ದರ್ಶನ್ ತೆಗೆದ ಫೋಟೋಗೆ 1 ಲಕ್ಷ ಕೊಟ್ಟ ಚಿಕ್ಕಣ್ಣ
ಅರಣ್ಯ ಇಲಾಖೆಯ ನೆರವಿಗೆ ಹಣ ಬಳಕೆ
Team Udayavani, May 16, 2019, 3:00 AM IST
ನಟ ದರ್ಶನ್ ಒಳ್ಳೆಯ ಫೋಟೋಗ್ರಾಫರ್ ಅನ್ನೋದು ಬಹುತೇಕರಿಗೆ ಗೊತ್ತಿರುವ ವಿಷಯ. ಕಾಡು, ವನ್ಯಜೀವಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ದರ್ಶನ್ ಆಗಾಗ್ಗೆ ಕ್ಯಾಮರಾ ಹೊತ್ತು, ಪ್ರಕೃತಿಯ ಮಡಿಲಿನಲ್ಲಿ ಅಪರೂಪದ ದೃಶ್ಯಗಳನ್ನು ಸೆರೆ ಹಿಡಿಯುತ್ತಿರುತ್ತಾರೆ. ಇನ್ನು ದರ್ಶನ್ ಸೆರೆಹಿಡಿದ ಅಪರೂಪದ ಫೋಟೋಗಳಿಗೆ ಅಭಿಮಾನಿಗಳು, ಛಾಯಾಚಿತ್ರ ಪ್ರೇಮಿಗಳಿಂದ ಸಾಕಷ್ಟು ಬೇಡಿಕೆ ಇದೆ.
ಕೆಲ ತಿಂಗಳ ಹಿಂದಷ್ಟೇ ದರ್ಶನ್ ಅವರ ಫೋಟೋಗ್ರಫಿ ಪ್ರದರ್ಶನವನ್ನು ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ದರ್ಶನ್ ತೆಗೆದ ಅನೇಕ ಫೋಟೋಗಳು ದೊಡ್ಡ ಮೊತ್ತಕ್ಕೆ ಬಿಕರಿಯಾಗಿದ್ದವು. ಇದರಿಂದ ಬಂದ ಹಣವನ್ನು ಕೂಡ ದರ್ಶನ್ ವನ್ಯಜೀವಿ ಸಂರಕ್ಷಣೆ ಕಾರ್ಯಗಳಿಗೆ ಬಳಸುವುದಾಗಿ ಘೋಷಿಸಿದ್ದರು.
ಈಗ ದರ್ಶನ್ ತೆಗೆದ ಗಜರಾಜನ ಫೋಟೋವೊಂದು ಬರೋಬ್ಬರಿ ಒಂದು ಲಕ್ಷ ಮೊತ್ತಕ್ಕೆ ಮಾರಾಟವಾಗಿದೆ. ಅಂದಹಾಗೆ, ಈ ಫೋಟೋವನ್ನು ಇಷ್ಟೊಂದು ದೊಡ್ಡ ಮೊತ್ತ ಕೊಟ್ಟು ಖರೀದಿಸಿದವರು ಹಾಸ್ಯನಟ ಚಿಕ್ಕಣ್ಣ. ಇನ್ನು ಚಿಕ್ಕಣ್ಣ ಈ ಫೋಟೋವನ್ನು ಖರೀದಿಸಿರುವುದರ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ದರ್ಶನ್,
ನಮ್ಮ ಚಿಕ್ಕಣ್ಣ ನಾನು ಸೆರೆಹಿಡಿದಿದ್ದ ಆನೆಯ ಫೋಟೋವನ್ನು ಅರಣ್ಯ ಇಲಾಖೆಯ ನೆರವಿಗಾಗಿ ೧ ಲಕ್ಷ ರೂಪಾಯಿಗಳನ್ನು ನೀಡಿ ಖರೀದಿ ಮಾಡಿರುವುದು ಶ್ಲಾಘನೀಯ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನನ್ನ ಕೃತಘ್ನತೆಗಳು pic.twitter.com/aQI4KTgJn7
— Darshan Thoogudeepa (@dasadarshan) May 15, 2019
“ನಮ್ಮ ಚಿಕ್ಕಣ್ಣ ನಾನು ಸೆರೆಹಿಡಿದಿದ್ದ ಆನೆಯ ಫೋಟೋವನ್ನು ಅರಣ್ಯ ಇಲಾಖೆಯ ನೆರವಿಗಾಗಿ 1 ಲಕ್ಷ ರೂಪಾಯಿಗಳನ್ನು ನೀಡಿ ಖರೀದಿ ಮಾಡಿರುವುದು ಶ್ಲಾಘನೀಯ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನನ್ನ ಕೃತಘ್ನತೆಗಳು’ ಎಂದಿದ್ದಾರೆ. ಅಂದಹಾಗೆ, ಈ ಫೋಟೋದಿಂದ ಬಂದಿರುವ ಹಣ ಕೂಡ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆ ಕಾರ್ಯಕ್ಕೆ ಬಳಕೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.