ಡಾ.ರಾಜ್ ಬರ್ತ್‌ಡೇಗೆ ಚಲನಚಿತ್ರ ಪ್ರಶಸ್ತಿ ಪ್ರದಾನ: ಪ್ರತಿಕ್ರಿಯೆಗಳು
Team Udayavani, Apr 12, 2017, 11:45 AM IST
2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಮಂಗಳವಾರ ಅಧಿಕೃತವಾಗಿ ಘೋಷಿಸಲಾಗಿದೆ. ಪ್ರಶಸ್ತಿಯೇನೋ ಘೋಷಿಸಲಾಗಿದೆ, ಪ್ರಶಸ್ತಿ ಪ್ರದಾನ ಸಮಾರಂಭ ಯಾವಾಗ ಎಂಬ ಪ್ರಶ್ನೆ ಬರುವುದು ಸಹಜ. ಈ ಬಾರಿಯಿಂದ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಡಾ. ರಾಜಕುಮಾರ್ ಅವರ ಹುಟ್ಟುಹಬ್ಬವಾದ ಏಪ್ರಿಲ್ 24ರಂದು ನೀಡಬೇಕೆಂದು ಕಳೆದ ವರ್ಷವೇ ತೀರ್ಮಾನಿಸಲಾಗಿತ್ತು. ಅದರಂತೆ, ಈ ಏಪ್ರಿಲ್ 24ಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರದಾನವಾಗಲಿದೆ.
ಕವಿತಾ ಲಂಕೇಶ್ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿಯು 25 ಅರ್ಹ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರಗಳನ್ನು ಮಾತ್ರ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇನ್ನು ಮೂರು ಮಹತ್ವದ ಪ್ರಶಸ್ತಿಗಳಾದ ಡಾ. ರಾಜಕುಮಾರ್ ಪ್ರಶಸ್ತಿ, ಡಾ. ವಿಷ್ಣುವರ್ಧನ್ ಪ್ರಶಸ್ತಿ ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವುದಕ್ಕೆ ಇನ್ನೊಂದು ಪ್ರತ್ಯೇಕ ಸಮಿತಿ ಆಯ್ಕೆ ಮಾಡಲಿದೆ. ಈಗಾಗಲೇ ಇದಕ್ಕಾಗಿ ಪ್ರತ್ಯೇಕ ಸಮಿತಿಯೊಂದನ್ನು ರಚಿಸಲಾಗಿದ್ದು, ಆ ಆಯ್ಕೆ ಸಮಿತಿಯು ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಿದೆ.
ಪಟ್ಟಿ ಬಿಡುಗಡೆ
2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ಸಮಿತಿಯ ಅಧ್ಯಕ್ಷೆ ಕವಿತಾ ಲಂಕೇಶ್ ಅವರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್, ರೇಖಾ ರಾವ್, ನಿರ್ದೇಶಕ ಹ.ಸೂ.ರಾಜಶೇಖರ್, ಛಾಯಾಗ್ರಾಹಕ ಬಸವರಾಜ ಉಪಸ್ಥಿತರಿದ್ದರು.
ಪ್ರಶಸ್ತಿ ಆಯ್ಕೆ ನಂತರ ಕವಿತಾ ಲಂಕೇಶ್ ಹೇಳಿದ್ದು
* ಸಾಮಾನ್ಯವಾಗಿ ಚಲನಚಿತ್ರ ಪ್ರಶಸ್ತಿಗೆ 60-70 ಚಿತ್ರಗಳು ಬರುತ್ತಿದ್ದವು. ಈ ಬಾರಿ ಒಟ್ಟು 126 ಚಿತ್ರಗಳು ಬಂದಿದ್ದು, ಈ ಪೈಕಿ 124 ಚಿತ್ರಗಳನ್ನು ವೀಕ್ಷಿಸಿ ಆಯ್ಕೆ ಮಾಡಲಾಗಿದೆ.
