ಜನವರಿಯಲ್ಲಿ ದಂಡುಪಾಳ್ಯ-3
Team Udayavani, Dec 27, 2017, 11:01 AM IST
“ದಂಡುಪಾಳ್ಯ 2′ ಚಿತ್ರ ಬಿಡುಗಡೆಯಾಗಿ ಕೆಲವೇ ದಿನಗಳ ಅಂತರದಲ್ಲಿ “ದಂಡುಪಾಳ್ಯ 3′ ಚಿತ್ರವನ್ನು ಸಹ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಶ್ರೀನಿವಾಸ್ ರಾಜು ಹೇಳಿಕೊಂಡಿದ್ದರು. ಆದರೆ, ಚಿತ್ರ ಬಿಡುಗಡೆಯಾಗಿ ಹಲವಾರು ವಿವಾದಗಳೆದ್ದು, ಅದೆಲ್ಲಾ ತಣ್ಣಗಾಗುವುದಕ್ಕೆ ಸ್ವಲ್ಪ ಸಮಯವಾಯಿತು. ಇದೆಲ್ಲದರಿಂದ ತಡವಾದ “ದಂಡುಪಾಳ್ಯ 3′ ಬಿಡುಗಡೆಗೆ ಸಜ್ಜಾಗಿದೆ.
ಬಹುಶಃ ಮುಂದಿನ ವರ್ಷದ ಆರಂಭದಲ್ಲಿ, ಅಂದರೆ ಜನವರಿಯಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಮೊದಲ ಹಂತವಾಗಿ ಇದೀಗ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಹಿಂದಿನ ಎರಡು ಭಾಗಗಳಂತೆ, ಈ ಚಿತ್ರ ಸಹ ವಿಚಿತ್ರ ಮತ್ತು ವಿಕ್ಷಿಪ್ತವಾಗಿ ಕಂಡರೆ ಆಶ್ಚರ್ಯವಿಲ್ಲ. ಈ ಹಿಂದಿನ ಚಿತ್ರಗಳಲ್ಲಿ ನಟಿಸಿದ ಕಲಾವಿದರೇ ಇಲ್ಲೂ ಮುಂದುವರೆದಿದ್ದು, ಚಿತ್ರದಲ್ಲಿ ಪೂಜಾ ಗಾಂಧಿ,
ರವಿಶಂಕರ್, ಮಕರಂದ್ ದೇಶಪಾಂಡೆ, ರವಿ ಕಾಳೆ, ಶ್ರುತಿ, ಮುನಿ, ಪೆಟ್ರೋಲ್ ಪ್ರಸನ್ನ, ಜಯದೇವ್, ಸಂಜನಾ, ಕರಿಸುಬ್ಬು, ಡ್ಯಾನಿ ಕುಟ್ಟಪ್ಪ ಮುಂತಾದವರು ಅಭಿನಯಿಸಿದ್ದಾರೆ. ವೆಂಕಟ್ ಪ್ರಸಾದ್ ಅವರು ಈ ಭಾಗದ ಛಾಯಾಗ್ರಹಣ ಮಾಡಿದರೆ, ಅರ್ಜುನ್ ಜನ್ಯ ಅವರ ಸಂಗೀತವಿದೆ. ಇನ್ನು ಸಿ. ರವಿಚಂದ್ರನ್ ಅವರ ಸಂಕಲನ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.