ಕ್ರೇಜಿ ಬರ್ತ್‌ಡೇ
Team Udayavani, Jun 1, 2018, 11:05 AM IST
ಬುಧವಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಬೆಳಗ್ಗೆಯಿಂದಲೇ ತಮ್ಮ ನೆಚ್ಚಿನ ನಟನಿಗೆ ಶುಭಕೋರಲು ಅಭಿಮಾನಿಗಳು ರವಿಚಂದ್ರನ್ ಮನೆಮುಂದೆ ಸೇರಿದ್ದರು. ಜೊತೆಗೆ ರವಿಚಂದ್ರನ್ ಅವರ ಅಭಿಮಾನಿ ಸಂಘ ಖಾಸಗಿ ಹೋಟೆಲ್‌ವೊಂದರಲ್ಲಿ ಹುಟ್ಟುಹಬ್ಬ ಸಂಭ್ರಮವನ್ನು ಆಯೋಜಿಸಿತ್ತು.
ತಮ್ಮ ಕುಟುಂಬ ಸದಸ್ಯರೊಂದಿಗೆ ಹುಟ್ಟುಹಬ್ಬ ಆಚರಿಸಿದ ರವಿಚಂದ್ರನ್, ನಂತರ ಅಭಿಮಾನಿಗಳ ಆಯೋಜಿಸಿದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾದರು. ವಿವಿಧ ಶೈಲಿಯ ಕೇಕ್‌ಗಳನ್ನು ಮಾಡಿಸಿ ತಂದಿದ್ದ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು ರವಿಚಂದ್ರನ್.
ಮಕ್ಕಳಿಂದ ಸ್ಪೆಷಲ್ ಗಿಫ್ಟ್: ರವಿಚಂದ್ರನ್ ಅವರ ಹುಟ್ಟುಹಬ್ಬಕ್ಕೆ ಅವರ ಮಕ್ಕಳು ವಿಶೇಷವಾದ ಉಡುಗೊರೆ ನೀಡಿದ್ದಾರೆ. ರವಿಚಂದ್ರನ್ ಮಗಳು ತಂದೆಗೆ ಸನ್‌ಗ್ಲಾಸ್ ನೀಡಿದರೆ, ಪುತ್ರರಾದ ಮನೋರಂಜನ್ ಹಾಗೂ ವಿಕ್ರಮ್ ಸೇರಿ ವಿಶೇಷವಾಗಿ ವಿನ್ಯಾಸ ಮಾಡಿದ ಶರ್ಟ್‌ವೊಂದನ್ನು ಉಡುಗೊರೆಯಾಗಿ ನೀಡಿದರು. ಶರ್ಟ್‌ನಲ್ಲಿ “ಕ್ರೇಜಿಸ್ಟಾರ್’ ಎಂದು ಬರೆಯಲಾಗಿತ್ತು. ಮಕ್ಕಳು ಪ್ರೀತಿಯಿಂದ ನೀಡಿದ ಸನ್‌ಗ್ಲಾಸ್ ಹಾಗೂ ಶರ್ಟ್‌ನಲ್ಲೇ ರವಿಚಂದ್ರನ್ ಮಿಂಚಿದರು.
ಮಂಜಿನ ಹನಿ ಮುಗಿದ ಅಧ್ಯಾಯ: ರವಿಚಂದ್ರನ್ ಅವರು “ಮಂಜಿನ ಹನಿ’ ಎಂಬ ಸಿನಿಮಾ ಆರಂಭಿಸಿದ್ದು ನಿಮಗೆ ಗೊತ್ತೇ ಇದೆ. ಅದು ಅವರ ಡ್ರೀಮ್ ಪ್ರಾಜೆಕ್ಟ್ ಆಗಿತ್ತು. ಆದರೆ, ಕಾರಣಾಂತರಗಳಿಂದ ಆ ಸಿನಿಮಾವನ್ನು ನಿಲ್ಲಿಸಿ ಅವರು ಬೇರೆ ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಸಹಜವಾಗಿಯೇ ಅಭಿಮಾನಿಗಳಿಗೊಂದು ಕುತೂಹಲವಿದೆ. ಕ್ರೇಜಿಸ್ಟಾರ್ ಅವರ ಡ್ರೀಮ್ ಪ್ರಾಜೆಕ್ಟ್ “ಮಂಜಿನ ಹನಿ’ ಮುಂದುವರಿಯುತ್ತಾ ಎಂದು.
ಅದಕ್ಕೆ ತಮ್ಮ ಹುಟ್ಟುಹಬ್ಬ ದಿನ ಉತ್ತರಿಸಿದ್ದಾರೆ ರವಿಚಂದ್ರನ್. ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಮಂಜಿನ ಹನಿ’ ಮುಗಿದ ಅಧ್ಯಾಯ. ಈಗಾಗಲೇ ಆ ಸಿನಿಮಾಕ್ಕೆ ಎಂಟು ಕೋಟಿ ಖರ್ಚಾಗಿದೆ. ಮತ್ತೆ ಮಾಡಬೇಕೆಂದರೆ 20 ಕೋಟಿ ಬೇಕು. ಅಭಿಮಾನಿಗಳು ಸಿನಿಮಾ ನೋಡಿ ಗೆಲ್ಲಿಸಿ ಹಣ ವಾಪಾಸ್ ಕೊಟ್ಟರೆ ಮುಂದುವರಿಸಬಹುದು’ ಎಂದು ನಗುತ್ತಾ ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.