ಡಿ-ಬಾಸ್‌ ಅಂದ್ರೆ ಅದು ದರ್ಶನ್‌: ನನಗೆ ಆಂಜನೇಯನೇ ಬಾಸ್‌


Team Udayavani, Oct 8, 2018, 11:29 AM IST

d-boss.jpg

ಕನ್ನಡ ಚಿತ್ರರಂಗದಲ್ಲಿ ಆಗಾಗ ಒಂದಷ್ಟು ಪ್ರಶ್ನೆಗಳು ಎದ್ದೇಳುತ್ತಲೇ ಇರುತ್ತವೆ. ಎಲ್ಲರಿಗೂ ಗೊತ್ತಿರುವಂತೆ, “ಬಾಸ್‌’ ಎಂಬ ಪದ ಸಾಕಷ್ಟು ಕಡೆ ಓಡಾಡಿದೆ. ಕನ್ನಡ ಚಿತ್ರರಂಗದಲ್ಲಿ ನಿಜವಾಗಿ “ಬಾಸ್‌’ ಅಂತ ಕರೆಯೋದು ಯಾರನ್ನ, ಹಾಗೆ ಕರೆಸಿಕೊಳ್ಳುವುದು ಯಾರು? ಇದು ಸಾಕಷ್ಟು ಗೊಂದಲ ಮೂಡಿಸಿರುವ ಪ್ರಶ್ನೆ. ಈ ಬಗ್ಗೆ ಯಾರೂ ಸಹ ಉತ್ತರಿಸಿಲ್ಲ. ಹಾಗೆಯೇ ನಾನೇ “ಬಾಸ್‌’ ಅಂತ ಯಾರೂ ಹೇಳಿಕೊಂಡಿಲ್ಲ.

ಆದರೆ, ನಟ ಧ್ರುವ ಸರ್ಜಾ ಮಾತ್ರ “ಬಾಸ್‌’ ಯಾರೆಂಬುದನ್ನು ನೇರವಾಗಿ ಸ್ಪಷ್ಟಪಡಿಸಿದ್ದಾರೆ. ಹೌದು, ಶನಿವಾರವಷ್ಟೇ ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಧ್ರುವ ಸರ್ಜಾ, “ನನಗೆ ಬಾಸ್‌ ಅಂದರೆ ಅದು ಆಂಜನೇಯ. ಅವರೊಬ್ಬರೇ ನನಗೆ “ಬಾಸ್‌’ ಎಂದು ಹೇಳಿದ್ದಾರೆ. ಅಷ್ಟಕ್ಕೂ ಧ್ರುವಸರ್ಜಾ ಹಾಗೆ ಹೇಳ್ಳೋಕೆ ಕಾರಣವೇನು ಗೊತ್ತಾ? ಹುಟ್ಟುಹಬ್ಬದ ವೇಳೆ ತಂದಿದ್ದ ಕೇಕ್‌ವೊಂದರ ಮೇಲೆ “ಡಿ- ಬಾಸ್‌’ ಎಂದು ಬರೆಯಲಾಗಿತ್ತು.

ಆ ಪದ ಎಲ್ಲರ ಗಮನ ಸೆಳೆದಿದ್ದು ನಿಜ. “ಡಿ- ಬಾಸ್‌’ ಎಂಬ ಬರಹ ನೋಡಿದ ಮಾಧ್ಯಮದವರು ಧ್ರುವ ಸರ್ಜಾ ಅವರನ್ನು “ನೀವು ಮುಂದಿನ ದರ್ಶನ್‌ ಅಂತೆ ಹೌದಾ..? ಎಂದು ಪ್ರಶ್ನಿಸಿದ್ದಾರೆ. ಆ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಧ್ರುವಸರ್ಜಾ, “ದರ್ಶನ್‌ ಸರ್‌ ಹಿರಿಯ ನಟರು. ಅವರ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ. ಅವರ ಅಭಿಮಾನಿಗಳಲ್ಲಿ ನಾನೂ ಒಬ್ಬ ಅಷ್ಟೇ.  “ಡಿ-ಬಾಸ್‌’ ಅಂದರೆ ಅದು ದರ್ಶನ್‌ ಅವರೊಬ್ಬರೇ.

