ಜಗ್ಗೇಶ್ ಗೆ ಮುತ್ತಿಗೆ ಘಟನೆ : ಅಭಿಮಾನಿಗಳ ಪರ ಕ್ಷಮೆ ಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
Team Udayavani, Feb 24, 2021, 6:51 PM IST
ಬೆಂಗಳೂರು: ನನ್ನ ಅಭಿಮಾನಿಗಳಿಂದ ಜಗ್ಗೇಶ್ ಅವರಿಗೆ ಬೇಜಾರಾಗಿದ್ದರೆ, ಅವರ ಪರವಾಗಿ ನಾನು ಕ್ಷಮೆ ಕೋರುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ಇಂದು (ಫೆ.24) ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತಾಡಿರುವ ದರ್ಶನ್, ಇದು ಯಾಕೆ ನಡೆಯಿತು ? ಎಲ್ಲಿಂದ ಶುರುವಾಯಿತು ಅಂತಾ ನಂಗೆ ಗೊತ್ತಿಲ್ಲ. ಅವತ್ತು ನಮ್ಮ ಹುಡುಗರು ಜಗ್ಗೇಶ್ ಅವರ ಬಳಿ ಹೋಗೋದು ನನಗೆ ಗೊತ್ತಿರಲಿಲ್ಲ, ಅಂದು ಗಮನಕ್ಕೆ ಬಂದಿದ್ದರೆ ಅಲ್ಲೆ ಬೈಯ್ತಿದ್ದೆ. ನಮ್ಮ ಸೆಲಬ್ರಿಟಿಗಳಿಂದ( ಅಭಿಮಾನಿಗಳು) ತೊಂದರೆಯಾಗಿದ್ದರೆ ನಾನು ಜಗ್ಗೇಶ್ ಅವರಿಗೆ ಕ್ಷಮೆ ಕೋರುತ್ತೇನೆ ಎಂದರು.
ಜಗ್ಗೇಶ್ ಮಾತಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ವಿವಾದದ ಬಗ್ಗೆ ಮಾತಾಡಿದ ದರ್ಶನ್, ಅವರು ನಮ್ಮ ಸೀನಿಯರ್. ನಮ್ಮ ಸೀನಿಯರ್ ಯಾವಾಗಲೂ ಮುಂದೆ ಇರಬೇಕು, ನಾವು ಅವರ ಹಿಂದೆ ಇರಬೇಕು. ನಮ್ಮ ಸೀನಿಯರ್ತಾನೇ (ಜಗ್ಗೇಶ್) ಮಾತಾಡಿದ್ದು ? ನಮ್ಮ ಬಗ್ಗೆ ಅವರನ್ನ ಬಿಟ್ಟು ಯಾರು ಮಾತಾಡಬೇಕು?ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.
ಆಡಿಯೋ ಲೀಕ್ ಆಗಿರುವ ಬಗ್ಗೆ ನಿರ್ಮಾಪಕ ವಿಖ್ಯಾತ್ ಜತೆಗೂ ಮಾತಾಡಿದ್ದೇನೆ. ಯಾರು ಅದನ್ನ ಲೀಕ್ ಮಾಡಿದ್ದಾರೆ ಎಂದು ಆತನನ್ನ ಪ್ರಶ್ನಿಸಿದೆ. ಮೈಸೂರಿನಲ್ಲಿ ನಡೆದ ಘಟನೆ ಬಳಿಕ ಜಗ್ಗೇಶ್ ಅವರಿಗೆ ಕಾಲ್ ಮಾಡಲು ಪ್ರಯತ್ನಿಸಿದೆ ಎಂದಿದ್ದಾರೆ ಡಿ ಬಾಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UV Fusion: ಇಂಗ್ಲೆಂಡ್ ಟು ಕೋಲ್ಕತಾ ಬಸ್ ಒಂದು ನೆನಪು
UV Fusion: ಮರೆಯಾಗದಿರಲಿ ಪಾಡ್ದನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Sandalwood: ಸಂತು ಡಬಲ್ ಧಮಾಕಾ: ಡಿಸ್ಕೋ ಜೊತೆ ಕಂಗ್ರಾಜ್ಯುಲೇಶನ್ಸ್ ಬ್ರದರ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.