ಬಿಡುಗಡೆಗೆ ಕಾದಿವೆ 4 ಸಿನಿಮಾಗಳು

Team Udayavani, Mar 4, 2017, 11:22 AM IST

Shraddha-srinath.jpg

ಕನ್ನಡದ ನಟಿ ಶ್ರದ್ಧಾ ಶ್ರೀನಾಥ್‌ ಇದೀಗ ಫ‌ುಲ್‌ ಬಿಜಿ! ಹೌದು, ಶ್ರದ್ಧಾ, ಯಶಸ್ವಿ ಸಿನಿಮಾ “ಯು ಟರ್ನ್’ ಮಾಡಿದ್ದೇ ತಡ, ಒಂದರ ಮೇಲೊಂದರಂತೆ ಅವಕಾಶಗಳು ಅವರನ್ನು ಹುಡುಕಿ ಬಂದಿದ್ದು ನಿಜ. ಕನ್ನಡಕ್ಕಿಂತ ಪರಭಾಷೆ ಚಿತ್ರಗಳೇ ಅವರನ್ನು ಹೆಚ್ಚು ಹುಡುಕಿ ಬಂದಿದ್ದು ಎಂಬುದು ವಿಶೇಷ. ಸದ್ಯಕ್ಕೆ ಶ್ರದ್ಧಾ ಶ್ರೀನಾಥ್‌ ಅಭಿನಯದ ನಾಲ್ಕು ಸಿನಿಮಾಗಳು ಈಗ ಬಿಡುಗಡೆಗೆ ರೆಡಿಯಾಗಿವೆ. ಹಾಗೆ ನೋಡಿದರೆ, “ಯು ಟರ್ನ್’ ಬಳಿಕ ಶ್ರದ್ಧಾ ಶ್ರೀನಾಥ್‌ ಅಭಿನಯಿಸಿದ ಕನ್ನಡದ ಯಾವ ಸಿನಿಮಾನೂ ರಿಲೀಸ್‌ ಆಗಿಲ್ಲ.

ಈಗ ಸಿಂಪಲ್‌ ಸುನಿ ನಿರ್ದೇಶನದ “ಆಪರೇಷನ್‌ ಅಲಮೇಲಮ್ಮ’ ಎಂಬ ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಾಗುತ್ತಿದೆ. ಅದಷ್ಟೇ ಅಲ್ಲ, ಬಿ.ಎಸ್‌.ಪ್ರದೀಪ್‌ ವರ್ಮ ನಿರ್ದೇಶಿಸಿ, ನಿರ್ಮಿಸಿರುವ “ಉರ್ವಿ’ ಚಿತ್ರ ಈಗ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್‌ ಜತೆಯಲ್ಲಿ ಶ್ರುತಿಹರಿಹರನ್‌, ಶ್ವೇತಾಪಂಡಿತ್‌, ಜಾಹ್ನವಿ ಕೂಡ ನಟಿಸುತ್ತಿದ್ದಾರೆ. ಉಳಿದಂತೆ ಭವಾನಿ ಪ್ರಕಾಶ್‌ ಅವರೂ ಸಹ “ಉರ್ವಿ’ ಚಿತ್ರದಲ್ಲಿ ಇದೊಂದು ಮಹಿಳಾ ಪ್ರಧಾನ ಸಿನಿಮಾ.

ಇಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಅನೇಕ ಅಂಶಗಳಿವೆಯಂತೆ. ಈಗಿನ ಕಾಲಕ್ಕೆ ತಕ್ಕಂತಹ ಸಿನಿಮಾ ಇದಾಗಿದ್ದರೂ, ಇಲ್ಲಿ ಅನೇಕ ಸಂದೇಶಗಳಿವೆಯಂತೆ. “ಯು ಟರ್ನ್’ ಸಿನಿಮಾ ಬಿಡುಗಡೆಯಾಗಿ, ಎಲ್ಲೆಡೆ ಪ್ರಶಂಸೆ ಬರುತ್ತಿದ್ದಂತೆಯೇ, ಶ್ರದ್ಧಾ ಶ್ರೀನಾಥ್‌ಗೆ ಅವಕಾಶಗಳು ಹುಡುಕಿ ಬಂದಿದ್ದು ಸುಳ್ಳಲ್ಲ. ಅದರಲ್ಲೂ ತಮಿಳು ಭಾಷೆಯ ಚಿತ್ರಗಳೇ ಅವರನ್ನು ಹುಡುಕಿ ಬಂದವು. ಅದರಲ್ಲೂ ಖ್ಯಾತ ನಿರ್ದೇಶಕ ಮಣಿರತ್ನಂ ಅವರ “ಕಾಟ್ರಾ ವೇಲಿಯಿದೈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್‌ ನಟಿಸಿದ್ದಾರೆ.

