Bigg Boss ಮನೆಗೆ ಡ್ರೋನ್ ಪ್ರತಾಪ್, ರಕ್ಷಕ್ ಬುಲೆಟ್..? ಇವರೇ ಅಂತಿಮ ಸ್ಪರ್ಧಿಗಳು?
Team Udayavani, Oct 8, 2023, 12:15 PM IST
ಬೆಂಗಳೂರು: ಬಿಗ್ ಬಾಸ್ ಸೀಸನ್ 10 ಇಂದು ಸಂಜೆ (ಅ. 8ರಂದು) ಆರಂಭಗೊಳ್ಳಲಿದೆ. ಇನ್ನೇನು ಕಾರ್ಯಕ್ರಮ ಟಿವಿಯಲ್ಲಿ ಪ್ರಸಾರವಾಗಬೇಕೆನ್ನುವಾಗಲೇ ಸ್ಪರ್ಧಿಗಳ ಒಂದೊಂದೇ ಹೆಸರುಗಲು ಹೊರಬೀಳುತ್ತಿದೆ.
ಟ್ವಿಸ್ಟ್ ಮೇಲೆ ಟ್ವಿಸ್ಟ್ ಇರುತ್ತದೆ ಎಂದು ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮದ ಆಯೋಜಕರು ಹೇಳಿದ್ದಾರೆ. ಈಗಾಗಲೇ ಕೆಲ ಜನರ ಹೆಸರು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಆಗುವ ಪಟ್ಟಿಯಲ್ಲಿ ಪಕ್ಕಾ ಆಗಿದೆ.
ಸಿಕ್ಕಾಪಟ್ಟೆ ಸುದ್ದಿಯಾಗಿ, ಆ ಬಳಿಕ ಟ್ರೋಲ್ ಆಗಿದ್ದ ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಆಗೋದು ಪಕ್ಕಾ ಎನ್ನಲಾಗಿದೆ. ಕಲರ್ಸ್ ಕನ್ನಡ ಕಾರ್ಯಕ್ರಮದಲ್ಲಿ ಎಂಟ್ರಿ ಆಗುವ ಸ್ಪರ್ಧಿಗಳ ಪ್ರೋಮೊವನ್ನು ರಿಲೀಸ್ ಮಾಡಿದ್ದು, ಇದರಲ್ಲಿ ಡ್ರೋನ್ ಪ್ರತಾಪ್, ಬುಲೆಟ್ ಪ್ರಕಾಶ್ ಮಗ ರಕ್ಷಕ್ ಹಾಗೂ ವರ್ತೂರ್ ಸಂತೋಷ್ (ಹಳ್ಳಿಕಾರ್) ಅವರನ್ನು ತೋರಿಸಲಾಗಿದೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ.
ಮೂವರನ್ನು ವೇದಿಕೆ ಮೇಲೆ ಕರೆದು ಮೂವರಲ್ಲಿ ಯಾರು ಹೋಗಬೇಕು ಎನ್ನುವುದನ್ನು ಪ್ರೇಕ್ಷಕರಲ್ಲಿ ವೋಟ್ ಮಾಡಲು ಕಿಚ್ಚ ಹೇಳಿದ್ದಾರೆ. ಈ ಮೂವರಲ್ಲಿ ಯಾರು ಮನೆಯೊಳಗೆ ಹೋಗುತ್ತಾರೆ ಎನ್ನುವುದರ ಕುತೂಹಲಕ್ಕೆ ಸಂಜೆ 6 ಬಳಿಕ ತೆರೆ ಬೀಳಲಿದೆ.
ಇನ್ನು ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರೆ ಎನ್ನುವ ಪಟ್ಟಿಯೊಂದು ಹೊರಬಿದ್ದಿದೆ.
ಕಾಮಿಡಿ ಕಿಲಾಡಿ ಖ್ಯಾತಿಯ ಸಂತೋಷ್, ಕಿರುತೆರೆ ನಟಿ ಭಾಗ್ಯಶ್ರೀ,ನಮೃತಾ ಗೌಡ, ಸ್ನೇಹಿತ್ ಗೌಡ, ತನಿಶಾ ಗೌಡ,ವಿನಯ್ ಗೌಡ, ನೀತು ವನಜಾಕ್ಷಿ, ಗೌರೀಶ್ ಅಕ್ಕಿ, ಇಶಾನಿ, ನಟಿ ಸಂಗೀತ ಶೃಂಗೇರಿ, ಕಾರ್ತಿಕ್ ಮಹೇಶ್, ಸ್ನೇಕ್ ಶ್ಯಾಮ್ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಾಗಿ ಇರಲಿದ್ದಾರೆ ಎನ್ನಲಾಗಿದೆ.
ಯಾರ ಕತೆ ಶುರು? ಯಾವ ಕತೆ ಫಿನಿಷ್? ಆಟ ಶುರುವಾಗೋ ಮುಂಚೆಯೇ ಮುಗಿಯುವ ಭಯದಲ್ಲಿ ಸ್ಪರ್ಧಿಗಳು!
ಬಿಗ್ ಬಾಸ್ | GRAND PREMIERE ಇಂದು ಸಂಜೆ 6 | ಪ್ರತಿ ರಾತ್ರಿ 9:30 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/nTVY3ppi4b
— Colors Kannada (@ColorsKannada) October 8, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.