Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
Team Udayavani, Nov 17, 2024, 3:40 PM IST
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ (Daali Dhananjay) ವಿವಾಹ ಸಂಭ್ರಮದ ಶಾಸ್ತ್ರಗಳು ಆರಂಭಗೊಂಡಿದೆ. ವೈದ್ಯೆ ಧನ್ಯತಾ (Dhanyata) ಜತೆ ನಿಶ್ಚಿತಾರ್ಥ ಕಾರ್ಯಕ್ರಮ ಭಾನುವಾರ (ನ.17ರಂದು) ನೆರವೇರಿದೆ.
ಅರಸಿಕೆರೆ ತಾಲೂಕು ಕಾಳೇನಹಳ್ಳಿಯಲ್ಲಿರುವ ಧನಂಜಯ್ ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ. ಧನ್ಯತಾ ಅವರಿಗೆ ಉಂಗುರ ತೊಡಿಸಿದ್ದಾರೆ. ಈ ವೇಳೆ ಎರಡೂ ಕುಟುಂಬದ ಆಪ್ತರು ಉಪಸ್ಥಿತಿಯಲ್ಲಿದ್ದರು.
ಲಗ್ನ ಪತ್ರಿಕೆ ಬರೆಸುವ ಶಾಸ್ತ್ರ ಹಿರಿಯರು, ಸ್ನೇಹಿತರ ಸಮ್ಮುಖದಲ್ಲಿ ನೆರವೇರಿದೆ. ಇದೇ ವೇಳೆ ಮದುವೆಯ ದಿನಾಂಕವನ್ನು ನಿಗದಿ ಮಾಡಿಲಾಗಿದೆ.
ಅದರಂತೆ ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ಮದುವೆ ನೆರವೇರಲಿದೆ. ಅದೇ ದಿನ ಸಂಜೆ ಆರತಕ್ಷತೆ ಕಾರ್ಯಕ್ರಮ ಕೂಡ ನಡೆಯಲಿದೆ ಎನ್ನಲಾಗಿದೆ.
ಡಾಲಿ ಅವರ ನಿಶ್ಚಿಯಾರ್ಥ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ನಡ ಸೇರಿದಂತೆ ತೆಲುಗು ಸಿನಿಮಾಗಳಲ್ಲೂ ಡಾಲಿ ಧನಂಜಯ್ ಅವರು ಮಿಂಚುತ್ತಿದ್ದಾರೆ. ನಟ, ನಿರ್ಮಾಪಕ, ಗೀತ ರಚನಕಾರರಾಗಿ ಡಾಲಿ ಸಿನಿಮಾರಂದಲ್ಲಿ ಗುರುತಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.