ಲಾಕ್‌ಡೌನ್‌ನಲ್ಲಿ ಸಿನ್ಮಾ ಮಂದಿ ಏನಾಡ್ತಾ ಇದ್ದಾರೆ?
Team Udayavani, Mar 28, 2020, 10:42 AM IST
ಸದ್ಯಕ್ಕೆ “ಕೆಜಿಎಫ್ 2 ‘ ಚಿತ್ರೀಕರಣದಲ್ಲಿದ್ದ ನಟ ಯಶ್, ಕೋವಿಡ್ 19 ಎಫೆಕ್ಟ್ ನಿಂದಾಗಿ ಇದೀಗ ಮನೆಯಲ್ಲೇ ಇದ್ದಾರೆ. ಪತ್ನಿ ರಾಧಿಕಾ ಪಂಡಿತ್ ಹಾಗು ಪುತ್ರಿ, ಪುತ್ರನೊಂದಿಗಿದ್ದಾರೆ. ಈ ನಡುವೆ ಅವರು, ಒಂದಷ್ಟು ಸಿನಿಮಾಗಳನ್ನು ವೀಕ್ಷಿಸುತ್ತಿರುವುದಷ್ಟೇ ಅಲ್ಲ, ಮಗಳ ಜೊತೆ ಆಟ ಆಡಿ ಕಾಲ ಕಳೆಯುತ್ತಿದ್ದಾರೆ. ಮಗಳೊಂದಿಗೆ ಊಟ ಮಾಡಿಸುವ ಹಾಗು ಮಗಳೇ ಅವರಿಗೆ ಸ್ಪೂನ್‌ನಲ್ಲಿ ತಿನಿಸುವ ವಿಡಿಯೊವೊಂದು ವೈರಲ್ ಆಗಿದೆ. ಈ ನಿಟ್ಟಿನಲ್ಲಿ ಅವರು ಮಾತನಾಡಿದ್ದು, “ನಾನು ಎಲ್ಲಿಗೂ ಹೋಗಿಲ್ಲ. ಮನೆಯಲ್ಲೇ ಮಕ್ಕಳೊಂದಿಗೆ ಆಟವಾಡುತ್ತಿದ್ದೇನೆ. ಮಗಳ ಜೊತೆ ಮಾತಾಡುವುದೇ ಖುಷಿ. ಎಲ್ಲರೂ ಈ ಕೋವಿಡ್ 19 ವಿರುದ್ಧ ಹೋರಾಡಲು ಮನೆಯಲ್ಲೇ ಇರಿ’ –ಯಶ್, ನಟ
ಇನ್ನಾದರೂ ನಾವು ಯಾವುದರ ಹಿಂದೆ ಓಡುತ್ತಿದ್ದೆವು ಅನ್ನೋ ವಾಸ್ತವವನ್ನ ಅರ್ಥ ಮಾಡಿಕೊಳ್ಳಬೇಕು. ಸದ್ಯಕ್ಕಂತೂ ಸಿನಿಮಾ, ಶೂಟಿಂಗ್ ಹೀಗೆ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಂಡಿರುವುದರಿಂದ ಮನೆಯಲ್ಲೇ ಇರುವಂತಾಗಿದೆ. ಒಂದಷ್ಟು ಓದು, ಸಂಗೀತ, ಮುಂದೆ ಮಾಡಬೇಕಾಗಿರುವ ಸಿನಿಮಾಗಳ ಬಗ್ಗೆ ಪ್ಲಾನ್ ಮಾಡಿಕೊಳ್ಳುತ್ತಿದ್ದೇನೆ .– ವಸಿಷ್ಠ ಸಿಂಹ, ನಟ
“ರೆಮೊ’ ಸಿನಿ ಮಾದ ಒಂದಷ್ಟು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ಮಾಡುತ್ತಿದ್ದೇನೆ. ಸಾಕಷ್ಟು ಸಮಯ ಸಿಕ್ಕಿರುವುದರಿಂದಮುಂದೆ ಸಿನಿಮಾ ಮಾಡಬಹುದಾದ ಸಬೆjಕ್ಟ್ಗಳನ್ನು ಹುಡುಕಲು ಸಾಕಷ್ಟು ಸಮಯ ಸಿಕ್ಕಂತಾಗಿದೆ. ಪವನ್ ಒಡೆಯರ್, ನಿರ್ದೇಶಕ
ಶೂಟಿಂಗ್, ಸಿನಿಮಾ ಹೀಗೆ ಎಲ್ಲಾ ಚಟುವಟಿಕೆಗಳಿಂದಲೂ ಬ್ರೇಕ್ ಸಿಕ್ಕಂತಾಗಿದೆ. ಮನೆಯಲ್ಲೇ ಇದ್ದರೂ ಒಂದಷ್ಟು ಸಿನಿಮಾಗೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಿದ್ದೇನೆ. ಒಂದಷ್ಟು ಒಳ್ಳೆಯ ಕಥೆಗಳನ್ನ, ಸ್ಕ್ರಿಪ್ಟ್ಗಳನ್ನ ಓದುತ್ತಿದ್ದೇನೆ. ಜೊತೆಗೆ ನಾನೇ ಒಂದಷ್ಟು ಕಥೆಗಳನ್ನು ಬರೆಯುತ್ತಿದ್ದೇನೆ. ತುಂಬ ಸಮಯದ ನಂತರ ಫ್ಯಾಮಿಲಿ ಜೊತೆಗೆ ಹೆಚ್ಚು ಕಾಲ ಕಳೆಯುವಂತಾಗಿದೆ. ಒಂಥರಾ ಎಲ್ಲವೂ ಪ್ರಶಾಂತವಾಗಿರುವಂತಿದೆ.- ಹರಿಪ್ರಿಯಾ, ನಟಿ
