ಈ ವರ್ಷ ಕನ್ನಡ ಬಿಗ್‌ಬಾಸ್ ನಡೆಯೋದು ಡೌಟು!
ಕೋವಿಡ್ -19 ಸದ್ಯಕ್ಕಿಲ್ಲ ಬಿಗ್‌ಹೌಸ್ ಎಂಟ್ರಿ
Team Udayavani, Sep 9, 2020, 12:55 PM IST
ಎಲ್ಲವೂಸರಿಯಾಗಿದ್ದರೆ ಇಷ್ಟೊತ್ತಿಗಾಗಲೇ ಕನ್ನಡ ಬಿಗ್‌ಬಾಸ್ ಎಂಟನೇ ಸೀಸನ್‌ಗೆ ತಯಾರಿ ಜೋರಾಗಿ ನಡೆಯುತ್ತಿರುತ್ತಿತ್ತು. ಯಾರ್ಯಾರು ಬಿಗ್‌ಬಾಸ್ ಮನೆಯೊಳಗೆ ಹೋಗುತ್ತಾರೆಂಬ ಲೆಕ್ಕಾಚಾರ ಶುರುವಾಗುವ ಸಮಯವಿದು. ಆದರೆ, ಈ ಬಾರಿ ಚಿತ್ರಣ ಬದಲಾಗಿದೆ. ಒಂದೇ ಮಾತಲ್ಲಿ ಹೇಳುವುದಾದರೆ ಈ ವರ್ಷ ಕನ್ನಡ ಬಿಗ್‌ಬಾಸ್ ಸೀಸನ್ -7 ನಡೆಯೋದೇ ಡೌಟು!
ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ಸತ್ಯ. ಕೋವಿಡ್ 19 ಬಿಗ್‌ಬಾಸ್ ಮೇಲೂ ಪರಿಣಾಮ ಬೀರಿದೆ. ಕೊರೊನಾ ಲಾಕ್ ಡೌನ್ ಇದ್ದ ಕಾರಣ ಹಾಗೂ ಕೆಲವು ದಿನಗಳ ಹಿಂದಿನ ವರೆಗೂರಿಯಾಲಿಟಿ ಶೋಗಳನ್ನು ನಡೆಸಲು ಅನುಮತಿ ಸಿಕ್ಕಿರಲಿಲ್ಲ. ಆದರೆ, ಈಗ ಅನುಮತಿ ಏನೋ ಸಿಕ್ಕಿದೆ. ಆದರೆ, ಬಿಗ್‌ಬಾಸ್ ಕಾರ್ಯಕ್ರಮ ಮಾತ್ರ ಸದ್ಯಕ್ಕೆ ಆರಂಭವಾಗಿಲ್ಲ. ಒಂದೇ ಮನೆಯೊಳಗೆ 18 ಜನ ಸ್ಪರ್ಧಿಗಳು ಎಂಟ್ರಿಯಾಗೋದು ಇಲ್ಲ.
ಮೊದಲೇ ಹೇಳಿದಂತೆ ಕೋವಿಡ್-19 ನಿಂದಾಗಿ ಬಿಗ್‌ಬಾಸ್ ಮುಂದಕ್ಕೆ ಹೋಗಿದೆ. ಸೀಸನ್‌ನಿಂದ ಸೀಸನ್ ಬಿಗ್‌ಬಾಸ್ ಮನೆಯ ಡಿಸೈನ್ ಬದಲಾಗುತ್ತಿತ್ತು. ಸಂಪೂರ್ಣವಾಗಿ ಮನೆಯ ವಿನ್ಯಾಸವನ್ನು ಬದಲಾವಣೆ ಮಾಡಲಾಗುತ್ತದೆ. ಈ ಕೆಲಸಕ್ಕೆ ಸಾಕಷ್ಟು ಸಮಯ ಹಿಡಿಯುತ್ತಿತ್ತು. ಆದರೆ,ಈ ಬಾರಿ ಆ ಕೆಲಸಕ್ಕೆ ಕೋವಿಡ್ 19 ಅಡ್ಡಿಯಾಗಿದ್ದು ಸುಳ್ಳಲ್ಲ. ಜೊತೆಗೆ ಇಂತಹ ಸಮಯದಲ್ಲಿ ಒಂದೇ ಮನೆಯಲ್ಲಿ ಅಷ್ಟೊಂದು ಮಂದಿ ಇರೋದು ಹಾಗೂ ಟಾಸ್ಕ ನಲ್ಲಿ ಸಾಮಾಜಿಕ ಅಂತರಕಾಯ್ದುಕೊಳ್ಳೋದು ಕೂಡಾ ಕಷ್ಟವಾಗುವ ಕಾರಣದಿಂದ ಸದ್ಯಕ್ಕೆ ಬಿಗ್‌ಬಾಸ್ ಸೀಸನ್ 8 ಮುಂದಕ್ಕೆ ಹೋಗಿದೆ. ಇತ್ತ ಕಡೆ ಸುದೀಪ್ ಕೂಡಾ ಹೊಸ ಚಿತ್ರದಲ್ಲಿ ಬಿಝಿಯಾಗಿದ್ದಾರೆ.