*ಅತ್ಯುತ್ತಮ ಚಿತ್ರಗಳಿಗೆ 9 ಚಿತ್ರಗಳ ಸ್ಪರ್ಧೆ ಇತ್ತು. ಇಡೀ ಆಯ್ಕೆ ಪ್ರಕ್ರಿಯೆಯಲ್ಲಿ ಚಿತ್ರಗಳ ನಡುವೆ ತೀವ್ರ ಸ್ಪರ್ಧೆ ಇತ್ತು.
* ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರಕ್ಕೆ 42 ಚಿತ್ರಗಳು, ಮಕ್ಕಳ ಚಿತ್ರಕ್ಕೆ 19 ಚಿತ್ರಗಳು ಬಂದಿದ್ದವು. ಅತ್ಯುತ್ತಮ ಪ್ರಾದೇಶಿಕ ಸಿನಿಮಾಕ್ಕೆ 9 ಚಿತ್ರಗಳು ಬಂದಿದ್ದವು.
* “ಕಿರಿಕ್ ಪಾರ್ಟಿ’ ರಿಮೇಕ್ ಚಿತ್ರವಲ್ಲ. ಈ ಬಗ್ಗೆ ಪರಿಶೀಲಿಸಿಯೇ ಆಯ್ಕೆ ಮಾಡಲಾಗಿದೆ. ಇತರೆ ಚಿತ್ರಗಳ ಕೆಲವೊಂದು ಅಂಶಗಳು ಅದರಲ್ಲಿ ಇತ್ತು ಅಷ್ಟೆ.
* ಹಲವು ಅತ್ಯುತ್ತಮ ಗುಣಮಟ್ಟದ ಚಿತ್ರ ಮತ್ತು ಅತಿ ಕಳಪೆ ಗುಣಮಟ್ಟದ ಚಿತ್ರಗಳೂ ಇದ್ದವು. ಕೆಲವು ನಿರ್ದೇಶಕರು ಮೊದಲ ಬಾರಿಗೆ ಚಿತ್ರ ನಿರ್ದೇಶನ ಮಾಡಿದ ಚಿತ್ರಗಳನ್ನು ಗಮನಿಸಿದಾಗ ಹೊಸ ಅಲೆಯ ಸಿನಿಮಾಗಳು ಬಂದಿವೆ ಎಂಬುದು ಸ್ಪಷ್ಟವಾಗುತ್ತದೆ. ಜತೆಗೆ ರಿಲೀಸ್ ಆಗದ, ಯಾವುದೇ ಸಂದೇಶ ಇಲ್ಲದ, ಕೇವಲ ಸಬ್ಸಿಡಿಗಾಗಿ ಮಾಡುವ ಸಿನಿಮಾಗಳೂ ಬಂದಿದ್ದವು. ದಿನಕ್ಕೆ 4-5 ಸಿನಿಮಾಗಳನ್ನು ನೋಡಿ ಆಯ್ಕೆ ಮಾಡಿದ್ದೆವು.
* ಇನ್ನು ಮುಂದೆ ಮಕ್ಕಳ ಸಿನಿಮಾ ಆಯ್ಕೆ ಮಾಡುವಾಗ ಅದನ್ನು ವೀಕ್ಷಿಸಲು ಕೆಲವು ಮಕ್ಕಳನ್ನೂ ಸೇರಿಸಿಕೊಳ್ಳುವುದು ಸೂಕ್ತ ಎಂಬ ಸಲಹೆಯನ್ನು ಸರ್ಕಾರಕ್ಕೆ ನೀಡುತ್ತೇನೆ.
ಏನ್ರೀ ಇದು ಹೆಸರುಗಳು ಹಿಂಗಾಗಿºಟ್ಟಿದ್ದಾವೆ…!
* ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರಕ್ಕೆ ಆಯ್ಕೆಯಾದ ರಾಮ ರಾಮಾ ರೇ ಚಿತ್ರದ ಹೆಸರು ಹೇಳುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ.
* ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ-ನಟಿಯರ ಹೆಸರುಗಳನ್ನು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ “ರಾಮ ರಾಮಾ ರೇ’ ಚಿತ್ರದ ಹೆಸರು ಹೇಳುವಾಗ ಸ್ವಲ್ಪ ಗೊಂದಲವಾಯಿತು. ಅದಕ್ಕೆ ಅವರು, “ಏನ್ರೀ ಇದು ಹೆಸರುಗಳು ಹಿಂಗಾಗಿºಟ್ಟಿದ್ದಾವೆ’ ಎಂದು ಹೇಳಿದಾಗ ಜತೆಗಿದ್ದ ಸಿನಿಮಾ ಆಯ್ಕೆ ಸಮಿತಿ ಸದಸ್ಯರು ಜೋರಾಗಿ ನಕ್ಕರು.
ಡಬ್ಬಿಂಗ್ ನೀತಿ ರೂಪಿಸುವ ಉದ್ದೇಶವಿಲ್ಲ
* ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ನೀಡದಂತೆ ಪ್ರಸ್ತಾವನೆ ಬಂದರೆ ಅದನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
* 2016ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಡಬ್ಬಿಂಗ್ ನೀತಿ ಇಲ್ಲ. ಸದಸ್ಯಕ್ಕೆ ಅಂತಹ ನೀತಿ ರೂಪಿಸುವ ಉದ್ದೇಶವೂ ಇಲ್ಲ ಎಂದು ಹೇಳಿದರು.
* ಇತ್ತೀಚೆಗೆ ಡಬ್ಬಿಂಗ್ ಚಿತ್ರಗಳು ಬರುತ್ತಿರುವ ಬಗ್ಗೆ ಮತ್ತು ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿ ರುವ ಬಗ್ಗೆ ಕೇಳಿದಾಗ, “ಡಬ್ಬಿಂಗ್ ಚಿತ್ರಗಳನ್ನು ನಿಷೇಧಿಸಬೇಕು ಎಂಬ ಬಗ್ಗೆ ಪ್ರಸ್ತಾವನೆ ಬಂದರೆ ಅದನ್ನು ಪರಿಶೀಲಿಸಿ ಕಾನೂನು ಪ್ರಕಾರ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
* ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾಗಳಿಗೆ 200 ರೂ ದರ ನಿಗದಿಪಡಿಸಿ ಬಜೆಟ್‌ನಲ್ಲಿ ಘೋಷಿಸಿದ್ದರೂ ಅದು ಕಾರ್ಯರೂಪಕ್ಕೆ ಬಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಬಜೆಟ್‌ನಲ್ಲಿ ಮಾಡಿರುವ ಘೋಷಣೆ ಕಾರ್ಯರೂಪಕ್ಕೆ ಬರಲೇ ಬೇಕಾಗುತ್ತದೆ. ಸದ್ಯದಲ್ಲೇ ಈ ಕುರಿತು ಆದೇಶ ಹೊರಡಿಸಲಾಗುವುದು. ನಂತರ ನಿಯಮ ಉಲ್ಲಂ ಸಿದರೆ ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಬಹಳ ಸಂತೋಷವಾಗಿದೆ
ಪ್ರಶಸ್ತಿ ಬಂದಿರುವುದಕ್ಕೆ ಬಹಳ ಸಂತೋಷವಾಗಿದೆ. ಆದರೆ ಸಿನಿಮಾದ ವಿಷಯ ಬಹಳ ದುಃಖಕರವಾದದ್ದು. ಪೌರಕಾರ್ಮಿಕರ ಸಮಸ್ಯೆ ಬಗೆಹರಿಯುತ್ತಲೇ ಇಲ್ಲ. ಬಹಳ ವರ್ಷಗಳಿಂದ ಅವರ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಆದರೆ ಅದನ್ನು ಬಗೆಹರಿಸುವ ಮನಸ್ಥಿತಿ ಯಾರಿಗೂ ಇಲ್ಲವೆನ್ನುವುದು ಬೇಸರದ ಸಂಗತಿ. ಈ ಚಿತ್ರಕ್ಕೆ ಪ್ರಶಸ್ತಿ ಬಂದಿರುವುದರ ಜೊತೆಗೆ, ನನಗೂ ಪ್ರಶಸ್ತಿ ಬಂದಿರುವುದು ಬಹಳ ಸಂತೋಷವಾಗಿದೆ.
