“ಡಿ 55′ ಯಾರಿಗೆ?
Team Udayavani, Feb 17, 2019, 5:28 AM IST
ದರ್ಶನ್ ಅವರ 55ನೇ ಸಿನಿಮಾವನ್ನು ತಾವು ನಿರ್ಮಿಸುವುದಾಗಿ “ಮೆಜೆಸ್ಟಿಕ್’ ಚಿತ್ರದ ನಿರ್ಮಾಪಕ ಎಂ.ಜಿ.ರಾಮಮೂರ್ತಿ ಹೇಳಿದ್ದರು. ಜೊತೆಗೆ ಹುಟ್ಟುಹಬ್ಬ ಪ್ರಯಕ್ತ “ಡಿ 55’ಜಾಹೀರಾತು ನೀಡಿ, ದರ್ಶನ್‌ಗೆ ಶುಭಕೋರಿದ್ದರು. ಇತ್ತ ಕಡೆ ಜೈ ಮಾತಾಸಿನಿಕ್ರಿಯೇಶನ್ಸ್ ಹಾಗೂ ಜೈಮಾತಾ ಕಂಬೈನ್ಸ್‌ನಡಿ ದುಷ್ಯಂತ್ ಹಾಗೂ ಪ್ರಕಾಶ್ ಜಯರಾಮ್ ಕೂಡಾ “ಡಿ 55′ ಎಂದು ಅನೌನ್ಸ್ ಮಾಡಿದ್ದಾರೆ.
ಈ ಮೂಲಕ ದರ್ಶನ್ ಅವರ 55ನೇ ಸಿನಿಮಾವನ್ನು ಯಾರು ಮಾಡುತ್ತಾರೆಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಈ ಕುರಿತು ಮಾತನಾಡುವ ನಿರ್ಮಾಪಕ ಎಂ.ಜಿ.ರಾಮಮೂರ್ತಿ, “ನಮಗೆ ದರ್ಶನ್ 55ನೇ ಸಿನಿಮಾ ಮಾಡಿ ಎಂದು ಹೇಳಿದ ನಂತರವೇ ನಾನು ಅನೌನ್ಸ್ ಮಾಡಿದ್ದು. ಆ ಕಡೆಯಿಂದ ಅವರು ಕೂಡಾ 55ನೇ ಸಿನಿಮಾ ಎಂದು ಅನೌನ್ಸ್ ಮಾಡಿದ್ದಾರೆ. ನೋಡುವ ಮುಂದೆ ಏನಾಗುತ್ತದೆ ಎಂದು’ ಎಂದಷ್ಟೇ ಹೇಳುತ್ತಾರೆ.
ಈ ಬಗ್ಗೆ ಮಾತನಾಡುವ ಪ್ರಕಾಶ್ ಜಯರಾಮ್, “ದರ್ಶನ್ ಅವರಿಗೆ ನಾವು ಸಿನಿಮಾ ಮಾಡುವುದು ಪಕ್ಕಾ. ಈ ಹಿಂದೊಮ್ಮೆ ಸ್ಕ್ರಿಪ್ಟ್ ಡಿಸ್ಕಶನ್ ವೇಳೆ ಅವರೇ “55′ ಮಾಡಿಕೊಳ್ಳಿ ಎಂದಿದ್ದರು. ಹಾಗಂತ ನಮಗೆ ಇಲ್ಲಿ ನಂಬರ್ ಮುಖ್ಯವಲ್ಲ. 55ನೇ ಸಿನಿಮಾವನ್ನು ಯಾರೇ ಮಾಡಿದರೂ ಬೇಸರವಿಲ್ಲ. ಒಂಚೂರು ಹಿಂದೆ-ಮುಂದೆ ಆಗಬಹುದಷ್ಟೇ. ದರ್ಶನ್‌ಗೆ ಸಿನಿಮಾ ಮಾಡೋದಂತೂ ಪಕ್ಕಾ. ಇದರಲ್ಲಿ ಬೇರೆ ಗೊಂದಲ, ವಿವಾದಗಳೇನಿಲ್ಲ’ ಎನ್ನುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.