ಚಿರು ಹೊಸ ಚಿತ್ರ “ರಾಜ ಮಾರ್ತಾಂಡ’
Team Udayavani, Aug 18, 2017, 3:24 PM IST
“ಸಂಹಾರ’ ಚಿತ್ರದ ಕೆಲಸಗಳು ಬಹುತೇಕ ಮುಗಿದಿವೆ. ಚೈತನ್ಯ ನಿರ್ದೇಶನದ ಹೊಸ ಚಿತ್ರದ ಚಿತ್ರೀಕರಣ ಶುರುವಾಗಿದೆ. ಈ ಮಧ್ಯೆ ಚಿರಂಜೀವಿ ಸರ್ಜಾ ಅಲಿಯಾಸ್ ಚಿರು ಸದ್ದಿಲ್ಲದೆ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಹೆಸರೇನು ಗೊತ್ತಾ? “ರಾಜ ಮಾರ್ತಾಂಡ’ ಅಂತ.
“ರಾಜ ಮಾರ್ತಾಂಡ’ ಚಿತ್ರವನ್ನು ಬರೆದು, ನಿರ್ದೇಶಿಸಿರುವುದು ರಾಮ್‌ನಾರಾಯಣ್. ವಿನೋದ್ ಪ್ರಭಾಕರ್ ಅಭಿನಯದ “ಕ್ರ್ಯಾಕ್’ ಎಂಬ ಚಿತ್ರವನ್ನು ಮುಗಿಸಿ, ಬಿಡುಗಡೆಗೆ ಕಾದಿರುವ ರಾಮ್‌ನಾರಾಯಣ್, ಶ್ರೀನಗರ ಕಿಟ್ಟಿ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಇದೀಗ ಚಿರುಗೆ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ ರಾಮ್‌ನಾರಾಯಣ್.
ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು, ಕಥೆ-ಚಿತ್ರಕಥೆ-ಸಂಭಾಷಣೆಯನ್ನು ರಾಮ್‌ನಾರಾಯಣ್ ಅವರೇ ಬರೆದಿದ್ದಾರೆ. ಇದು ಅವರ ಐದನೆಯ ಚಿತ್ರವಾಗಲಿದೆ. ಈ ಚಿತ್ರವನ್ನು ಮಾದೇಶ್ವರ ಪ್ರೊಡಕ್ಷನ್ಸ್ ಲಾಂಛನದಲ್ಲಿ ದಿವ್ಯ, ಸಾಯಿಸೂರ್ಯ, ಪ್ರಣವ್, ಪುನೀತ್ ಗೌಡ ಮುಂತಾದವರು ನಿರ್ಮಿಸುತ್ತಿದ್ದಾರೆ.
“ಕ್ರ್ಯಾಕ್’ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಈ ಚಿತ್ರದಲ್ಲೂ ಕೆಲಸ ಮಾಡುವ ಸಾಧ್ಯತೆ ಇದೆ. “ರಾಜ ಮಾರ್ತಾಂಡ’ ಎಂಬ ಟೈಟಲ್ ಕಥೆಗಾರ ಅಜಯ್ ಕುಮಾರ್ ಅವರ ಬಳಿ ಇತ್ತಂತೆ. ಅವರು ಈಗ ಚಿತ್ರದ ಹೆಸರನ್ನು ರಾಮ್‌ನಾರಾಯಣ್ ಮತ್ತು ಚಿರುಗೆ ಬಿಟ್ಟುಕೊಡುವುದಕ್ಕೆ ಸಜ್ಜಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.