– ಅಚ್ಯುತ್ ಕುಮಾರ್, ಅತ್ಯುತ್ತಮ ನಟ ಪ್ರಶಸ್ತಿ ವಿಜೇತ
ಮೊದಲ ಪ್ರಶಸ್ತಿ ಖುಷಿ ಹೆಚ್ಚಿಸಿದೆ
ನನ್ನ ಲೈಫಲ್ಲಿ ಸಿಕ್ಕ ಮೊದಲ ರಾಜ್ಯ ಪ್ರಶಸ್ತಿ ಇದು. “ಬ್ಯೂಟಿಫುಲ್ ಮನಸುಗಳು’ ಚಿತ್ರತಂಡಕ್ಕೆ ನಾನು ಈ ಪ್ರಶಸ್ತಿ ಅರ್ಪಿಸುತ್ತೇನೆ. ನಾನು ಈ ಪ್ರಶಸ್ತಿ ನಿರೀಕ್ಷೆ ಮಾಡಿರಲಿಲ್ಲ. ಈಗ ಇನ್ನಷ್ಟು ಎಚ್ಚರವಹಿಸಿ ಕೆಲಸ ಮಾಡಬೇಕಿದೆ. ಇನ್ನು ಮುಂದಕ್ಕೂ ಒಳ್ಳೆಯ ಸಿನಿಮಾ ಮಾಡುವ ಜವಾಬ್ದಾರಿ ಹೆಚ್ಚಿದೆ. ಚಿತ್ರದ ಪಾತ್ರ ನನ್ನಲ್ಲಿ ಹೊಸ ಬದಲಾವಣೆಯನ್ನೂ ಮಾಡಿದ್ದುಂಟು. ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಿದ್ದರ ಫಲ ಇದು.
– ಶ್ರುತಿ ಹರಿಹರನ್, ಅತ್ಯುತ್ತಮ ನಟಿ ಪ್ರಶಸ್ತಿ ವಿಜೇತೆ
ಹ್ಯಾಟ್ರಿಕ್ ಪ್ರಶಸ್ತಿ ಖುಷಿ ಕೊಟ್ಟಿದೆ
ನಿಜವಾಗಿಯೂ ನನಗೆ ಡಬ್ಬಲ್ ಖುಷಿಯಾಗಿದೆ. ಒಂದು ಆಸೆ ಇತ್ತು. ಅಚ್ಯುತ್‌ಕುಮಾರ್ ಅವರು ರಾಜ್ಯ ಪ್ರಶಸ್ತಿಯನ್ನು ಪಡೆದುಕೊಳ್ಳುವುದನ್ನು ನೋಡಬೇಕೆಂಬುದು. ಅದರಲ್ಲೂ ನನ್ನ ಸಿನಿಮಾಗೆ ಆ ಪ್ರಶಸ್ತಿ ಪಡೆಯಬೇಕು ಎಂಬ ಸಣ್ಣ ಸ್ವಾರ್ಥವೂ ಇತ್ತು. ಅದು ನಮ್ಮ ಚಿತ್ರಕ್ಕೇ ಅವರಿಗೆ ಸಿಕ್ಕಿದ್ದು ಒಂದು ಖುಷಿಯಾದರೆ, ಮೊದಲ ಅತ್ಯುತ್ತಮ ಚಿತ್ರ ಹಾಗೂ ಸಂಭಾಷಣೆಗೂ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ. ರಾಜ್ಯ ಪ್ರಶಸ್ತಿ ಎಂಬುದು ನಮ್ಮಂತವರಿಗೆ ದೊಡ್ಡದು. ಹ್ಯಾಟ್ರಿಕ್ ಅವಾರ್ಡ್ ಪಡೆದಿದ್ದು ಇನ್ನೊಂದು ಹೆಮ್ಮೆ. ಆಯ್ಕೆ ಮಾಡಿದ ಜ್ಯೂರಿಗೆ ಧನ್ಯವಾದ ಹೇಳುತ್ತೇನೆ.