ಕಾರ್ತಿಕ್‌ ಚಿತ್ರದ ಹೀರೋ. ಇನ್ನು, ಅದಿತಿರಾವ್‌ ಕೂಡ ಇದ್ದಾರೆ. ಎ.ಆರ್‌.ರೆಹಮಾನ್‌ ಸಂಗೀತವಿದೆ. ರವಿ ವರ್ಮನ್‌ ಛಾಯಾಗ್ರಾಹಕರು. ಈ ಚಿತ್ರ ಏಪ್ರಿಲ್‌ನಲ್ಲಿ ರಿಲೀಸ್‌ ಆಗಲಿದೆ. ತಮಿಳು ನಿರ್ದೇಶಕ ಕೆ.ಕಣ್ಣನ್‌ ನಿರ್ದೇಶನದ “ಇವನ್‌ ತಂತಿರನ್‌’ ಸಿನಿಮಾದಲ್ಲೂ ಶ್ರದ್ಧಾ ಶ್ರೀನಾಥ್‌ ನಾಯಕಿ. ಗೌತಮ್‌ ಕಾರ್ತಿಕ್‌ ಈ ಚಿತ್ರದ ಹೀರೋ. ಎಂ.ಕೆ.ರಾಮ್‌ಪ್ರಸಾದ್‌ ಮತ್ತು ಕೆ.ಕಣ್ಣನ್‌ ಅವರ ನಿರ್ಮಾಣ ಈ ಚಿತ್ರಕ್ಕಿದೆ. ಏಪ್ರಿಲ್‌ನಲ್ಲಿ “ಇವನ್‌ ತಂತಿರನ್‌’ ಚಿತ್ರ ತೆರೆಕಾಣುತ್ತಿದೆ. ಈಗಾಗಲೇ ಆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಇದರೊಂದಿಗೆ “ರಿಚ್ಚಿ’ ಎಂಬ ತಮಿಳು ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಾಗಿದೆ.

ಇದು ಕನ್ನಡದ “ಉಳಿದವರು ಕಂಡಂತೆ’ ಸಿನಿಮಾದ ರಿಮೇಕ್‌ ಎಂಬುದು ವಿಶೇಷ. ತಮಿಳಿನ “ವಿಕ್ರಮ್‌ ವೇದ’ ಎಂಬ ಮತ್ತೂಂದು ಸಿನಿಮಾದಲ್ಲೂ ಶ್ರದ್ಧಾ ಶ್ರೀನಾಥ್‌ ನಟಿಸಿದ್ದಾರೆ. ಪುಷ್ಕರ್‌ ಗಾಯತ್ರಿ ನಿರ್ದೇಶನದ ಈ ಸಿನಿಮಾದಲ್ಲಿ ಆರ್‌.ಮಾಧವನ್‌, ವಿಜಯ್‌ ಸೇತುಪತಿ ಇತರರು ನಟಿಸಿದ್ದಾರೆ. ಸ್ಯಾಮ್‌ ಸಂಗೀತ ನೀಡಿದ್ದಾರೆ.ಪಿ.ಎಸ್‌.ವಿನೋದ್‌ ಕ್ಯಾಮೆರಾ ಹಿಡಿದಿದ್ದಾರೆ. ಅದೇನೆ ಇರಲಿ, ಕನ್ನಡದ ನಟಿ, ಇಲ್ಲಿಗಿಂತ ಪರಭಾಷೆಯಲ್ಲೇ ಹೆಚ್ಚು ಚಿತ್ರಗಳನ್ನು ಮಾಡಿರುವ ಶ್ರದ್ಧಾ, ಸದ್ಯಕ್ಕಂತೂ ಬಿಝಿ.

ಟಾಪ್ ನ್ಯೂಸ್

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

DKS-BGv

Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Rachel David hope on Unlock Raghava Movie

Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್‌

Shivanna cinema in Vallarasu director’s film

N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ

FIR 6 to 6 Kannada movie

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.