ಚೇತನ್ ಮುಂಡಾಡಿ ನಿರ್ದೇಶನದ ‘ಭಾವಪೂರ್ಣ’ ಟ್ರೇಲರ್- ಹಾಡುಗಳು ರಿಲೀಸ್

Team Udayavani, Sep 7, 2023, 1:17 PM IST

Chetan mundadi’s bhavapoorna movie

ಈ ಹಿಂದೆ “ಮದಿಪು’, “ವರ್ಣಪಟಲ’ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಚೇತನ್‌ ಮುಂಡಾಡಿ ಈ ಬಾರಿ “ಭಾವಪೂರ್ಣ’ ಎಂಬ ಮತ್ತೂಂದು ವಿಶೇಷ ಕಥನವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ. ಈಗಾಗಲೇ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರಲು ಸಿದ್ಧವಾಗುತ್ತಿರುವ “ಭಾವಪೂರ್ಣ’ ಸಿನಿಮಾದ ಟ್ರೇಲರ್‌ ಮತ್ತು ಹಾಡುಗಳು ಇತ್ತೀಚೆಗೆ ಬಿಡುಗಡೆಯಾಯಿತು.

ಇದೇ ವೇಳೆ ಮಾತನಾಡಿದ ನಿರ್ದೇಶಕ ಚೇತನ್‌ ಮುಂಡಾಡಿ, “ಪೋಟೋಗಳಲ್ಲಿ ಕಾಲಘಟ್ಟವನ್ನು ಬೆಸೆಯುವ ಕಥೆ ಈ ಸಿನಿಮಾದಲ್ಲಿದೆ. ಕೊರೊನಾ ಸಮಯದಲ್ಲಿ ಹೊಳೆದ ಕಥೆಯೊಂದನ್ನು ದೃಶ್ಯರೂಪದಲ್ಲಿ ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ. ಒಬ್ಬ ಮಧ್ಯ ವಯಸ್ಸು ಮೀರಿದ ಮುಗ್ಧನ ಭಾವ-ತೀರ ಯಾನ, ಮತ್ತೂಬ್ಬ ಯುವಕನ ಹುಮ್ಮಸ್ಸಿನ ಪ್ರೀತಿಯ ಪಯಣದಲ್ಲಿ ಸಿನಿಮಾದ ಕಥೆ ಸಾಗುತ್ತದೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡಿದರು.

“ಭಾವಪೂರ್ಣ’ ಸಿನಿಮಾದಲ್ಲಿ ಹಿರಿಯ ನಟ ರಮೇಶ್‌ ಪಂಡಿತ್‌ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಅಥರ್ವ ಪ್ರಕಾಶ್‌, ಮಂಜುನಾಥ ಹೆಗ್ಡೆ, ಶೈಲಶ್ರೀ ಧರ್ಮೇಂದ್ರ ಅರಸ್‌, ವಿನ್ಯಾ ಚೇತನ್‌ ರೈ, ಮಂಗಳಾ, ಎಂ. ಕೆ ಮಠ, ನಾಗೇಂದ್ರ ಶಾ, ಶಿವಾಜಿ ರಾವ್‌ ಜಾಧವ್‌, ಪವನ ಮೊದಲಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:Davanagere; ಜಾಲಿ ರೈಡ್ ಗೆ ಹೊರಟಿದ್ದ ಯುವಕರಿಗೆ ಅಪಘಾತ; ಸ್ಥಳದಲ್ಲೇ ಇಬ್ಬರ ದುರ್ಮರಣ

“ಈ ಸಿನಿಮಾದಲ್ಲಿ ನೀವೇ ಹೀರೋ. ನಿಮ್ಮ ಪಾತ್ರದ ಮೇಲೆ ಇಡೀ ಸಿನಿಮಾದ ಕಥೆ ಸಾಗುತ್ತದೆ. ಇದೊಂದು ಮುಖ್ಯ ಪಾತ್ರ ಎಂದಾಗ ಸ್ವಲ್ಪ ಆತಂಕವಾಗಿತ್ತು. ಆದರೆ ನಿರ್ದೇಶಕರು ಹೇಳಿದ ಕಥೆ ಮನಮುಟ್ಟುವಂತಿದ್ದರಿಂದ, ಈ ಸಿನಿಮಾ ಒಪ್ಪಿಕೊಂಡೆ. ಇಡೀ ಸಿನಿಮಾದ ಶೂಟಿಂಗ್‌ ಮಾಡಿದ್ದು, ಒಂದು ಪಿಕ್ನಿಕ್‌ ಮಾಡಿದ ಅನುಭವದಂತಿತ್ತು. ಸಿನಿಮಾ ತುಂಬ ಚೆನ್ನಾಗಿ ಬಂದಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬುದು ನಟ ರಮೇಶ್‌ ಪಂಡಿತ್‌ ಮಾತು.

