ಮಾಲ್ಗುಡಿಯಲ್ಲಿ ಚೇತನ್!
Team Udayavani, Aug 23, 2017, 6:51 PM IST
“ಆ ದಿನಗಳು” ಚೇತನ್ ಅಭಿನಯದಲ್ಲಿ ಒಂದು ಚಿತ್ರ ನಿರ್ದೇಶಿಸುತ್ತಿರುವುದಾಗಿ ಪಿ.ಸಿ. ಶೇಖರ್ ಮದುವೆಗೆ ಮುನ್ನ ಹೇಳಿಕೊಂಡಿದ್ದರು. ಈಗ ಮದುವೆ ಮುಗಿದು, ಶೇಖರ್ ಕೆಲಸಕ್ಕೆ ಹಾಜರಾಗಿದ್ದಾರೆ. ಚೇತನ್ ಅಭಿನಯದ ಚಿತ್ರಕ್ಕೆ ಚಾಲನೆ ನೀಡಿದ್ದು, ಅಕ್ಟೋಬರ್‌ನಲ್ಲಿ ಚಿತ್ರ ಪ್ರಾರಂಭವಾಗುವ ಸಾಧ್ಯತೆ ಇದೆ. ಚಿತ್ರಕ್ಕೆ ಪಿ.ಸಿ. ಶೇಖರ್ ಇಡಬೇಕೆಂದು ಇರುವ ಹೆಸರೇನು ಗೊತ್ತಾ? “ಮಾಲ್ಗುಡಿ’.
ಹೌದು, ಎಲ್ಲಾ ಅಂದುಕೊಂಡಂತೆ ಆದರೆ, ಈ ಚಿತ್ರಕ್ಕೆ “ಮಾಲ್ಗುಡಿ’ ಎಂಬ ಹೆಸರನ್ನು ಇಡಬೇಕೆಂದು ಶೇಖರ್ ಅಂದುಕೊಂಡಿದ್ದಾರೆ. ಈ ಕುರಿತು ಮಾತನಾಡುವ ಅವರು, “ಇಲ್ಲಿ ಮಾನವೀಯ ಮೌಲ್ಯಗಳಿವೆ. ಫಿಲಾಸಫಿಕಲ್ ಮಾತುಗಳೊಂದಿಗೆ ಒಂದು ಅರ್ಥಪೂರ್ಣ ಬದುಕಿನ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಚಿತ್ರದ ಕಲ್ಪನೆಯೇ ದೊಡ್ಡದಿದೆ. ಹಾಗಾಗಿ, ಒಂದು ಊರನ್ನೇ ಕ್ರಿಯೇಟ್ ಮಾಡಿ ಮಾಡುವ ತಯಾರಿ ನಡೆಯುತ್ತಿದೆ.
ಚಿತ್ರಕ್ಕೆ “ಮಾಲ್ಗುಡಿ’ ಎಂಬ ಶೀರ್ಷಿಕೆ ಸೂಕ್ತ ಎನಿಸಿರುವುದರಿಂದ ಅದನ್ನೇ ಇಡುವ ಯೋಚನೆ ಇದೆ. ಆದರೆ, ರಕ್ಷಿತ್ ಶೆಟ್ಟಿ ಬಳಿ ಆ ಶೀರ್ಷಿಕೆ ಇದೆ. ಅವರು ಆ ಸಿನಮಾ ಮಾಡದಿದ್ದರೆ, ನಾನು ಅವರ ಬಳಿ “ಮಾಲ್ಗುಡಿ’ ಶೀರ್ಷಿಕೆ ಕೇಳಿ ಪಡೆಯುತ್ತೇನೆ. ಕೊಟ್ಟರೆ ಖುಷಿ. ಇಲ್ಲವಾದರೆ ಬೇರೆ ಶೀರ್ಷಿಕೆ ಯೋಚಿಸ್ತೀನಿ. ದೊಡ್ಡ ಕ್ಯಾನ್ವಾಸ್ ಸಿನಿಮಾ ಆಗಿರುವುದರಿಂದ ಪಾತ್ರಗಳು ದೊಡ್ಡದ್ದಾಗಿಯೇ ಇರಲಿವೆ. ನಾಯಕಿ ಆಯ್ಕೆ ಆಗಿಲ್ಲ. ಆದರೆ, ಶ್ರುತಿಹಾಸನ್, ಶ್ರೀದಿವ್ಯಾ ಅಥವಾ ರಚಿತಾ ರಾಮ್ ಅಂತ ಅಂದುಕೊಂಡಿದ್ದೇವೆ. ಇವರ ಪೈಕಿ ಒಬ್ಬರು ನಾಯಕಿ ಆಗಲಿದ್ದಾರೆ’ ಎನ್ನುತ್ತಾರೆ ಶೇಖರ್.
ಹಾಗಾದರೆ, ಶೇಖರ್-ಚೇತನ್ ಮಾಡಲು ಹೊರಟಿರುವ ಸಿನಿಮಾ ಯಾವುದು, ಕಥೆ ಏನು?