ನಾನು ಮನೆ ಬಿಟ್ಟು ಎಲ್ಲೂ ಹೋಗಿಲ್ಲ. ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದೇನೆ. ಒಂದಷ್ಟು ಸಿನಿಮಾಗಳನ್ನು ವೀಕ್ಷಿಸುತ್ತಿದ್ದೇನೆ. ಅದು ಬಿಟ್ಟರೆ, ಮನೆಯ ಒಳಗಡೆಯೇ ಪತ್ನಿ ಜೊತೆ ಟೇಬಲ್ ಟೆನ್ನಿಸ್ ಆಟ ಆಡುತ್ತ ಸಮಯ ಕಳೆಯುತ್ತಿದ್ದೇನೆ. ಮಿಕ್ಕಂತೆ, ಮಗ, ಮಗಳೊಂದಿಗೆ ಒಂದಷ್ಟು ಹರಟುತ್ತಿದ್ದೇನೆ. – ಗಣೇಶ್, ನಟ
ನನಗೆ ಮನೆಯಲ್ಲೇ ಇರುವುದರಿಂದ ಖುಷಿ ಇದೆ. ಕಾರಣ, ಮನೆಯವರ ಜೊತೆ ಸಮಯ ಕಳೆಯೋಕೆ ಅವಕಾಶ ಸಿಕ್ಕಿದೆ. ಮಿಕ್ಕಂತೆ ಒಂದಷ್ಟು ಸಿನಿಮಾ ನೋಡೋದು, ಮಕ್ಕಳ ಜೊತೆ ಆಟ ಆಡೋದನ್ನು ಮಾಡುತ್ತಿದ್ದೇನೆ. ಪೋಷಕರ ಜೊತೆಯಲ್ಲೂ ಇರುವ ಅವಕಾಶ ಸಿಕ್ಕಿದೆ. – ಶ್ರೀಮುರಳಿ,ನಟ
ಕೋವಿಡ್ 19 ಸಮಸ್ಯೆಯಿಂದಾಗಿ ನಾವು ಎಲ್ಲೂ ಹೋಗಿಲ್ಲ. ಮನೆಯಲ್ಲೇ ಕಾಲ ಕಳೆಯುತ್ತಿದ್ದೇವೆ. ಒಂದಷ್ಟು ಮಾತು, ಒಂದೆರೆಡು ಆಟಗಳನ್ನಾಡುತ್ತಲೇ ಕೋವಿಡ್ 19 ವಿರುದ್ಧ ಹೋರಾಡುತ್ತಿದ್ದೇವೆ. ಸದ್ಯಕ್ಕೆ ನೋಡದ ಸಿನಿಮಾಗಳನ್ನು ನೋಡುತ್ತಿದ್ದೇವೆ. –ಚಿರಂಜೀವಿ ಸರ್ಜಾ, ಧ್ರುವ ಸರ್ಜಾ
ಯಾವಾಗಲೂ ಸಿನಿಮಾ ಮತ್ತಿತರ ಚಟುವಟಿಕೆಗಳಿಂದ ಬ್ಯುಸಿಯಾಗಿರುತ್ತಿದ್ದರಿಂದ, ಫ್ಯಾಮಿಲಿ ಜೊತೆಗೆ ಹೆಚ್ಚು ಸಮಯ ಕಳೆಯಲಾಗುತ್ತಿರಲಿಲ್ಲ. ಈಗ ಕೋವಿಡ್ 19 ಕಾರಣದಿಂದಾಗಿ, ಬಹಳ ವರ್ಷಗಳ ನಂತರ ಫ್ಯಾಮಿಲಿ ಜೊತೆಗೆ ಇರಲು ಸಾಕಷ್ಟು ಸಮಯ ಸಿಕ್ಕಂತಾಗಿದೆ. ಸದ್ಯ “ಶಿವಾಜಿ ಸುರತ್ಕಲ್-2 ‘ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ. ಬಾಕಿ ಇದ್ದ ಎಲ್ಲಾ ಕೆಲಸಗಳನ್ನು ಮಾಡಲು ತುಂಬ ಟೈಮ್ ಸಿಕ್ಕಂತಾಗಿದೆ. ಎಲ್ಲ ಕೆಲಸಗಳು ಮನೆಯಲ್ಲೇ ನಡೆಯುತ್ತಿರುವುದರಿಂದ ಒಂದರ್ಥದಲ್ಲಿ ಒಳ್ಳೆಯದೇ ಆಗಿದೆ.– ರಮೇಶ್ ಅರವಿಂದ್, ನಟ, ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.