ಯಾರಿವಳೀ ಹುಡುಗಿ ಅಂಕಣಕ್ಕೆ ಕೋಸ್ಟಲ್‌ ಟು ಸ್ಯಾಂಡಲ್‌ ಚಿರ ಹೆಜ್ಜೆ


Team Udayavani, Sep 23, 2017, 4:49 PM IST

Chirasri-1.jpg

ತುಳು, ಕೊಂಕಣಿ ಸೇರಿದಂತೆ ಪ್ರಾದೇಶಿಕ ಭಾಷೆಯ ಚಿತ್ರಗಳಲ್ಲಿ ನಟಿಸಿದ ಅನೇಕ ನಟಿಯರ ಕನಸು ಬಹುತೇಕ ಒಂದೇ ಆಗಿರುತ್ತದೆ. ಅದೇನೆಂದರೆ ಕನ್ನಡ, ತಮಿಳು ಸೇರಿದಂತೆ ಇತರ ಭಾಷೆಯ ಚಿತ್ರರಂಗದಲ್ಲಿ ಬಿಝಿಯಾಗಬೇಕು. ಬಣ್ಣದ ಲೋಕದಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂಬುದು. ಹಾಗಾಗಿ ಅನೇಕರು ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಲೂ ಇರುತ್ತಾರೆ. ಆದರೆ, ಎಲ್ಲರಿಗೂ ಆ ಅವಕಾಶ ಸಿಗೋದಿಲ್ಲ. ಕೆಲವೊಮ್ಮೆ ಪ್ರಯತ್ನಗಳು ಫ‌ಲಿಸೋದಿಲ್ಲ. ಆದರೆ, ಈ ವಿಷಯದಲ್ಲಿ ಚಿರಶ್ರೀ ಮಾತ್ರ ಅದೃಷ್ಟವಂತೆ. ಕೋಸ್ಟಲ್‌ವುಡ್‌ನಿಂದ ಸ್ಯಾಂಡಲ್‌ವುಡ್‌, ಸ್ಯಾಂಡಲ್‌ವುಡ್‌ನಿಂದ ಕಾಲಿವುಡ್‌ಗೆ ನಿಧಾನವಾಗಿ ಕಾಲಿಡುತ್ತಿದ್ದಾರೆ. ಒಂದಷ್ಟು ಅವಕಾಶಗಳ ಮೂಲಕ ಇಲ್ಲಿ ನೆಲೆಯೂರುವ ಲಕ್ಷಣ ಕೂಡಾ ತೋರುತ್ತಿದ್ದಾರೆ. ಯಾವ ಚಿರಶ್ರೀ ಎಂದರೆ ಮೊದಲು ತುಳು ಸಿನಿಮಾಗಳನ್ನು ತೋರಿಸಬೇಕು. “ರಂಭಾರೊಟ್ಟಿ’ ಹಾಗೂ “ಪವಿತ್ರ’ ಎಂಬ ತುಳು ಸಿನಿಮಾಗಳಲ್ಲಿ ನಟಿಸಿದ್ದು, ಆ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. ಈ ಮೂಲಕ ಚಿರಶ್ರೀಯ ಸಿನಿಕೆರಿಯರ್‌ ಕೂಡಾ ಆರಂಭವಾಗಿದೆ. ಸಾಮಾನ್ಯವಾಗಿ ತುಳು ಸಿನಿಮಾಗಳಲ್ಲಿ ನಟಿಸುವ ನಾಯಕಿಯರು ಬಹುತೇಕ ದಕ್ಷಿಣ ಕನ್ನಡದವರೇ ಆಗಿರುತ್ತಾರೆ. ಚಿರಶ್ರೀ ಕೂಡಾ ಅದರಿಂದ ಹೊರತಲ್ಲ. ಬಾಲ್ಯದಿಂದಲೇ ಸಿನಿಮಾ ಆಸಕ್ತಿ ಹೊಂದಿದ್ದ ಚಿರಶ್ರೀಗೆ ತುಳು ಸಿನಿಮಾದಲ್ಲಿ ಅವಕಾಶ ಪಡೆಯುವ ಮೂಲಕ ತಮ್ಮ ಕನಸಿನ ಕ್ಷೇತ್ರಕ್ಕೆ ಧುಮುಕಿದ್ದಾರೆ. 