ನನಗೆ “ಬಾಸ್‌’ ಅಂದರೆ ಆಂಜನೇಯ. ಬಾಸ್‌, ಗೀಸ್‌ ಎಲ್ಲಾ ನನಗೆ ಇಷ್ಟ ಇಲ್ಲ. ನಾನಿನ್ನೂ ಸಾಧಿಸಬೇಕಿರುವುದು ಸಾಕಷ್ಟು ಇದೆ’ ಎನ್ನುವ ಮೂಲಕ ದರ್ಶನ್‌ ಅವರೇ “ಡಿ-ಬಾಸ್‌’. ಅವರು ನಮ್ಮೊಂದಿಗೆ ಚೆನ್ನಾಗಿದ್ದಾರೆ. ಸದಾ ಬೆಂಬಲವಾಗಿರುತ್ತಾರೆ ಎಂಬುದನ್ನು ಹೇಳಿಕೊಂಡಿದ್ದಾರೆ ಧ್ರುವ ಸರ್ಜಾ. ಅದೇನೆ ಇರಲಿ, ದರ್ಶನ್‌ ಜೊತೆಯಲ್ಲಿ ಆಗಾಗ ಧ್ರುವ ಸರ್ಜಾ ಅವರು ಕಾಣಿಸಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತು.

ಧ್ರುವಸರ್ಜಾ ಅವರ ಕೆಲ ಸಿನಿಮಾಗಳಿಗೆ ದರ್ಶನ್‌ ಪ್ರೋತ್ಸಾಹಿಸಿರುವುದು ನಿಜ. ಈಗಾಗಲೇ “ಯಜಮಾನ’ ಚಿತ್ರದ ಟೈಟಲ್‌ ಟೀಸರ್‌ಗೆ ಧ್ರುವ ಸರ್ಜಾ ಹಿನ್ನೆಲೆ ಧ್ವನಿ ನೀಡಿರುವುದು ಗೊತ್ತೇ ಇದೆ. ಹಾಗಾಗಿ, ದರ್ಶನ್‌ ಜೊತೆಗಿನ ಗೆಳೆತನವನ್ನು ತುಂಬಾನೇ ಹೆಮ್ಮೆಯಿಂದ ಹೇಳಿಕೊಳ್ಳುವ ಧ್ರುವ “ಡಿ-ಬಾಸ್‌’ ಎಂಬುದೆಲ್ಲವನ್ನು ತಳ್ಳಿಹಾಕುತ್ತಾರೆ. ಅದೆಲ್ಲವೂ ಅಭಿಮಾನಿಗಳ ಪ್ರೀತಿ.

ಈ ಪ್ರೀತಿ ಹೀಗೆ ಇರಬೇಕೆನ್ನುವ ಧ್ರುವಸರ್ಜಾ, ಸದ್ಯಕ್ಕೆ “ಪೊಗರು’ ಚಿತ್ರದ ಜಪ ಮಾಡುತ್ತಿದ್ದಾರೆ. ಆ ಚಿತ್ರದ ಟೀಸರ್‌ ಕೂಡ ಜಬರ್‌ದಸ್ತ್ ಆಗಿದೆ. ಪಕ್ಕಾ ಖಡಕ್‌ ಭಾಷೆಯಲ್ಲೇ ಡೈಲಾಗ್‌ ಹರಿಬಿಟ್ಟಿರುವ ಧ್ರುವಸರ್ಜಾ, ಅಭಿಮಾನಿಗಳಲ್ಲಿ ಇನ್ನೊಂದು ನಿರೀಕ್ಷೆ ಹುಟ್ಟಿಸಿರುವುದಂತೂ ಸುಳ್ಳಲ್ಲ. “ಎದೆಗಟ್ಟಿಗೈತೆ ಅಂತ ಟಚ್‌ ಮಾಡೋಕೆ ಹೋಗ್‌ಬೇಡ, ನನ್ನ ಮೈಯಾಗೆ ಎಷ್ಟ್ ಪೊಗರೈತೆ ಅಂತ ಚೆಕ್‌ ಮಾಡೋಕ್ಕೋಗ್‌ಬೇಡ, ಶೇಕ್‌ ಆಗಿಹೋಗ್ತಿಯ…’ ಎಂಬ ಮಾಸ್‌ ಡೈಲಾಗ್‌ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.
 

ಟಾಪ್ ನ್ಯೂಸ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kiran raj’s Megha movie

‌Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್‌ ರಾಜ್

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.