗಗಳಲ್ಲಿ ಈ ನಾಮ ನಿರ್ದೇಶನಗೊಂಡಿದ್ದು, ಚೊಚ್ಚಲ ವಿಭಾಗದಲ್ಲಿ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, “ಡೇರ್ ಡೆವಿಲ್ ಮುಸ್ತಫಾ’, “ಆಚಾರ್ ಅಂಡ್ ಕೋ’ ಚಿತ್ರಗಳು ಕೂಡ ನಾನಾ ವಿಭಾಗಗಳಲ್ಲಿ ಕಾಣಿಸಿಕೊಂಡು ಪೈಪೋಟಿ ನಡೆಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
New Policy: ಜಾನಪದ ಕ್ರೀಡೆ ಕಂಬಳಕ್ಕೆ ಅಂತಿಮ ನಿಯಮಾವಳಿ ಸಿದ್ಧ
Horosocpe: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಲಾಭ
Statue Of Unity: ದೇಶ ವಿಭಜಿಸಲು ಕೆಲವು ಶಕ್ತಿಗಳ ಯತ್ನ: ಪ್ರಧಾನಿ ನರೇಂದ್ರ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.