ಕೈ ಹಿಡಿದ ತುಳು ಸಿನಿಮಾಗಳು
ಮೊದಲೇ ಹೇಳಿದಂತೆ ಬಣ್ಣದ ಲೋಕದ ಮೇಲೆ ಆಸಕ್ತಿ ಹೊಂದಿದ್ದ ಚಿರಶ್ರೀಗೆ ಕಾಲೇಜು ದಿನಗಳಲ್ಲೇ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುತ್ತದೆ. ಅದು “ರಂಭಾರೊಟ್ಟಿ’ ಚಿತ್ರದ ಮೂಲಕ. ಈ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಅಧಿಕೃತವಾಗಿ ಬಣ್ಣದ ಲೋಕಕ್ಕೆ ಚಿರಶ್ರೀ ಎಂಟ್ರಿಕೊಡುತ್ತಿದ್ದಾರೆ. ಕೆಲವರ ಕನಸು ಮೊದಲ ಸಿನಿಮಾಕ್ಕೇ ಕಮರಿ ಹೋಗುತ್ತದೆ. ಇಷ್ಟಪಟ್ಟು ಮಾಡಿದ ಸಿನಿಮಾಗಳು ಕೈ ಹಿಡಿಯದಿರುವ ಮೂಲಕ ಬಂದ ದಾರಿಯಲ್ಲೇ ವಾಪಾಸ್‌ ಹೋಗುವ ಪರಿಸ್ಥಿತಿ ಬರುತ್ತದೆ. ಆದರೆ, ಚಿರಶ್ರೀ ಮಾತ್ರ ಆ ವಿಷಯದಲ್ಲಿ ಅದೃಷ್ಟವಂತೆ. ಏಕೆಂದರೆ “ರಂಭಾರೊಟ್ಟಿ’ ಚಿತ್ರಕ್ಕೆ ಹಾಗೂ ಚಿರಶ್ರೀಯ ನಟನೆಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುವ ಮೂಲಕ ಮತ್ತೂಂದು ಸಿನಿಮಾದಲ್ಲಿ ಅವಕಾಶ ಸಿಗುತ್ತದೆ. ಅದು “ಪವಿತ್ರ’. ಇದು ಚಿರಶ್ರೀ ನಟಿಸಿದ ತುಳು ಸಿನಿಮಾ. ಈ ಸಿನಿಮಾದಲ್ಲೂ ಚಿರಶ್ರೀಗೆ ಒಳ್ಳೆಯ ಪಾತ್ರ ಸಿಕ್ಕಿದ್ದು, ಸಿನಿಮಾದ ಬಗ್ಗೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

“ಸಿನಿಮಾ ಬಗ್ಗೆ ಕನಸು ಕಂಡಿದ್ದ ನನಗೆ “ರಂಭಾರೊಟ್ಟಿ’ ಹಾಗೂ “ಪವಿತ್ರ’ ಚಿತ್ರಗಳಲ್ಲಿ ಒಳ್ಳೆಯ ಪಾತ್ರ ಸಿಕ್ಕಿತು. ಆ ಮೂಲಕ ನನ್ನ ಸಿನಿ ಬದುಕು ಆರಂಭವಾಯಿತು. ಈಗ ತುಳು, ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾಗಳಿಂದಲೂ ಅವಕಾಶವಿದೆ.ಸದ್ಯ “ಓ ಮಂಜುನಾಥ’  ಎಂಬ ತುಳು ಸಿನಿಮಾ ಒಪ್ಪಿಕೊಂಡಿದ್ದೇನೆ’ ಎನ್ನುವುದು ಚಿರಶ್ರೀ ಮಾತು. ಮೊದಲ ಬಾರಿಗೆ ಕ್ಯಾಮರಾ ಎದುರಿಸಿದಾಗ ಸಹಜವಾಗಿಯೇ ಚಿರಶ್ರೀಗೆ ಭಯವಾಯಿತು. ಆದರೆ, ಈಗ ಒಂದಷ್ಟು ಸಿನಿಮಾಗಳನ್ನು ಮಾಡಿರುವುದರಿಂದ ಆ ಭಯ ದೂರವಾಗಿದ್ದು, ಆರಾಮವಾಗಿ ನಟಿಸುತ್ತೇನೆ ಎನ್ನುತ್ತಾರೆ ಚಿರಶ್ರೀ.

