ರಂಗಿನ ನಗರ ಈಗ ಫ‌ುಲ್‌ ಡಲ್‌


Team Udayavani, Apr 22, 2020, 10:24 AM IST

ರಂಗಿನ ನಗರ ಈಗ ಫ‌ುಲ್‌ ಡಲ್‌

ಗಾಂಧಿನಗರ ಅಂದರೆ, ಅದೊಂದು ಸಂಭ್ರಮ. ಮನರಂಜನೆಯ ತಾಣ ಎಂದೇ ಗುರುತಿಸಿಕೊಂಡಿದೆ. ಸದಾ ಜನಜಂಗುಳಿಯಿಂದಲೇ ಗಿಜಿಗಿಡುತ್ತಿದ್ದ ಗಾಂಧಿನಗರ ಈಗ ಅಕ್ಷರಶಃ ಶಾಂತವಾಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಕೋವಿಡ್ 19 ಎಂಬ ಹೆಮ್ಮಾರಿ.

ಹೌದು, ಗಾಂಧಿನಗರದಲ್ಲಿ ಎಲ್ಲಾ ಬಗೆಯ ಜನರು ಇದ್ದಾರೆ. ಎಲ್ಲಾ ವರ್ಗದವರೂ ಅಡ್ಡಾಡುತ್ತಾರೆ. ಹೆಚ್ಚಾಗಿ ಗಾಂಧಿನಗರ ಗುರುತಿಸಿಕೊಂಡಿರೋದೇ ಸಿನಿಮಾ ಚಟುವಟಿಕೆಗಳಿಂದ. ಕನ್ನಡ ಚಿತ್ರರಂಗದ ಹೃದಯ ಎಂದೇ ಕರೆಯಲ್ಪಡುವ ಈ ಗಾಂಧಿನಗರದಲ್ಲೀಗ ನೀರವ ಮೌನ. ನಿಜ ಹೇಳಬೇಕೆಂದರೆ, ಇಲ್ಲಿ ಸದಾ ಒಂದಿಲ್ಲೊಂದು ಚಿತ್ರರಂಗದ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಸಿನಿಮಾದ ವ್ಯಾಪಾರ ವಹಿವಾಟು ಬಹುತೇಕ ಗಾಂಧಿನಗರದಲ್ಲೇ ಇದೆ. ದಿನಕ್ಕೆ ಕೋಟಿಗಟ್ಟಲೆ ವಹಿವಾಟು ನಡೆಸುತ್ತಿದ್ದ ಗಾಂಧಿನಗರದಲ್ಲಿ ಈಗಂತೂ ಒಂದು ರುಪಾಯಿಯ ಮಾತೂ ಇಲ್ಲ. ಇಲ್ಲಿ ಚಿತ್ರಮಂದಿರಗಳಿಗಿಂತಲೂ ಹೆಚ್ಚು ವಿತರಕರ ಕಚೇರಿಗಳು, ನಿರ್ಮಾಪಕರ ಕಚೇರಿಗಳು, ಪ್ರದರ್ಶಕರ ಕಚೇರಿಗಳು, ಪೋಸ್ಟರ್‌ ಹಂಚುವವರ ಸಂಘದ ಕಚೇರಿಗಳೇ ಹೆಚ್ಚು. ಇವುಗಳೊಂದಿಗೆ ಸಿನಿಮಾ ಪೋಸ್ಟರ್‌ ವಿನ್ಯಾಸಗೊಳಿಸುವ,ಜಾಹಿರಾತು ವಿನ್ಯಾಸ ಮಾಡುವ ತಂತ್ರಜ್ಞರ ಕಚೇರಿಗಳೂ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಇವೆ. ಸದಾ ಸಿನಿಮಾ ಮಂದಿಯಿಂದ ತುಂಬಿ ತುಳುಕುತ್ತಿದ್ದ ಈ ಕಚೇರಿಗಳೀಗ ಬೀಗ ಹಾಕಿವೆ. ಇನ್ನು, ಶುಕ್ರವಾರ ಬಂತೆಂದರೆ, ಸಿನಿಪ್ರೇಮಿಗಳ ಮೊಗದಲ್ಲಿ ಮಂದಹಾಸ. ಕಾರಣ, ಅಂದು ಹೊಸ ಸಿನಿಮಾಗಳ ಬಿಡುಗಡೆ. ಹಾಗಾಗಿ ಅದೊಂದು ಹಬ್ಬದ ವಾತಾವರಣವೇ ತುಂಬಿರುತ್ತಿತ್ತು. ದೊಡ್ಡ ದೊಡ್ಡ ಹಾರಗಳು, ಬಿಡಿ ಹೂಗಳ ಹಾರಾಟವೇ ಕಾಣಸಿಗುತ್ತಿತ್ತು. ಹೂವಿನ ವ್ಯಾಪಾರಿಗಳಿಗಂತೂ ಶುಕ್ರವಾರ ಬೇಡಿಕೆ ಹೆಚ್ಚುತ್ತಿತ್ತು. ಅದೀಗ ಕಳೆದ ಒಂದುವರೆ ತಿಂಗಳಿನಿಂದಲೂ ಆ ಸಂಭ್ರಮವೇ ಅಲ್ಲಿಲ್ಲ.

