‘ಜೇಮ್ಸ್’ ರಿಲೀಸ್ ಗೆ ಕೌಂಟ್‌ಡೌನ್
Team Udayavani, Mar 12, 2022, 9:40 AM IST
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಜೇಮ್ಸ್’ ತೆರೆಗೆ ಬರಲು ಕ್ಷಣ ಗಣನೆ ಆರಂಭವಾಗಿದೆ. ಅಪ್ಪು ಅಭಿನಯದ ಕೊನೆಯ ಚಿತ್ರವನ್ನು ಮಾ.17 ರಂದು ಥಿಯೇಟರ್‌ನಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳೂ ತುದಿಗಾಲಿನಲ್ಲಿ ನಿಂತಿದ್ದಾರೆ.
ಇನ್ನು “ಜೇಮ್ಸ್’ ಸಿನಿಮಾದ ಬಿಡುಗಡೆಗೆ ಒಂದುವಾರವಷ್ಟೇ ಬಾಕಿಯಿದೆ ಎನ್ನುವಾಗಲೇ ಚಿತ್ರತಂಡ, ಅಭಿಮಾನಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ “ಜೇಮ್ಸ್’ ಸಿನಿಮಾದ ಟಿಕೆಟ್‌ಗಳ ಪ್ರೀ-ಬುಕಿಂಗ್ ಪ್ರಾರಂಭಿಸಿದೆ. ಆನ್‌ಲೈನ್‌ನಲ್ಲಿ “ಜೇಮ್ಸ್’ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ತಮ್ಮ ನೆಚ್ಚಿನ ಪವರ್‌ಸ್ಟಾರ್ ಸಿನಿಮಾ ನೋಡಲು ಅಭಿಮಾನಿಗಳು ಮುಂಗಡ ಟಿಕೆಟ್ ಕಾಯ್ದಿರಿಸಲು ಪ್ರಾರಂಭಿಸಿದ್ದಾರೆ. ಸದ್ಯದ ಮಟ್ಟಿಗೆ ಮುಂದಿನ ವಾರ “ಜೇಮ್ಸ್’ ಚಿತ್ರ ರಿಲೀಸ್ ಆಗುತ್ತಿರುವುದರಿಂದ, ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲೂ ಯಾವುದೇ ಚಿತ್ರಗಳೂ ಬಿಡುಗಡೆಯಾಗುತ್ತಿಲ್ಲ.
ಇದನ್ನೂ ಓದಿ:ಉಪೇಂದ್ರ ನಿರ್ದೇಶನದ ಹೊಸಚಿತ್ರ ‘ಯು’; ಪೋಸ್ಟರ್ ನಲ್ಲೇ ಟ್ವಿಸ್ಟ್ ನೀಡಿದ ಉಪ್ಪಿ
ಮತ್ತೂಂದೆಡೆ ಚಿತ್ರ ಮಂದಿರಗಳ ಮುಂದೆಯೂ “ಜೇಮ್ಸ್’ ಸಂಭ್ರಮದ ಕಳೆಕಟ್ಟುತ್ತಿದೆ. ಚಿತ್ರಮಂದಿರಗಳ ಮುಂದೆ ಪುನೀತ್ ರಾಜಕುಮಾರ್ ಅವರ ಬೃಹತ್ ಕಟೌಟ್‌ಗಳನ್ನು ಅಭಿಮಾನಿಗಳು ನಿರ್ಮಿಸುತ್ತಿದ್ದಾರೆ. ಬೆಂಗಳೂರಿನ ವೀರೇಶ್, ನವರಂಗ್ ಸೇರಿ ಅನೇಕ ಚಿತ್ರಮಂದಿರಗಳು ಮತ್ತು ರಾಜ್ಯದ ಪ್ರಮುಖ ನಗರಗಳ ಚಿತ್ರಮಂದಿರಗಳ ಮುಂದೆಯೂ ಅಪ್ಪು ಕಟೌಟ್ ರಾರಾಜಿ ಸುತ್ತಿದೆ. ಇತ್ತೀಚೆಗಷ್ಟೇ “ಜೇಮ್ಸ್’ ಚಿತ್ರದ “ಸಲಾಂ ಸೋಲ್ಜರ್’ ಹಾಡು ಬಿಡುಗಡೆ ಯಾಗಿದ್ದು, ಪುನೀತ್ ಈ ಹಾಡಿನಲ್ಲಿ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ “ಜೇಮ್ಸ್’ ಕ್ರೇಜ್ ಇಮ್ಮಡಿಯಾಗುತ್ತಿದೆ.
ಅಭಿಮಾನಿಗಳ ತಯಾರಿ, ಕಾತುರತೆ ಎರಡೂ ಹೆಚ್ಚಾಗುತ್ತಿದೆ. ವಿಶ್ವದಾದ್ಯಂತ ಸರಿ ಸುಮಾರು 4 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ “ಜೇಮ್ಸ್’ ರಿಲೀಸ್‌ಗೆ ಯೋಜನೆ ಹಾಕಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.