ತುಳು ಸಿನಿಮಾಗಳ ಮೂಲಕ ಗಮನ ಸೆಳೆದ ಚಿರಶ್ರೀಗೆ ಕನ್ನಡ ಚಿತ್ರಗಳಿಂದಲೂ ಅವಕಾಶ ಬರುತ್ತದೆ. ಈಗಾಗಲೇ ಚಿರಶ್ರೀ ನಟಿಸಿದ ಕನ್ನಡ ಸಿನಿಮಾ “ಕಲ್ಪನಾ-2′ ಬಿಡುಗಡೆಯಾಗಿದೆ. ಹೌದು, ಉಪೇಂದ್ರ ಅಭಿನಯದ “ಕಲ್ಪನಾ-2′ ಚಿತ್ರದಲ್ಲಿ ಚಿರಶ್ರೀಗೆ ಒಂದು ಸಣ್ಣ ಪಾತ್ರ ಸಿಕ್ಕಿದೆ. ಸಣ್ಣ ಪಾತ್ರವಾದರೂ ದೊಡ್ಡ ಸಿನಿಮಾ ಎಂಬ ಖುಷಿಯಲ್ಲೇ ಆ ಸಿನಿಮಾವನ್ನು ಒಪ್ಪಿಕೊಂಡು ನಟಿಸಿದ್ದಾರೆ ಚಿರಶ್ರೀ. ಚಿರಶ್ರೀಯ ಬಣ್ಣದ ಲೋಕದ ಆಸೆಗೆ ಬೆನ್ನೆಲುಬಾಗಿ ನಿಂತಿದ್ದು ಅವರ ಕುಟುಂಬವಂತೆ. “ಕುಟುಂಬದವರ ಬೆಂಬಲ ಇಲ್ಲದಿದ್ದರೆ ನಾನು ಈ ಕ್ಷೇತ್ರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಅಮ್ಮ ಸೇರಿದಂತೆ ಕುಟುಂಬದ ಪ್ರತಿಯೊಬ್ಬರೂ ನನ್ನ ನಟನಾ ಕೆರಿಯರ್‌ಗೆ ಪ್ರೋತ್ಸಾಹ ನೀಡುತ್ತಿದ್ದಾರೆ’ ಎನ್ನಲು ಚಿರಶ್ರೀ ಮರೆಯುವುದಿಲ್ಲ. 