– ಗಿರಿರಾಜ್, ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ವಿಜೇತ
ಶ್ರಮಕ್ಕೆ ಸಿಕ್ಕ ಫಲ
ಎಲ್ಲರ ಸಹಕಾರದಿಂದ ಕಷ್ಟಪಟ್ಟಿದ್ದಕ್ಕೂ ಈಗ ಸಾರ್ಥಕ ಎನಿಸುತ್ತಿದೆ. ರಾಜ್ಯ ಪ್ರಶಸ್ತಿ ಸಿಗುತ್ತೆ ಎಂದು ಭಾವಿಸಿರಲಿಲ್ಲ. ನಮ್ಮ ಪ್ರತಿಭೆ ಗುರುತಿಸಿ, ಪ್ರಶಸ್ತಿ ಕೊಡಲಾಗಿದೆ. ಈ ಪ್ರಶಸ್ತಿಯನ್ನು ಇಡೀ ಟೀಮ್‌ಗೆ ಅರ್ಪಿಸುತ್ತೇನೆ. ಪ್ರತಿಯೊಬ್ಬರ ಶ್ರಮ ಚಿತ್ರಕ್ಕೆ ಇತ್ತು. ಎಲ್ಲೋ ಒಂದು ಕಡೆ ನಂಬಿಕೆ ಇತ್ತು. ಅದೀಗ ನಿಜವಾಗಿದೆ.
– ಸತ್ಯಪ್ರಕಾಶ್, ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ ವಿಜೇತ
ವಿಶ್ವಾಸವಿತ್ತು, ರಾಜ್ಯ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ
ನಿಜಕ್ಕೂ ಸಂತೋಷದ ಸುದ್ದಿ ಇದು. ನನಗೆ ಬಂದ ಮೊದಲ ಪ್ರಶಸ್ತಿ ಇದು. “ಮುಂಗಾರು ಮಳೆ-2′ ಚಿತ್ರಕ್ಕೆ ಬರುತ್ತೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಒಳ್ಳೆಯ ಎಫರ್ಟ್ ಹಾಕಿದ್ದಕ್ಕೆ ಸಿಕ್ಕ ಫಲವಿದು. ಸಿನಿಮಾದಲ್ಲಿ ಕೆಲಸ ಮಾಡುವಾಗ ಎಲ್ಲರೂ ಖುಷಿಪಟ್ಟಿದ್ದರು. ಆದರೆ, ಪ್ರಶಸ್ತಿ ಹುಡುಕಿ ಬರುತ್ತೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ, ಈ ಸಿನಿಮಾ ಮೂಲಕ ಒಳ್ಳೆಯ ಹೆಸರು ಸಿಗುತ್ತೆ ಎಂಬ ವಿಶ್ವಾಸವಿತ್ತು. ಆದರೆ, ರಾಜ್ಯ ಪ್ರಶಸ್ತಿ ಸಿಗುತ್ತೆ ಅಂದುಕೊಂಡಿರಲಿಲ್ಲ ಈಗ ಜವಾಬ್ದಾರಿ ಡಬ್ಬಲ್ ಆಗಿದೆ.