ಅನೂಪ್ ಭಂಡಾರಿ ನಿರ್ದೇಶನದ “ಫ್ಯಾಂಟಮ್’ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಆ ಸುದೀಪ್ ಅದರಲ್ಲಿ ತೊಡಗಿಕೊಂಡಿದ್ದಾರೆ. ಇನ್ನು, ಅವರ “ಕೋಟಿಗೊಬ್ಬ-3′ ಚಿತ್ರದ ಸಣ್ಣಪುಟ್ಟ ಕೆಲಸಗಳು ಕೂಡಾ ಬಾಕಿ ಇವೆ. ಹೀಗಾಗಿ ಸುದೀಪ್ ಕೂಡಾ ಬಿಝಿ ಇದ್ದಾರೆ.ಬಿಗ್‌ಬಾಸ್ ಸೀಸನ್ 8 ರ ಬಗ್ಗೆ ಮಾತನಾಡುವ ಕಲರ್ ಕನ್ನಡ ಮುಖ್ಯಸ್ಥ ಪರಮೇಶ್ ಗುಂಡ್ಕಲ್, “ಕೋವಿಡ್ ನಿಂದಾಗಿ ಕಳೆದ ನಾಲ್ಕೈದು ತಿಂಗಳಿನಿಂದ ಎಲ್ಲಾ ಚಟುವಟಿಕೆಗಳು ಸ್ಥಗಿತ ಗೊಂಡಿದೆ. ಇದರ ಪರಿಣಾಮ ಬಿಗ್‌ಬಾಸ್ ಮೇಲೂ ಆಗಿದೆ. ಬಿಗ್‌ಬಾಸ್‌ಗೆ ಕೆಲವು ತಿಂಗಳ ಪೂರ್ವ ತಯಾರಿ ಬೇಕಾಗಿರೋದರಿಂದ ತಕ್ಷಣಕ್ಕೆ ಬಿಗ್‌ಬಾಸ್ ಶುರು ಮಾಡುವ ಯಾವ ಯೋಚನೆ ನಮ್ಮ ಮುಂದಿಲ್ಲ. ಹಾಗಂತ ಬಿಗ್‌ಬಾಸ್ ಸೀಸನ್ 8 ಸ್ಥಗಿತಗೊಂಡಿಲ್ಲ. ನಾಲ್ಕೈದು ತಿಂಗಳ ನಂತರ ಆರಂಭವಾಗಲಿದೆ’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Lacchi Kannada Movie: ಲಚ್ಚಿ ಚಿತ್ರಕ್ಕೆ ಪ್ರಶಸ್ತಿ ಗರಿ
Chowkidar Movie: ಶೂಟಿಂಗ್ ಮುಗಿಸಿದ ಚೌಕಿದಾರ್
KD Movie: ಪ್ರೇಮ್ ಕೆಡಿಗೆ ಅಜಯ್ ದೇವಗನ್ ಸಾಥ್; ಶಿವನ ಹಾಡಿಗೆ ಧ್ರುವ ಭರ್ಜರಿ ಸ್ಟೆಪ್ಸ್
Rajendra Babu: ನಟರಿಗೆ ಪ್ಯಾನ್ ಇಂಡಿಯಾ ಭೂತ ಹಿಡಿದಿದೆ: ಬಾಬು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.