ಬರ್ತ್‌ಡೇಗೆ ದವಸ-ಧಾನ್ಯ ನೀಡಿ… ಅಭಿಮಾನಿಗಳಲ್ಲಿ ದರ್ಶನ್ ಮನವಿ
ಈ ವರ್ಷವೂ ಚಾಲೆಂಜಿಂಗ್ ಸ್ಟಾರ್ ಸರಳ ಹುಟ್ಟುಹಬ್ಬ - ದಾಸನ ಬರ್ತ್‌ಡೆಗೆ ಫ್ಯಾನ್ಸ್ ಸಿದ್ಧತೆ
Team Udayavani, Jan 20, 2020, 7:04 AM IST
ಕಳೆದ ವರ್ಷ ದರ್ಶನ್ ತಮ್ಮ ಹುಟ್ಟುಹಬ್ಬದ ಸಮಯದಲ್ಲಿ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದರು. ಅದೇನೆಂದರೆ ಹುಟ್ಟುಹಬ್ಬದಂದು ಅಭಿಮಾನಿಗಳು ಹಾರ-ತುರಾಯಿ, ಕೇಕ್ ಬದಲು ದವಸ-ಧಾನ್ಯ ತಂದರೆ ಅದನ್ನು ಅಗತ್ಯ ಇರುವ ಜಾಗಗಳಿಗೆ ತಲುಪಿಸುತ್ತೇನೆ ಎಂದು. ದರ್ಶನ್ ಮನವಿಗೆ ಸ್ಪಂದಿಸಿದ ಅಭಿಮಾನಿಗಳು ಕ್ವಿಂಟಾಲ್‌ಗಟ್ಟಲೇ ದವಸ-ಧಾನ್ಯಗಳನ್ನು ತಂದಿದ್ದರು.
ದರ್ಶನ್ ಕೂಡಾ ಹೇಳಿದ ಮಾತಿನಂತೆ ಅದನ್ನು ಅಗತ್ಯವಿರುವ ಅನಾಥಶ್ರಮ, ವೃದ್ಧಾಶ್ರಮ ಸೇರಿದಂತೆ ನಾನಾ ಕಡೆಗಳಿಗೆ ತಲುಪಿಸಿದ್ದರು. ಈ ಬಾರಿಯೂ ದರ್ಶನ್ ತಮ್ಮ ಹುಟ್ಟುಹಬ್ಬವನ್ನು (ಫೆ.16) ಕಳೆದ ವರ್ಷದಂತೆ ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಈ ಕುರಿತು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. “ಹುಟ್ಟುಹಬ್ಬಕ್ಕೆ ಬ್ಯಾನರ್ ಕೇಕ್, ಹಾರಗಳನ್ನು ದಯವಿಟ್ಟು ತರಬೇಡಿ.
ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರ ದವಸ ಧಾನ್ಯಗಳನ್ನು ದಾನ ನೀಡಿ ಅದನ್ನು ಒಗ್ಗೂಡಿಸಿ ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು’ ಎಂದು ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸುತ್ತಿರುವ ಅವರ ಅಭಿಮಾನಿಗಳು ಈಗಾಗಲೇ ತಮ್ಮ ಕೈಲಾದ ಮಟ್ಟಿಗೆ ದವಸ-ಧಾನ್ಯಗಳನ್ನು ತಂದುಕೊಡುತ್ತಿದ್ದಾರೆ. ಈ ಮೂಲಕ ಈ ವರ್ಷವೂ ದರ್ಶನ್ ಹುಟ್ಟುಹಬ್ಬ ಅರ್ಥಪೂರ್ಣವಾಗಿರಲಿದೆ.
ಗೋಶಾಲೆಗೆ ಮೇವು: ಇನ್ನು ದರ್ಶನ್ ಗೋಶಾಲೆಗಳಿಗೆ ಮೇವು ಒದಗಿಸಿದ್ದಾರೆ. ಸ್ನೇಹಿತರೊಂದಿಗೆ ಅನೇಕ ಟ್ರಾಕ್ಟರ್‌ಗಳಲ್ಲಿ ಗೋಶಾಲೆಗಳಿಗೆ ಮೇವು ಒದಗಿಸಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ತಮ್ಮ ಹುಟ್ಟುಹಬ್ಬ ಆಚರಣೆಯ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ದರ್ಶನ್, “ಈ ವರ್ಷವೂ ಸರಳವಾಗಿ ಆಚರಿಸುತ್ತಿದ್ದೇನೆ. ಕಳೆದ ವರ್ಷದಂತೆ ದವಸ-ಧಾನ್ಯಗಳನ್ನು ತಂದುಕೊಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನೆ. ನಮ್ಮ ಕೈಲಾದ ಮಟ್ಟಿಗೆ ಗೋಶಾಲೆಗಳಿಗೂ ಮೇವು ಒದಗಿಸಿದ್ದೇವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.