![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jan 27, 2023, 11:08 AM IST
ಒಂದು ಕಡೆ ಪರಭಾಷಾ ಸ್ಟಾರ್ ಸಿನಿಮಾಗಳ ಅಬ್ಬರ, ಮತ್ತೂಂದು ಕಡೆ ಕನ್ನಡದ ಸ್ಟಾರ್ ನಟನ ಸಿನಿಮಾ… ಈ ಕಾರಣದಿಂದಾಗಿಯೇ ಜನವರಿಯಲ್ಲಿ ಹೊಸಬರು ಸಿನಿಮಾ ಬಿಡುಗಡೆ ಮಾಡಲು ಕೊಂಚ ಹಿಂದೇಟು ಹಾಕಿದ್ದರು. ಹೀಗಾಗಿ, ವರ್ಷದ ಮೊದಲ ತಿಂಗಳು ಜನವರಿ ದೊಡ್ಡ ಮಟ್ಟದಲ್ಲಿ ರಂಗೇರಿರಲಿಲ್ಲ. ಆದರೆ, ಫೆಬ್ರವರಿಯಲ್ಲಿ ಮಾತ್ರ ಸಿನಿಜಾತ್ರೆ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಅಷ್ಟೊಂದು ಸಿನಿಮಾಗಳು ಬಿಡುಗಡೆಗೆ ರೆಡಿ ಇವೆ. ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಚಿತ್ರಗಳು ಫೆಬ್ರವರಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲು ಅಣಿಯಾಗಿವೆ. ಇದರಲ್ಲಿ ಬಹುತೇಕ ಹೊಸಬರ ಚಿತ್ರಗಳೇ ಇವೆ ಎಂಬುದು ಮತ್ತೂಂದು ಅಂಶ. ಕನ್ನಡ ಚಿತ್ರರಂಗವನ್ನು ವರ್ಷಪೂರ್ತಿ ಚಟುವಟಿಕೆಯಲ್ಲಿಡುವವರು ಹೊಸಬರು. ಅದು ಈ ವರ್ಷವೂ ಮುಂದುವರೆಯುವ ಲಕ್ಷಣಗಳು ಕಾಣುತ್ತಿವೆ. ಸಾಲು ಸಾಲು ಹೊಸಬರ ಚಿತ್ರಗಳು ಪ್ರತಿ ತಿಂಗಳು ಬಿಡುಗಡೆಯಾಗಲಿವೆ.
ಸರತಿಯಲ್ಲಿ ಭಿನ್ನ-ವಿಭಿನ್ನ
ಮೊದಲೇ ಹೇಳಿದಂತೆ ಫೆಬ್ರವರಿಯಲ್ಲಿ 20ಕ್ಕೂ ಹೆಚ್ಚು ಚಿತ್ರಗಳು ತೆರೆಕಾಣುತ್ತಿ ರುವುದರಿಂದ ವೈರೈಟಿ ಸಿನಿಮಾಗಳ ದರ್ಶನ ಕೂಡಾ ಪ್ರೇಕ್ಷಕರಿಗೆ ಸಿಗಲಿದೆ. ಲವ್, ಕಾಮಿಡಿ, ಸಸ್ಪೆನ್ಸ್-ಥ್ರಿಲ್ಲರ್, ಹಾರರ್, ಸೆಂಟಿಮೆಂಟ್.. ಹೀಗೆ ಬೇರೆ ಬೇರೆ ಜಾನರ್‌ನ ಸಿನಿಮಾಗಳು ರಂಜಿಸಲಿವೆ. ಎಲ್ಲಾ ಓಕೆ, ಇಷ್ಟೊಂದು ಸಿನಿಮಾಗಳು ರಿಲೀಸ್ ಅಖಾಡಕ್ಕೆ ಬಂದರೆ ಥಿಯೇಟರ್ ಸಮಸ್ಯೆ ಎದುರಾಗಲ್ವೇ? ಎಂಬ ಪ್ರಶ್ನೆ ಸಹಜ. ಆದರೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಹುತೇಕ ಹೊಸಬರು ಈಗ ಸಿಂಗಲ್ ಸ್ಕ್ರೀನ್‌ಗಿಂತ ಮಲ್ಟಿಪ್ಲೆಕ್ಸ್ ಕಡೆಗೆ ಒಲವು ತೋರುತ್ತಿದ್ದಾರೆ. ಅದಕ್ಕೆ ಕಾರಣ ಸಿಂಗಲ್ ಸ್ಕ್ರೀನ್ ಬಾಡಿಗೆ. ಬಹುತೇಕ ಹೊಸಬರು ಬಾಡಿಗೆ ಕಟ್ಟಿ ಸಿನಿಮಾ ರಿಲೀಸ್ ಮಾಡುವ ಸ್ಥಿತಿಯಲ್ಲಿ ಇರಲ್ಲ. ಅಂತಹವರು ಮಲ್ಟಿಪ್ಲೆಕ್ಸ್ ನತ್ತ ಆಸಕ್ತಿ ತೋರಿಸುತ್ತಿದ್ದಾರೆ. ಈ ಕಾರಣದಿಂದ ಹೊಸಬರ ಸಿನಿಮಾಗಳು ಬಿಡುಗಡೆಯಾದಾಗ ದೊಡ್ಡ ಮಟ್ಟದ ಚಿತ್ರಮಂದಿರ ಸಮಸ್ಯೆ ಎದುರಾಗುವುದಿಲ್ಲ.