ಇದಕ್ಕೆ ಉತ್ತರಿಸುವ ನಿರ್ದೇಶಕ ಶೇಖರ್, “ಇದು ಬ್ರಿಟಿಷ್ ಕಾಲದ ಸಿನಿಮಾ. ಹಾಗಂತ, ಚಿತ್ರದಲ್ಲಿ ಸ್ವಾತಂತ್ರ್ಯ ಕುರಿತಾಗಲಿ, ಆ ಬಗೆಗಿನ ಹೋರಾಟವಾಗಲಿ ಇರುವುದಿಲ್ಲ. ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲೂ ಜನರು ಬದುಕು ಸವೆಸುತ್ತಿದ್ದರು. ಗೆಳೆತನ ಹೊಂದಿದ್ದರು. ತಮ್ಮ ಅಕ್ಕಪಕ್ಕದವರನ್ನು ಅಕ್ಕರೆಯಿಂದ ನೋಡುತ್ತಿದ್ದರು. ಆ ವಿಷಯ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದೇನೆ.
ಎಲ್ಲೋ ಹೋರಾಟ ನಡೆಯುತ್ತಿರುತ್ತೆ, ಇನ್ನೆಲ್ಲೋ ರಾಜಕೀಯದ ಸಭೆಗಳು ನಡೆಯುತ್ತಿರುತ್ತವೆ, ಅದರ ಬ್ಯಾಕ್‌ಡ್ರಾಪ್‌ನಲ್ಲೇ ಒಂದು ಮುದ್ದಾದ ಲವ್‌ಸ್ಟೋರಿ ನಡೆಯುತ್ತೆ, ಆ್ಯಕ್ಷನ್ ಥ್ರಿಲ್ ಕೂಡ ಇರುತ್ತೆ. ಸ್ವಾತಂತ್ರ್ಯಕ್ಕಾಗಿ ರಾಜಕೀಯದವರ ಹೋರಾಟ ಇದ್ದರೂ, ಮಾಮೂಲಿ ಜನರ ಬದುಕು ಸಿಂಪಲ್ ಆಗಿ ನಡೆಯುತ್ತಿತ್ತು ಎಂಬುದನ್ನಿಲ್ಲಿ ಹೇಳ ಹೊರಟಿದ್ದೇನೆ’ ಎನ್ನುತ್ತಾರೆ ಪಿ.ಸಿ. ಶೇಖರ್.
“ಈ ಚಿತ್ರಕ್ಕಾಗಿ ಚೇತನ್ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಆ ಕಾಲದ ಜನರು ತೆಳುವಿದ್ದರೂ, ಕಟ್ಟುಮಸ್ತಾಗಿದ್ದರು. ಹಾಗಾಗಿ ಚೇತನ್ ಏಯ್rಪ್ಯಾಕ್ ಮಾಡಕೊಳ್ಳುತ್ತಿದ್ದು, ದೇಹವನ್ನು ಹುರಿಗೊಳಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಫೈಟ್‌ಗಳಿದ್ದರೂ, ಈಗಿನಂತೆ ಆ್ಯಕ್ಷನ್ ಇರಲ್ಲ. ಆಗೆಲ್ಲಾ ಕಲರಿ ಫೈಟ್ ಬಳಕೆಯಲ್ಲಿತ್ತು. ಅದು ಚಿತ್ರದಲ್ಲಿ ಕಾಣಸಿಗಲಿದೆ. ಕಳೆದ ಹತ್ತು ತಿಂಗಳಿನಿಂದಲೂ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಈಗ ಅದು ಮುಗಿಯೋ ಹಂತಕ್ಕೆ ಬಂದಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ಅಕ್ಟೋಬರ್‌ನಿಂದ ಚಿತ್ರಕ್ಕೆ ಚಾಲನೆ ಸಿಗಲಿದೆ. ಚಂದನ್‌ಗೌಡ ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದೊಂದು ಬಿಗ್‌ಬಜೆಟ್ ಸಿನಿಮಾ ಆಗಿದ್ದು, ನನ್ನ ಸಿನಿ ಕೆರಿಯರ್‌ನಲ್ಲೇ ಇದು, ಅತೀ ದೊಡ್ಡ ಸ್ಕೇಲ್‌ನಲ್ಲಿ ತಯಾರಾಗುತ್ತಿರುವ ಸಿನಿಮಾ ಎನ್ನುತ್ತಾರೆ ಅವರು.
ಈ ಚಿತ್ರವನ್ನು ನಿರ್ದೇಶಿಸುತ್ತಿರುವ ಜೊತೆಗೆ ಕಥೆ, ಚಿತ್ರಕಥೆ ಬರೆದಿದ್ದಾರೆ ಶೇಖರ್. “ರಾಗ’ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದ ಸಚಿನ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಅವರ ಜತೆ ಕಾಮಿಡಿ ದೃಶ್ಯಗಳಿಗೆ ನಟರಾಜ್ ಹಾಗೂ ಪ್ರಶಾಂತ್‌ರಾಜಪ್ಪ ಕೂಡ ಸಂಭಾಷಣೆ ಬರೆಯುತ್ತಿದ್ದಾರೆ. ವೈದಿ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಇನ್ನು ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.