“ಜಿ.ಎಲ್‌ ಮೋಶನ್‌ ಪಿಕ್ಚರ್’ ಬ್ಯಾನರಿನಲ್ಲಿ ಪ್ರಶಾಂತ್‌ ಅಂಜನಪ್ಪ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ “ಭಾವಪೂರ್ಣ’ ಸಿನಿಮಾಕ್ಕೆ ಚೇತನ್‌ ಮುಂಡಾಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ವಿ.ಮನೋ ಹರ್‌ ಸಂಗೀತ ಸಂಯೋಜಿಸಿದ್ದು, ಅಕ್ಷಯ್‌ ಎಸ್‌. ರಿಷಭ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಪ್ರಸನ್ನ ಗೊರಲಕೆರೆ ಛಾಯಾಗ್ರಹಣ, ಕೀರ್ತಿರಾಜ್‌ ಡಿ. ಸಂಕಲನವಿದೆ. ಅಂಕೋಲ, ತಾಳಗುಪ್ಪ, ಸೌತಡ್ಕ ಸುತ್ತಮುತ್ತ ಸುಮಾರು 45 ದಿನಗಳ ಕಾಲ “ಭಾವಪೂರ್ಣ’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ.

ಟಾಪ್ ನ್ಯೂಸ್

Dravid–gavskar

Indian Cricket; ರಾಹುಲ್‌ ದ್ರಾವಿಡ್‌ಗೆ ಭಾರತ ರತ್ನ ಕೊಡಿ: ಗವಾಸ್ಕರ್‌

rain 21

Heavy Rain; ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಜುಲೈ 8 ರಂದು ಪಿಯುಸಿವರೆಗೆ ರಜೆ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

1-wqwewewq

T20 ಸರಣಿ ಸಮಬಲ: ಜಿಂಬಾಬ್ವೆ ವಿರುದ್ಧ 100 ರನ್ ಗಳ ಅಮೋಘ ಜಯ ಸಾಧಿಸಿದ ಭಾರತ

renukaacharya

Lok Sabha Elections; ಪಕ್ಷ ವಿರೋಧಿ ಚಟುವಟಿಕೆ ನಡೆಸಿಯೇ ಇಲ್ಲ: ರೇಣುಕಾಚಾರ್ಯ

BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!

BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!

Heavy Rain ಜನ್ನಾಡಿ: ಹೊಳೆಯಂತಾದ ಬಿದ್ಕಲ್‌ಕಟ್ಟೆ – ಹಾಲಾಡಿ ರಾಜ್ಯ ಹೆದ್ದಾರಿ !

Heavy Rain ಜನ್ನಾಡಿ: ಹೊಳೆಯಂತಾದ ಬಿದ್ಕಲ್‌ಕಟ್ಟೆ – ಹಾಲಾಡಿ ರಾಜ್ಯ ಹೆದ್ದಾರಿ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renukaswamy case: ದರ್ಶನ್‌ ಗ್ಯಾಂಗ್‌ ವಿರುದ್ಧ 200 ಸಾಕ್ಷಿಗಳ ಸಂಗ್ರಹ

Renukaswamy case: ದರ್ಶನ್‌ ಗ್ಯಾಂಗ್‌ ವಿರುದ್ಧ 200 ಸಾಕ್ಷಿಗಳ ಸಂಗ್ರಹ

ಸಾಲು-ಸಾಲು ಹೊಸ ಸಿನೆಮಾ: ಕೋಸ್ಟಲ್‌ವುಡ್‌ಗೀಗ ಪರ್ವ ಕಾಲ!

ಸಾಲು-ಸಾಲು ಹೊಸ ಸಿನೆಮಾ: ಕೋಸ್ಟಲ್‌ವುಡ್‌ಗೀಗ ಪರ್ವ ಕಾಲ!

ರಿಶ್ವಿ‌ಕ್‌ ಶೆಟ್ಟಿ ನಿರ್ಮಾಣದ “ಬಿಲ್ಲಾರಿ” ಮುಹೂರ್ತ

Billari; ರಿಶ್ವಿ‌ಕ್‌ ಶೆಟ್ಟಿ ನಿರ್ಮಾಣದ “ಬಿಲ್ಲಾರಿ” ಮುಹೂರ್ತ

vidyarthi vidyarthiniyare premier show in dubai

ದುಬೈನಲ್ಲಿ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಪ್ರೀಮಿಯರ್‌ ಶೋ

Huccha movie to be re-released with technical update

Huccha; ತಾಂತ್ರಿಕ ಅಪ್ಡೇಟ್ ನೊಂದಿಗೆ ಮರು ಬಿಡುಗಡೆಯಾಗಲಿದೆ ‘ಹುಚ್ಚ’

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Dravid–gavskar

Indian Cricket; ರಾಹುಲ್‌ ದ್ರಾವಿಡ್‌ಗೆ ಭಾರತ ರತ್ನ ಕೊಡಿ: ಗವಾಸ್ಕರ್‌

rain 21

Heavy Rain; ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಜುಲೈ 8 ರಂದು ಪಿಯುಸಿವರೆಗೆ ರಜೆ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

1-wqwewewq

T20 ಸರಣಿ ಸಮಬಲ: ಜಿಂಬಾಬ್ವೆ ವಿರುದ್ಧ 100 ರನ್ ಗಳ ಅಮೋಘ ಜಯ ಸಾಧಿಸಿದ ಭಾರತ

renukaacharya

Lok Sabha Elections; ಪಕ್ಷ ವಿರೋಧಿ ಚಟುವಟಿಕೆ ನಡೆಸಿಯೇ ಇಲ್ಲ: ರೇಣುಕಾಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.