Choo Mantar; ಟೈಟಲ್ ಟ್ರ್ಯಾಕ್ ನಲ್ಲಿ ಶರಣ್ ‘ಛೂ ಮಂತರ್’
Team Udayavani, Sep 12, 2023, 2:53 PM IST
ನಿರ್ದೇಶಕ: ಇದು ಹಾರರ್ ಸಿನಿಮಾಕ್ಕೆ. ಇದಕ್ಕೆ ಹಾಡಿನ ಅಗತ್ಯವಿಲ್ಲ. ಸಿಚುವೇಶನ್ ಕೂಡಾ ಸಾಂಗ್ ಡಿಮ್ಯಾಂಡ್ ಮಾಡ್ತಿಲ್ಲ, ಸುಮ್ನೆ ಏನಕ್ಕೆ ಮಾಡ್ಬೇಕು…
ನಿರ್ಮಾಪಕ: ಇಲ್ಲಾರೀ, ಸಾಂಗ್ ಬೇಕೇ ಬೇಕು. ಶರಣ್ ಸಾರ್ ಸಿನಿಮಾದಲ್ಲಿ ಡ್ಯಾನ್ಸ್ ನಂಬರ್ ಇರಲೇಬೇಕು..
ನಾಯಕ ನಟ: ನಿರ್ದೇಶಕರೇ, ಒಂದ್ ಸಾಂಗ್ ಮಾಡೋಣ.. ಸೂಟ್ ಆಗಿಲ್ಲಾಂದ್ರೆ ಸೈಡ್ ಇಡೋಣ…
ಸಂಗೀತ ನಿರ್ದೇಶಕ: ನೀವೆಲ್ಲಾ ಸೇರಿ ಒಂದು ಅಂತಿಮ ನಿರ್ಧಾರಕ್ಕೆ ಬಂದ್ ಹೇಳಿ.. ಆ ನಂತರನೇ ನಾನು ಟ್ಯೂನ್ ಹಾಕ್ತೀನಿ…
– ಈ ತರಹದ “ಬೇಕು-ಬೇಡ’ಗಳ ಚರ್ಚೆಯಲ್ಲೇ ಹಾಡೊಂದು ಹುಟ್ಟಿಕೊಂಡಿದೆ. ಅದು “ಛೂ ಮಂತರ್’ ಸಿನಿಮಾದ್ದು. ಶರಣ್ ನಾಯಕರಾಗಿರುವ “ಛೂ ಮಂತರ್’ ಸಿನಿಮಾ ಟೈಟಲ್ ಟ್ರ್ಯಾಕ್ ಹಿಂದೆ ಇಡೀ ಚಿತ್ರತಂಡ ತಲೆಕೆಡಿಸಿಕೊಂಡ ಪರಿಣಾಮ ಹಾಡೊಂದು ಮೂಡಿಬಂದಿದ್ದು, ಆ ಹಾಡು ಸೋಮವಾರ ಬಿಡುಗಡೆಯಾಗಿದೆ.
ಈ ಹಾಡಿನಲ್ಲಿ ಶರಣ್ ಮಸ್ತ್ ಸ್ಟೆಪ್ ಹಾಕಿದ್ದು, ಈ ವರ್ಷದ ಡ್ಯಾನ್ಸ್ ನಂಬರ್ ಆಗಿ ಹಿಟ್‌ಲಿಸ್ಟ್ ಸೇರುವ ನಿರೀಕ್ಷೆ ಇದೆ. ಈ ಹಾಡಿನ ಬಿಡುಗಡೆಯನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
ತರುಣ್ ಶಿವಪ್ಪ ನಿರ್ಮಾಣದ ಈ ಚಿತ್ರವನ್ನು “ಕರ್ವ’ ಖ್ಯಾತಿಯ ನವನೀತ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶರಣ್ ಅವರಿಗೆ ನಾಯಕಿಯಾಗಿ ಅದಿತಿ ನಟಿಸಿದ್ದು, ಮೇಘನಾ ಗಾಂವ್ಕರ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
“ಛೂ ಮಂತರ್” ಟೈಟಲ್ ಟ್ರ್ಯಾಕ್ ಗೆ ವಿಜಯ್ ಈಶ್ವರ್ ಅವರ ಸಾಹಿತ್ಯವಿದ್ದು, ಚಂದನ್ ಶೆಟ್ಟಿ ಸಂಗೀತವಿದೆ. ಈ ಹಾಡಿನ್ನು ದರ್ಶಿನಿ ಕೊರಿಗ್ರಾಫ್ ಮಾಡಿದ್ದಾರೆ. ಇಡೀ ಚಿತ್ರತಂಡ ಬೇಕು ಬೇಡಗಳ ನಡುವೆ ಹಾಡು ಹುಟ್ಟಿದ ಬಗೆಯನ್ನು ವಿವರಿಸಿತು. “ಶರಣ್ ಅವರ ಜೊತೆ ಸಿನಿಮಾ ಮಾಡೋದು ಸುಲಭ. ಅವರು ನೀಡುವ ಪ್ರೋತ್ಸಾಹದಿಂದಲೇ ಈ ಸಿನಿಮಾ ಆಗಿದೆ. ಹಾರರ್ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ನಗುವಿಗೆ ಭರವಿಲ್ಲ’ ಎಂದು ಚಿತ್ರದ ಬಗ್ಗೆ ಹೇಳಿದರು ತರುಣ್ ಶಿವಪ್ಪ.
ನಾಯಕ ಶರಣ್ ಅವರು ತನ್ನ ಡ್ಯಾನ್ಸ್‌ಗೆ ಕಾರಣವಾದ ಎಲ್ಲಾ ನೃತ್ಯ ನಿರ್ದೇಶಕರಿಗೆ ಥ್ಯಾಂಕ್ಸ್ ಹೇಳುವ ಜೊತೆಗೆ ತರುಣ್, ನವನೀತ್ ಹಾಗೂ ಇಡೀ ತಂಡದ ಶ್ರಮದ ಬಗ್ಗೆ ಹೇಳಿದರು. ಉಳಿದಂತೆ ನಾಯಕಿ ಅದಿತಿ, ಮೇಘನಾ, ಚಂದನ್ ಶೆಟ್ಟಿ, ಸಾಹಸ ನಿರ್ದೇಶಕ ರವಿವರ್ಮ ಕೂಡಾ ಸಿನಿಮಾದಲ್ಲಿನ ತಮ್ಮ ಕಾರ್ಯಗಳ ಬಗ್ಗೆ ಮಾತನಾಡುವ ಜೊತೆಗೆ “ಛೂ ಮಂತರ್’ ಈ ವರ್ಷದ ಹಿಟ್‌ಲಿಸ್ಟ್ ಸೇರುವ ಭರವಸೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.