ಮಾರ್ಚ್‌ವರೆಗೂ ಜಾತ್ರೆ
ಹೊಸಬರ ಸಿನಿಜಾತ್ರೆ ಮಾರ್ಚ್ ಎರಡನೇ ವಾರದವರೆಗೂ ಜೋರಾಗಿಯೇ ನಡೆಯಲಿದೆ. ಅಲ್ಲಿವರೆಗೆ ಯಾವುದೇ ದೊಡ್ಡ ಸ್ಟಾರ್ ಸಿನಿಮಾಗಳು ಇಲ್ಲದಿರುವುದರಿಂದ ಅದೃಷ್ಟ ಪರೀಕ್ಷೆ ಸರಾಗವಾಗಿ ನಡೆಯಲಿದೆ. ಆದರೆ, ಮಾರ್ಚ್ ಮೂರನೇ ವಾರದ ವೇಳೆಗೆ ಮತ್ತೆ ಸಿನಿಬಿಡುಗಡೆಯಲ್ಲಿ ಕೊಂಡ ಇಳಿಕೆಯಾಗಲಿದೆ. ಅದಕ್ಕೆ ಮತ್ತದೇ ಕಾರಣ, “ಸ್ಟಾರ್ ಸಿನಿಮಾ’. ಹೌದು, ಮಾರ್ಚ್ 17ಕ್ಕೆ ಬಹುನಿರೀಕ್ಷಿತ ಉಪೇಂದ್ರ ನಟನೆಯ “ಕಬ್ಜ’ ಚಿತ್ರ ತೆರೆಕಾಣಲಿದೆ. ಸಹಜವಾಗಿಯೇ ಸ್ಟಾರ್ ಸಿನಿಮಾಗಳು ತೆರೆಗೆ ಬರುವಾಗ ಹೊಸಬರು ಸ್ವಲ್ಪ ದೂರವೇ ನಿಲ್ಲುತ್ತಾರೆ. ಹಾಗಾಗಿ, ಸಿನಿಮಾ ಬಿಡುಗಡೆಯೂ ಇಳಿಕೆ ಕಾಣಲಿದೆ.
ಫೆಬ್ರವರಿಯಲ್ಲಿ ರಿಲೀಸ್ ಪ್ಲ್ರಾನ್ ಮಾಡಿರುವ ಸಿನಿಮಾಗಳು
ಲವ್ ಬರ್ಡ್ಸ್, ಹೊಂದಿಸಿ ಬರೆಯಿರಿ, ಸೌತ್ ಇಂಡಿಯನ್ ಹೀರೋ, 5ಡಿ, ಸಕೂಚಿ, 13, ಓ ಮನಸೇ, ಆಧುನಿಕ ಶ್ರವಣ ಕುಮಾರ ತನುಜಾ, ಖಯೊಸ್, ಜೂಲಿಯೆಟ್, ಪ್ರಜಾರಾಜ್ಯ, ನಟ ಭಯಂಕರ, ನಟ್ವರ್‌ಲಾಲ್, ರೂಪಾಯಿ, ಕೆಂಡದ ಸೆರಗು, ಒಂದಾನೊಂದು ಕಾಲದಲ್ಲಿ, ಮಾಂಕ್‌ದಿ ಯಂಗ್, ಲಾಂಗ್ ಡ್ರೈವ್, ಮೊದಲ ಮಳೆ, ಕ್ಯಾಂಪಸ್ ಕ್ರಾಂತಿ, ಒಂದೊಳ್ಳೆಯ ಲವ್ ಸ್ಟೋರಿ.
ರವಿಪ್ರಕಾಶ್ ರೈ
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.