ಆಗಸ್ಟ್ 31 ರಿಂದ ಕಾಮಿಡಿ ಕಿಲಾಡಿಗಳು ಸೀಸನ್- 3
Team Udayavani, Aug 28, 2019, 3:00 AM IST
ಜೀ ಕನ್ನಡ ವಾಹಿನಿಯಲ್ಲಿ ಈಗ ಮತ್ತೂಂದು ಬಾರಿ ನಗಿಸಲು ಕಾಮಿಡಿ ಕಿಲಾಡಿಗಳ ಆಗಮನವಾಗುತ್ತಿದೆ. ಹೌದು, ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿ, “ಡ್ರಾಮಾ ಜೂನಿಯರ್’, “ಸರಿಗಮಪ’, “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’, “ವೀಕೆಂಡ್ ವಿತ್ ರಮೇಶ್’ ಹೀಗೆ ಹಲವು ರಿಯಾಲಿಟಿ ಶೋಗಳ ಸಾರವನ್ನು ಉಣಬಡಿಸಿದೆ. ಇನ್ನು, ಕಳೆದ ಎರಡು ಸೀಸನ್‌ನಲ್ಲೂ ಅತೀ ಮನರಂಜನೆ ಕೊಟ್ಟು ಮೆಚ್ಚುಗೆ ಪಡೆದ “ಕಾಮಿಡಿ ಕಿಲಾಡಿಗಳು’ ಈಗ “ಸೀಸನ್ 3’ಗೆ ಸಜ್ಜಾಗಿದೆ.
ಹೌದು, ಅದೇ ತಂಡ ಮತ್ತೂಂದು ಸೀಜನ್‌ಗೆ ರೆಡಿಯಾಗಿದೆ. ಈ “ಕಾಮಿಡಿ ಕಿಲಾಡಿಗಳು ಸೀಜನ್-3′ ರಿಯಾಲಿಟಿ ಶೋಗೆ ರಾಜ್ಯಾದ್ಯಂತ 9 ಜಿಲ್ಲೆಗಳಲ್ಲಿ ನಡೆಸಿದ ಆಡಿಷನ್‌ನಲ್ಲಿ ಸಾವಿರಾರು ಉತ್ಸಾಹಿ ಪ್ರತಿಭಾವಂತರು ಭಾಗವಹಿಸಿದ್ದರು. ಆ ಪೈಕಿ ಪ್ರತಿಭಾನ್ವಿತ ಕಿಲಾಡಿಗಳನ್ನು ಆಯ್ಕೆ ಮಾಡಿ, ಮೆಗಾ ಆಡಿಷನ್ ಮೂಲಕ ಕರ್ನಾಟಕಕ್ಕೆ ಪರಿಚಯಿಸುವ ಪ್ರಯತ್ನಕ್ಕೆ ವಾಹಿನಿ ಮುಂದಾಗಿದೆ. ಎಂದಿನಂತೆಯೇ “ಕಾಮಿಡಿ ಕಿಲಾಡಿಗಳು ಸೀಜನ್-3′ ಕಾರ್ಯಕ್ರಮಕ್ಕೆ ಜಗ್ಗೇಶ್, ರಕ್ಷಿತಾ ಪ್ರೇಮ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮಾಸ್ಟರ್ ಆನಂದ್ ಈ ಸಲವೂ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಭಾಗವಹಿಸಲಿರುವ ಸ್ಪರ್ಧಿಗಳಿಗೆ ರಂಗ ತರಬೇತಿ ಜೊತೆಗೆ ಹಾಸ್ಯದ ಹಲವು ಮಜಲುಗಳನ್ನು ಪರಿಚಯಿಸಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಹಾಸ್ಯ ಕಲಾವಿದರ ಸಾಲಿಗೆ ಕೊಡುಗೆಯಾಗಿ ನೀಡುವ ಉದ್ದೇಶದಿಂದ “ಕಾಮಿಡಿ ಕಿಲಾಡಿಗಳು ಸೀಜನ್-3′ ಕಾರ್ಯಕ್ರಮ ಶುರುವಾಗಲಿದೆ. ಅಂದಹಾಗೆ, ಆಗಸ್ಟ್ 31ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ “ಕಾಮಿಡಿ ಕಿಲಾಡಿಗಳು ಸೀಜನ್-3′ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.