– ಶೇಖರ್ ಚಂದ್ರ, ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ವಿಜೇತ
ಒಳ್ಳೇ ಪ್ರಯತ್ನಕ್ಕೆ ಸಿಕ್ಕ ಪ್ರಶಸ್ತಿ
“ರೈಲ್ವೆ ಚಿಲ್ಡ್ರನ್’ ಸಿನಿಮಾಗೆ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿರುವುದು ನಿಜವಾಗಿಯೂ ಖುಷಿ ಕೊಟ್ಟಿದೆ. ಇದು ಕ್ರೌಡ್ ಫಂಡಿಂಗ್ ಸಿನಿಮಾ. ಮನೆಬಿಟ್ಟ ಮತ್ತು ಅನಾಥ ಹುಡುಗರು ರೈಲ್ವೆ ಫ್ಲಾಟ್‌ಫಾರಂನಲ್ಲಿ ಬದುಕು ನಡೆಸುವ ಕುರಿತ ಕಥೆ ಇದು. ಅವರ ಬದುಕು, ಬವಣೆ ಮೇಲೆ ಮಾಡಿದ ಸಿನಿಮಾ ಇದಾಗಿದೆ. ಈ ಚಿತ್ರದ ನಟನೆಗೆ ಬಾಲನಟ ಮನೋಹರ್‌ಗೂ ಅತ್ಯುತ್ತಮ ಬಾಲನಟ ಪ್ರಶಸ್ತಿ ದೊರಕಿರುವುದು ಮತ್ತಷ್ಟು ಖುಷಿ ಕೊಟ್ಟಿದೆ.
– ಪೃಥ್ವಿ ಕೊಣನೂರು, ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ವಿಜೇತ
ರಾಜ್ಯ, ರಾಷ್ಟ್ರ ಎರಡೂ ಪ್ರಶಸ್ತಿ ಸಿಕ್ಕಿದೆ
“ರೈಲ್ವೇ ಚಿಲ್ಡ್ರನ್’ ಇದು ನನ್ನ ಮೊದಲ ಅಭಿನಯದ ಚಿತ್ರ. ನಿರ್ದೇಶಕ ಪೃಥ್ವಿ ಸರ್‌ಗೆ ಥ್ಯಾಂಕ್ಸ್ ಹೇಳ್ತೀನಿ. ನನಗೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿದೆ. ಈಗ ರಾಜ್ಯ ಪ್ರಶಸ್ತಿಯೂ ಬಂದಿದೆ. ಈ ವಿಷಯ ಕೇಳಿ ಸಂತಸವಾಗಿದೆ. ನಾನು ಸರ್ಕಾರಿ ಶಾಲೆಯಲ್ಲಿ ಒಂಭತ್ತನೆ ತರಗತಿ ಓದುವಾಗ, ಈ ಸಿನಿಮಾದಲ್ಲಿ ನಟಿಸುವ ಅವಕಾಶಬಂದಿತ್ತು. ಬೆಂಗಳೂರಿನ ಡಾನ್ ಬಾಸ್ಕೋದಲ್ಲಿ ನಿರ್ದೇಶಕರು ವರ್ಕ್‌ಶಾಪ್ ಮಾಡಿಸಿ ನಟನೆ ಹೇಳಿಕೊಟ್ಟಿದ್ದರು. ಈಗ ಪ್ರಶಸ್ತಿ ಸಿಕ್ಕಿರುವುದಕ್ಕೆ ನಿಜಕ್ಕೂ ಖುಷಿಯಾಗುತ್ತಿದೆ.