ಇನ್ನು, ಚಿತ್ರಮಂದಿರಗಳ ಮುಂದೆ ಬ್ಲಾಕ್‌ ಟಿಕೆಟ್‌ ಮಾಡುವವರ ದಂಡೇ ಇರುತ್ತಿತ್ತು. ಬ್ಲಾಕ್‌ ಟಿಕೆಟ್‌ ಮಾರಿ ಬದುಕು ಸವೆಸುತ್ತಿದ್ದ ಅದೆಷ್ಟೋ ಮಂದಿ ಬದುಕು ಈಗ ಮೂರಾಬಟ್ಟೆಯಾಗಿದೆ. ಚಿತ್ರಮಂದಿರಗಳ ಗೇಟ್‌ ಮುಂದೆ ಅಲೆದಾಡುತ್ತಿರುವ ಹೂವು ಮಾರುವವರು, ಬ್ಲಾಕ್‌ಟಿಕೆಟ್‌ ಮಾರುವವರು, ತಮಟೆ ಹಿಡಿದು ಬಾರಿಸುವವವರು ಸೇರಿದಂತೆ ಇತರೆ ವಿಭಾಗದ ಹಲವರು, ಯಾವಾಗ ಕೋವಿಡ್ 19  ಕಾಟ ತಪ್ಪುತ್ತೋ, ನಾವು ಯಾವಾಗ ಪುನಃ ಸಿನಿಮಾ ಕಟೌಟ್‌ಗೆ ಹಾರ ಮಾಡಿಕೊಡುತ್ತೇವೋ, ಪಟಾಕಿ ಸಿಡಿಸಿ ಡ್ಯಾನ್ಸ್‌ ಮಾಡಿ ಹಣ ಪಡೆಯುತ್ತೇವೋ, ತಮಟೆ ಹಿಡಿದು ಬಾರಿಸಿ ಕೂಲಿ ಪಡೆಯುತ್ತೇವೋ ಎಂಬ ಗೊಂದಲದಲ್ಲೇ ಇದ್ದಾರೆ. ಬಹುತೇಕ ಸಣ್ಣಪುಟ್ಟ ಅಂಗಡಿ ಮುಗ್ಗಟ್ಟು ಮಾಲೀಕರು ಕೂಡ ಈ ಸಿನಿಮಾ ನಂಬಿಯೇ ಬದುಕು ಕಟ್ಟಿಕೊಂಡಿದ್ದವರೂ ಇದ್ದಾರೆ. ಗೂಡಂಗಡಿಗಳಲ್ಲಿ ಸಿನಿಮಾ ನೋಡಲು ಬರುವ ಬಹುತೇಕರು ಚಹಾ, ಸಿಗರೇಟ್‌ ಇತ್ಯಾದಿ ಖರೀದಿಸುವ ಮೂಲಕ ಅವರ ಮೊಗದಲ್ಲು ಮಂದಹಾಸ ಮೂಡಿಸುತ್ತಿದ್ದರು. ಆದರೆ, ಈ ಕೋವಿಡ್ 19  ಆವರಿಸಿ ಎಲ್ಲರ ಬದುಕನ್ನೇ ಕತ್ತಲು ಮಾಡಿಬಿಟ್ಟಿದೆ.

ಸದಾ ಜನಜಂಗುಳಿ ನಡುವೆ ಸದ್ದು-ಗದ್ದಲದಿಂದ ತುಂಬಿಕೊಂಡಿರುತ್ತಿದ್ದ ಗಾಂಧಿನಗರ ಈಗ ಶಾಂತವಾಗಿದೆ. ಮೊದಲ ಸ್ವರೂಪ ಪಡೆಯೋಕೆ ಇನ್ನೆಷ್ಟು ದಿನ ಕಾಯಬೇಕೋ? ಎಂಬ ಪ್ರಶ್ನೆಯಲ್ಲೇ ಸಿನಿಮಾ ಮಂದಿ ದಿನದೂಡುತ್ತಿದ್ದಾರೆ.

ಟಾಪ್ ನ್ಯೂಸ್

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ

siddaramaiah

MUDA ಹಗರಣ: ನ.23ಕ್ಕೆ ಸಿಎಂ ಮೇಲ್ಮನವಿ ವಿಚಾರಣೆ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Maryade Prashne movie trailer out

Maryade Prashne: ಪ್ರಶ್ನೆ ಕೇಳಲು ಬಂದ ಮರ್ಯಾದಸ್ತರು

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

5

Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’

BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ

BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.