ಫ್ಯಾನ್ಸ್ ತಲೆಕೆಡಿಸಿದ ದರ್ಶನ್ ಓಪನ್ ಚಾಲೆಂಜ್
ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡಿ- ದರ್ಶನ್
Team Udayavani, Jul 3, 2019, 3:00 AM IST
ಮಂಗಳವಾರ ಬೆಳ್ಳಗೆ ಎದ್ದು ಫೇಸ್‌ಬುಕ್, ಟ್ವಿಟ್ಟರ್ ಅಂಥ ಸೋಶಿಯಲ್ ಮೀಡಿಯಾಕ್ಕೆ ಎಂಟ್ರಿ ಕೊಟ್ಟ ಸಿನಿಪ್ರಿಯರಿಗೆ ಸರ್‌ಪ್ರೈಸ್ ಒಂದು ಕಾದಿತ್ತು. ಸರ್‌ಪ್ರೈಸ್ ಕೊಟ್ಟವರು ಬೇರ್ಯಾರು ಅಲ್ಲ, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. “ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್, ಮಧ್ಯಾಹ್ನ ಫೇಸ್‌ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ’ ಎಂದು ದರ್ಶನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬರೆದುಕೊಂಡಿದ್ದರು.
ಸೋಶಿಯಲ್ ಮೀಡಿಯಾಗಳಲ್ಲಿ ಅಪರೂಪಕ್ಕೆ ಪೋಸ್ಟ್ ಹಾಕುವ ಚಾಲೆಂಜಿಂಗ್ ಸ್ಟಾರ್, ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದೊಂದು “ಓಪನ್ ಚಾಲೆಂಜ್’ ಹಾಕಿದ್ದು, ಸಹಜವಾಗಿಯೇ ದರ್ಶನ್ ಅಭಿಮಾನಿಗಳ ತಲೆಗೆ ಹುಳ ಬಿಡುವಂತೆ ಮಾಡಿತ್ತು. ಅನೇಕರು ಇಂಥದ್ದೊಂದು ಟ್ವೀಟ್ ಕಂಡು ಅಚ್ಚರಿಗೊಂಡಿದ್ದರು.
ಹಾಗಾದ್ರೆ ದರ್ಶನ್ ಯಾವುದರ ಬಗ್ಗೆ ಟ್ವೀಟ್ ಮಾಡಿರಬಹುದು? ಟ್ವೀಟ್ ಮಾಡಲು ಕಾರಣ ಏನಿರಬಹುದು? ಚಾಲೆಂಜಿಂಗ್ ಸ್ಟಾರ್ “ಓಪನ್ ಚಾಲೆಂಜ್’ ಯಾರಿಗೆ ಮಾಡಿರಬಹುದು? “ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್’ ಅಂತ ಅಂದಿರುವುದರಿಂದ, ಆ ಮತ್ತೂಬ್ಬ ಸೆಲೆಬ್ರಿಟಿ ಯಾರು? ಮತ್ತೇನಾದರೂ ಸ್ಟಾರ್‌ವಾರ್ ಶುರುವಾಗುತ್ತಾ? ಎಂದು ದರ್ಶನ್ ಅಭಿಮಾನಿಗಳು ಗಹನವಾದ ಲೆಕ್ಕಾಚಾರಕ್ಕೆ ಇಳಿದಿದ್ದರು.
ಒಬ್ಬ ಸೆಲೆಬ್ರಿಟಿ ಯಿಂದ ಇನ್ನೊಬ್ಬ ಸೆಲೆಬ್ರಿಟಿ ಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್‌ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ
ನಿಮ್ಮ ದಾಸ ದರ್ಶನ್— Darshan Thoogudeepa (@dasadarshan) July 2, 2019
ದರ್ಶನ್ ಹಾಕಿದ್ದು “ಓಪನ್ ಚಾಲೆಂಜ್’ ಫ್ಯಾನ್ಸ್‌ಗೆ ತಾನು ಹೇಳಿದಂತೆಯೇ ಮಧ್ಯಾಹ್ನದ ಹೊತ್ತಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋವನ್ನು ಬಿಡುಗಡೆ ಮಾಡಿದ ದರ್ಶನ್, ತಾನು ಚಾಲೆಂಜ್ ಹಾಕಿದ್ದ ಸೆಲೆಬ್ರಿಟಿ ಮತ್ಯಾರು ಅಲ್ಲ ಅದೂ ಫ್ಯಾನ್ಸ್ ಅಂತ ಹೇಳಿ, ಅಭಿಮಾನಿಗಳಲ್ಲಿ ಬೆಳಿಗ್ಗೆಯಿಂದ ಮನೆ ಮಾಡಿದ್ದ ಸೆಲೆಬ್ರಿಟಿ ಯಾರು ಎನ್ನುವ ಕುತೂಹಲಕ್ಕೆ ತೆರೆ ಎಳೆದರು.