ಕೈ ತುಂಬಾ ಅವಕಾಶ
ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಬೇಕೆಂಬ ಕನಸು ಕಂಡಿದ್ದ ಚಿರಶ್ರೀಗೆ ಈಗ ಒಂದಷ್ಟು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆ. “ಗೋಲ್‌ಮಾಲ್‌ ಬ್ರದರ್’, “ಹುಲಿರಾಯ’, “ಉಡುಂಬಾ’, “ಫ‌ಕೀರ’, “ಕರಿಗಂಬಳಿಯಲ್ಲಿ ಮಿಡಿನಾಗ’ ಚಿತ್ರಗಳಲ್ಲಿ ಚಿರಶ್ರೀ ನಾಯಕಿಯಾಗಿ ನಟಿಸಿದ್ದಾರೆ. “ಹುಲಿರಾಯ’ ಚಿತ್ರದಲ್ಲಿ ಅರಣ್ಯಾಧಿಕಾರಿಯ ಮಗಳಾಗಿ ನಟಿಸಿದ್ದು, ಆ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. “ಈಗ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಮೂರು ಸಿನಿಮಾಗಳಲ್ಲೂ ವಿಭಿನ್ನವಾದ ಪಾತ್ರ ಸಿಕ್ಕಿದೆ. ಪ್ರತಿ ಪಾತ್ರಗಳಿಗೂ ನ್ಯಾಯ ಒದಗಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ’ ಎನ್ನುವುದು ಚಿರಶ್ರೀ ಮಾತು. “ನನಗೆ ಸಾಕಷ್ಟು ಅವಕಾಶಗಳು ಬಂದಿದ್ದು ಸುಳ್ಳಲ್ಲ. ಆದರೆ, ನಾನು ಚಿತ್ರರಂಗಕ್ಕೆ ಹೊಸಬಳು. ಬಂದ ಅವಕಾಶಗಳನ್ನೆಲ್ಲಾ ಕಣ್ಣುಮುಚ್ಚಿ ಒಪ್ಪಿಕೊಂಡರೆ ಮುಂದೆ ನನ್ನ ಕೆರಿಯರ್‌ಗೆ ತೊಂದರೆಯಾಗುತ್ತದೆ. ಹಾಗಾಗಿ, ನನಗೆ ತುಂಬಾ ಇಷ್ಟವಾದ ಮತ್ತು ಈ ಪಾತ್ರಕ್ಕೆ ನಾನು ನ್ಯಾಯ ಒದಗಿಸಬಲ್ಲೆ ಎಂಬ ನಂಬಿಕೆ ಇದ್ದ ಪಾತ್ರಗಳನ್ನಷ್ಟೇ ಒಪ್ಪಿಕೊಂಡಿದ್ದೇನೆ. ನನಗೆ ಏಕಾಏಕಿ ಸಿನಿಮಾ ಮೇಲೆ ಸಿನಿಮಾ ಮಾಡಿ ಪಟ್ಟಿ ಬೆಳೆಸಿಕೊಳ್ಳುವ ಆಸೆ ಇಲ್ಲ. ನಿಧಾನವಾಗಿಯಾದರೂ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು’ ಎನ್ನುವುದು ಚಿರಶ್ರೀ ಮಾತು.  ಚಿರಶ್ರೀಗೆ ತೆಲುಗು ಹಾಗೂ ತಮಿಳು ಚಿತ್ರಗಳಿಂದಲೂ ಆಫ‌ರ್‌ ಬಂದಿದ್ದು, ಒಂದು ತೆಲುಗು ಹಾಗೂ ಎರಡು ತಮಿಳು ಸಿನಿಮಾಗಳಲ್ಲಿ ಚಿರಶ್ರೀ ನಟಿಸಿದ್ದಾರೆ. ಮುಂದೆ ಆ ಚಿತ್ರರಂಗದಲ್ಲಿ ಕ್ಲಿಕ್‌ ಆದರೆ ಅಲ್ಲೇ ಸೆಟ್ಲ ಆಗುವ ಆಲೋಚನೆ ಚಿರಶ್ರೀಗಂತೂ ಇಲ್ಲ. “ನನಗೆ ಎಲ್ಲಾ ಭಾಷೆಯ ಚಿತ್ರಗಳಲ್ಲಿ ನಟಿಸಬೇಕೆಂಬ ಆಸೆ ಇದೆ. ಕನ್ನಡ, ತುಳು ಸಿನಿಮಾಗಳಿಗೆ ಮೊದಲ ಆದ್ಯತೆ. ಏಕೆಂದರೆ, ನನಗೆ ಮೊದಲು ಅವಕಾಶ ಕೊಟ್ಟ ಚಿತ್ರರಂಗವಿದು’ ಎನ್ನುವುದು ಚಿರಶ್ರೀ ಮಾತು. ಬಹುತೇಕ ಎಲ್ಲಾ ನಟಿಯರಂತೆ ಚಿರಶ್ರೀಗೂ ಒಂದು ಆಸೆ ಇದೆ. ಅದೇನೆಂದರೆ ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸಬೇಕೆಂಬುದು. ಅವರ ಆ ಆಸೆ ಈಡೇರುತ್ತಾ ಕಾದು ನೋಡಬೇಕು.

ಬರಹ: ರವಿಪ್ರಕಾಶ್‌ ರೈ; ಚಿತ್ರಗಳು: ಸಂಗ್ರಹ

ಟಾಪ್ ನ್ಯೂಸ್

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

Lokayukta

MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.