Short Film: ಹೊಸಬರ ಕಲರ್ ಕನಸಿಗೆ ಹಂಸಲೇಖ ಸಾಥ್
Team Udayavani, Dec 7, 2023, 7:08 PM IST
ಯುವ ಪ್ರತಿಭೆ ಯಶ್ಚಿತ್ ಗೌಡ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ “ಕಲರ್ ಹನುಮ’ ಕಿರುಚಿತ್ರ ಇತ್ತೀಚೆಗೆ ಬಿಡುಗಡೆಯಾಯಿತು. ಜಗದೀಶ ಎಂ. ದೇವನಹಳ್ಳಿ ಬಂಡವಾಳ ಹೂಡಿ ನಿರ್ಮಿಸಿರುವ “ಕಲರ್ ಹನುಮ’ ಕಿರುಚಿತ್ರದಲ್ಲಿ ನವೀನ್ ಎಸ್. ಆರ್, ದೀಪಶ್ರೀ ಗೌಡ, ಚೇತನ್ ತ್ರಿವೇಣ್, ಕುಶಾಲ್ ನಾರಾಯಣ ಗೌಡ, ಮಹರ್ಷಿ, ಲಲಿತಾ, ತೇಜಸ್ವಿನಿ ಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ “ಕಲರ್ ಹನುಮ’ ಕಿರುಚಿತ್ರವನ್ನು ಬಿಡುಗಡೆಗೊಳಿಸಿ ಹೊಸಬರ ಪ್ರಯತ್ನವನ್ನು ಪ್ರಶಂಸಿಸಿದರು.
ಇದೇ ವೇಳೆ ಮಾತನಾಡಿದ ಹಂಸಲೇಖ, “ಇಂದು ಬಣ್ಣದ ಲೋಕದಲ್ಲಿದ್ದರೂ ಮನುಷ್ಯ ಚಿತ್ರಮಂದಿರ ಒಳ ಹೊಕ್ಕರೆ ಕತ್ತಲು, ಗಾಳಿ, ರಕ್ತ ಕಾಣಿಸಿಕೊಂಡು, ಆತನು ತನಗೆ ಗೊತ್ತಿಲ್ಲದಂತೆ ಕತ್ತಲೆ ಕಡೆ ಹೋಗುತ್ತಿದ್ದಾನೆ. “ತಾರೆ ಜಮೀನ್ ಪರ್’ ಸಿನಿಮಾದಲ್ಲಿ ಅಮೀರ್ ಖಾನ್ ಒಂದು ಸಮಸ್ಯೆ ಇಟ್ಟುಕೊಂಡು ದೊಡ್ಡ ಸಿನಿಮಾ ಮಾಡಿದ್ದರು. ಅದರಂತೆ ಬಹುತೇಕ ಹೊಸಬರೇ ಸೇರಿಕೊಂಡು ಅಂಥದ್ದೇ ಒಂದು ವಿಷಯವನ್ನು ಇಟ್ಟುಕೊಂಡು “ಕಲರ್ ಹನುಮ’ ಕಿರುಚಿತ್ರ ಮಾಡಿದ್ದಾರೆ. ಇದರ ಕಥೆಯ ಆಯ್ಕೆ ಬಹಳ ಚೆನ್ನಾಗಿದೆ. ಈಗಿನ ವಾತಾವರಣದಲ್ಲಿ ಹೊಸಬಗೆಯಲ್ಲಿ ವಿಷಯವನ್ನು ಹೇಳಲು ದಾರಿ ಹುಡುಕಿಕೊಂಡಿರುವುದಕ್ಕೆ ಎಲ್ಲರನ್ನೂ ಅಭಿನಂದಿಸಬೇಕಾಗಿದೆ’ ಎಂದರು.
“ಕಲರ್ ಹನುಮ’ ಕಿರುಚಿತ್ರಕ್ಕೆ ರವಿರಾಜ್ ಸಂಗೀತ ಸಂಯೋಜಿಸಿದ್ದು, ಬೆನಕರಾಜು ಛಾಯಾಗ್ರಹಣ ಮತ್ತು ಸುರೇಶ್ ಅರಸ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರು ಸುತ್ತಮುತ್ತ “ಕಲರ್ ಹನುಮ’ ಕಿರುಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಸೋಶಿಯಲ್ ಮೀಡಿ ಯಾದಲ್ಲಿ “ಕಲರ್ ಹನುಮ’ ಕಿರುಚಿತ್ರಕ್ಕೆ ನೋಡು ಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.