– ಮನೋಹರ, ಬಾಲನಟ ಪ್ರಶಸ್ತಿ ವಿಜೇತ
ಅಪರೂಪ ಪ್ರಯತ್ನದ ಫಲ
“ಒಂದು ಒಳ್ಳೆಯ ಸದಭಿರುಚಿಯ ಸಿನಿಮಾಗೆ ಸಿಕ್ಕ ಪ್ರಶಸ್ತಿ ಇದು. ಸಮಾಜಕ್ಕೆ ಸಂದೇಶ ಇರುವ ಸಿನಿಮಾ ಕೊಡಬೇಕೆಂಬ ಆಸೆ ಇತ್ತು. ಅನಿಷ್ಟ ಪದ್ಧತಿ ವಿರುದ್ಧ ದನಿ ಎತ್ತುವ ಮಹಿಳೆಯರ ಕುರಿತ ಕಥೆ ಇದು. ಸುಧಾರಾಣಿ ಇಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ನನ್ನ ಪಾಲಿಗೆ ಇದೊಂದು ಅಪರೂಪದ ಸಿನಿಮಾ. ಒಳ್ಳೆಯ ಪ್ರಯತ್ನವಾಗಿತ್ತು. ಗುರುತಿಸಿ, ಪ್ರಶಸ್ತಿ ಕೊಡಲಾಗಿದೆ. ಪ್ರಶಸ್ತಿಗೆ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.
– ಕೆ. ಶಿವರುದ್ರಯ್ಯ, ವಿಶೇಷ ಸಮಾಜಿ ಕಾಳಜಿಯ ಚಿತ್ರ ಪ್ರಶಸ್ತಿ ವಿಜೇತ
ನಿರ್ಮಾಪಕರಿಗೆ ಅರ್ಪಣೆ
ಇದು ನಮ್ಮ ಸಿನಿಮಾಕ್ಕೆ ಸಿಗುತ್ತಿರುವ ಎರಡನೇ ಪ್ರಶಸ್ತಿ. ಈ ಪ್ರಶಸ್ತಿಯನ್ನು ನಮ್ಮ ನಿರ್ಮಾಪಕರಿಗೆ ಅರ್ಪಿಸುತ್ತಿದ್ದೇನೆ. ಏಕೆಂದರೆ ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ. ಈ ಸಿನಿಮಾದಿಂದ ಹಣ ಬರಬೇಕೆಂಬ ಯಾವ ಆಕಾಂಕ್ಷೆಯೂ ಇಲ್ಲದೇ ಹೊಸಬರನ್ನು ಪ್ರೋತ್ಸಾಹಿಸಿದ್ದಾರೆ. ಹಾಗಾಗಿ ಅವರಿಗೆ ಅರ್ಪಿಸುತ್ತೇನೆ. ತುಳು ಚಿತ್ರಗಳನ್ನು ಪ್ರೋತ್ಸಾಹಿಸುತ್ತಿರೋದು ಖುಷಿಯ ವಿಚಾರ. ಈ ತರಹದ ಪ್ರಶಸ್ತಿಗಳು ತುಳುನಾಡಿನ ಹೊಸ ನಿರ್ದೇಶಕರಿಗೆ ಸ್ಫೂರ್ತಿಯಾಗುತ್ತದೆ.
– ಚೇತನ್ ಮುಂಡಾಡಿ, “ಮದಿಪು’ ನಿರ್ದೇಶಕ
ಹುಮ್ಮಸ್ಸು ನೀಡಿದೆ
ನಮ್ಮ ಸಿನಿಮಾ ನೋಡಿ ನನ್ನ ನಟನೆಯನ್ನು ಪ್ರೋತ್ಸಾಹಿಸಿದ ಜನತೆಗೆ ಧನ್ಯವಾದ. ಈ ಮೂಲಕ ನಮ್ಮ ಕಲೆಗೆ ಬೆಲೆ ಸಿಕ್ಕಂತಾಗಿದೆ. ಮತ್ತಷ್ಟು ಸಿನಿಮಾಗಳಲ್ಲಿ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳಲು ಇದು ಹುಮ್ಮಸ್ಸು ನೀಡಿದೆ.
– ನವೀನ್ ಡಿ ಪಡೀಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Puttur: ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.