ಡಿಸೆಂಬರ್ 10ರಂದು ತೆರೆಗೆ;ಗಾಂಧಿನಗರದ ಗಮನ ಸೆಳೆಯಲಿದೆ ‘ಕ್ಯಾನ್ಸೀಲಿಯಂ’ ಚಿತ್ರ…
ಸೈನ್ಸ್ ಫಿಕ್ಷನ್ ಕಥೆಯನ್ನ ಹೊಸ ಫೀಲ್ ಕೊಡುವಂತೆ ಸಿನಿಮಾ ಮಾಡಿ ಮುಗಿಸಿದ್ದಾರೆ.
Team Udayavani, Dec 6, 2021, 2:53 PM IST
ಸಿನಿಮಾ ಅನ್ನೋದು ಕಲರ್ ಫುಲ್ ದುನಿಯಾ.. ದೂರದಿಂದ ನೋಡಿದವರಿಗೆ ಈ ಲೋಕದಲ್ಲೊಮ್ಮೆ ಮಿಂದೇಳಲೇಬೇಕು ಅಂತ ಅನ್ನಿಸದೇ ಇರದು. ಇನ್ನೊಂದಷ್ಟು ಮಂದಿ ಈ ಲೋಕದಲ್ಲೇ ನೆಲೆ ನಿಲ್ಲಬೇಕು ಎಂಬ ಬಯಕೆ ಇಟ್ಟುಕೊಂಡವರು ಸಿಕ್ತಾರೆ. ಆದ್ರೆ ಈ ಕಲರ್ ಫುಲ್ ಲೋಕಕ್ಕೆ ಎಂಟ್ರಿ ಕೊಡಬೇಕು ಅಂದ್ರೆ ಆಸಕ್ತಿ ಜೊತೆಗೆ ಒಂದಷ್ಟು ಕಲೆಯೂ ಕರಗತವಾಗಿರಬೇಕು. ಶ್ರಮವೂ ಜೊತೆಗಿರಬೇಕು. ಈ ಎಲ್ಲವನ್ನು ಒಟ್ಟುಗೂಡಿಸಿಕೊಂಡು ಹೊಸ ತಂಡವೊಂದು ರೆಡಿಯಾಗಿದೆ. ಅದೇ ಕ್ಯಾನ್ಸೀಲಿಯಂ ಸಿನಿಮಾ ತಂಡ.
ಹೊಸ ಕನಸುಗಳನ್ನ ಹೊತ್ತು ಚಿತ್ರರಂಗಕ್ಕೆ ಬಂದಿರುವ ಸಮರ್ಥ್ ಅಂಡ್ ಟೀಂ ಪ್ರೇಕ್ಷಕ ಪ್ರಭುಗಳ ನಾಡಿ ಮಿಡಿತ ಅರಿತಿದ್ದಾರೆ. ಹೊಸ ಕಥೆಯೊಂದನ್ನ ಸಿದ್ಧಪಡಿಸಿ, ಸಿನಿಪ್ರೇಮಿಗಳಿಗೆ ಉಣ ಬಡಿಸಲು ರೆಡಿಯಾಗಿದ್ದಾರೆ. ಕ್ಯಾನ್ಸೀಲಿಯಂ ಅನ್ನೋ ಡಿಫ್ರೆಂಟ್ ಟೈಟಲ್ ಇಟ್ಟು ಎಲ್ಲರ ಗಮನವನ್ನ ಈಗಾಗ್ಲೇ ಸೆಳೆದಿದ್ದಾರೆ. ಹಿಂದೆಂದು ಕೇಳದ ಈ ಪದವನ್ನ ಜನ ಗೂಗಲ್ ಮಾಡಿ ಹುಡುಕುವಂತೆ ಮಾಡಿದ್ದಾರೆ. ಹೀಗೆ ಹುಡುಕಿದವರಿಗೆ ಒಂದರ್ಥ ಕೂಡ ಸಿಕ್ಕಿದೆ. ಇದೊಂದು ಲ್ಯಾಟಿನ್ ಭಾಷೆಯ ಪದವಂತೆ. ಫ್ಲ್ಯಾನ್, ಸಲಹೆ ಹೀಗೆ ಹಲವು ಅರ್ಥಗಳು ಇದಕ್ಕಿದೆ..ಟೈಟಲ್ ಡಿಫ್ರೆಂಟ್ ಆಗಿರುವಷ್ಟೇ ಕಥೆ ಕೂಡ ಅದ್ಭುತವಾಗಿದೆ. ಸೈನ್ಸ್ ಫಿಕ್ಷನ್ ಕಥೆಯೊಂದನ್ನ ಜನರಿಗೆ ಮನಮುಟ್ಟುವಂತೆ ಹೆಣೆದಿದ್ದಾರೆ. ಹೀಗಾಗಿ ಟೈಟಲ್ ನ ಅರ್ಥ ಸಿನಿಮಾದ ಎಂಡ್ ನಲ್ಲಿ ಪಕ್ಕಾ ಅರ್ಥ ಆಗುತ್ತೆ ಅನ್ನೋದು ಸಮರ್ಥ್ ಅಂಡ್ ಟೀಂನ ಅಭಿಪ್ರಾಯ.
ಸಾವಿರಾರು ಕನಸು ಹೊತ್ತು ಗಾಂಧಿನಗರದ ಕದ ತಟ್ಟಿರುವ ಸಮರ್ಥ್ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಜೊತೆ ಜೊತೆಗೆ ಮುಖ್ಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸೈನ್ಸ್ ಫಿಕ್ಷನ್ ಕಥೆಯನ್ನ ಹೊಸ ಫೀಲ್ ಕೊಡುವಂತೆ ಸಿನಿಮಾ ಮಾಡಿ ಮುಗಿಸಿದ್ದಾರೆ. ಇನ್ನೇನಿದ್ರು ಪ್ರೇಕ್ಷಕನ ಮುಂದೆ ದರ್ಶನ ಮಾಡಿಸೋದಷ್ಟೇ ಬಾಕಿ ಉಳಿದಿದೆ. ಅದು ಕೂಡ ಡಿಸೆಂಬರ್ 10ಕ್ಕೆ ಆಗಲಿದೆ.
ಸಾಕಷ್ಟು ವರ್ಷಗಳ ಪ್ರಯತ್ನ ಇಂದು ಫಲ ಸಿಗುವಂತೆ ಮಾಡಿದೆ. ಸಮರ್ಥ್ ಸಿನಿಮಾದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ಹೊತ್ತಿದ್ದಾರೆ. ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರ ಸಹೋದರ ಪ್ರೀತಂ ಕೂಡ ಚಿತ್ರದ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ.
ಸೀತಾರಾಮ ಶಾಸ್ತ್ರಿ ಪ್ರೊಡಕ್ಷನ್ ಹೌಸ್ ಬ್ಯಾನರಿನಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ರೇಷ್ಮಾ ರಾವ್ ಈ ಸಿನಿಮಾದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸುದರ್ಶನ್ ಜಿ.ಕೆ ಛಾಯಾಗ್ರಹಣ, ದ್ವೈಪಾಯಣ್ ಸಿಂಘ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸಮರ್ಥ್, ಪ್ರೀತಂ, ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ, ಖುಷಿ ಆಚಾರ್, ಜಗದೀಶ್ ಮಲ್ನಾಡ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಡಿಸೆಂಬರ್ 10ರಂದು ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.