ಈ ಮೂಲಕ ತನಗೆ ಅಭಿಮಾನಿಗಳೇ ಸೆಲೆಬ್ರಿಟಿಗಳು ಅನ್ನೋದನ್ನ ಮತ್ತೂಮ್ಮೆ ಸಾಬೀತುಪಡಿಸಿದರು. ಜೊತೆಗೆ ಅಭಿಮಾನಿಗಳಲ್ಲಿ “ಕುರುಕ್ಷೇತ್ರ’ ಸಿನಿಮಾವನ್ನು ನೋಡುವಂತೆ ಚಾಲೆಂಜ್ ಕೂಡ ಹಾಕಿದರು. ಈ ಬಗ್ಗೆ ವೀಡಿಯೋದಲ್ಲಿ ಮಾತನಾಡಿರುವ ದರ್ಶನ್, “”ಕುರುಕ್ಷೇತ್ರ’ ಚಿತ್ರದಲ್ಲಿ ಅನೇಕ ಕಲಾವಿದರು ಅಭಿನಯಿಸಿದ್ದಾರೆ.
ಎಲ್ಲರನ್ನು ಸಮಾನವಾದ ದೃಷ್ಟಿಯಲ್ಲಿ ನೋಡಿ. ಪಾಸ್‌ನಲ್ಲಿ ಫೋಟೋ ಇಲ್ಲ ಎಂದು ಸಿನಿಮಾ ನೋಡದೆ ಇರುವುದು ಸರಿಯಲ್ಲ. ಅಂಬರೀಶ್, ಅರ್ಜುನ್ ಸರ್ಜಾ, ರವಿಚಂದ್ರನ್ ಮತ್ತು ನಿಖಲ್ ಸೇರಿದಂತೆ ಎಲ್ಲರು ಇದ್ದಾರೆ. ಹಾಗಾಗಿ ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡಿ, ಸಿನಿಮಾ ನೋಡಬೇಕು ಎನ್ನುವುದು ನನ್ನ ಚಾಲೆಂಜ್’ ಎಂದು ಅಭಿಮಾನಿಗಳಿಗೆ ಚಾಲೆಂಜ್ ಹಾಕಿದ್ದಾರೆ.
Its Time For Now Celebrity challenge For My All Fans pic.twitter.com/OtuG5pifNS
— Darshan Thoogudeepa (@dasadarshan) July 2, 2019
ಈ ಮೂಲಕ ಸ್ಟಾರ್‌ವಾರ್ ಆಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದರ್ಶನ್ ಹೀಗೊಂದು ಪ್ರಯತ್ನ ಮಾಡಿದ್ದಾರೆ. ಒಟ್ಟಾರೆ ಬೆಳಿಗ್ಗೆಯಿಂದಲೇ ಅಭಿಮಾನಿಗಳಲ್ಲಿ ಒಂದಷ್ಟು ಕುತೂಹಲ ಮೂಡಿಸಿದ್ದ ದರ್ಶನ್ “ಓಪನ್ ಚಾಲೆಂಜ್’ ಟ್ವೀಟ್‌ಗೆ ಮಧ್ಯಾಹ್ನದ ವೇಳೆಗೆ ಉತ್ತರ ಸಿಕ್ಕಿದ್ದರಿಂದ ಫ್ಯಾನ್ಸ್ ಕೂಡ ನಿಟ್ಟುಸಿರು ಬಿಡುವಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.