ʼಕಾಟೇರʼ ಟೈಟಲ್,ಕಥೆ ನನ್ನದು… ಉಮಾಪತಿ ವಿರುದ್ದ ಗರಂ ಆದ ದಾಸ; ಏನಿದು ವಿವಾದ?
Team Udayavani, Feb 20, 2024, 3:13 PM IST
ಬೆಂಗಳೂರು: ದರ್ಶನ್ ಅವರ ʼಕಾಟೇರʼ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸಾಗಿದೆ. ಸಿನಿಮಾ ಥಿಯೇಟರ್ ಬಳಿಕ ಓಟಿಟಿಯಲ್ಲೂ ಸದ್ದು ಮಾಡುತ್ತಿದೆ. ಈ ನಡುವೆ ʼಕಾಟೇರʼ ಕಥೆ ಹಾಗೂ ಟೈಟಲ್ ವಿಚಾರದಲ್ಲಿ ತೆರೆಮರೆಯಲ್ಲಿ ವಾಗ್ವಾದ ಆರಂಭಗೊಂಡಿದೆ.
ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಥಿಯೇಟರ್ ನಲ್ಲಿ ಇದುವರೆಗೆ ಬಿಡುಗಡೆಯಾದ ದರ್ಶನ್ ಅವರ ಸಿನಿಮಾಗಳು ಭರ್ಜರಿ ಪ್ರದರ್ಶನ ಕಂಡಿದೆ. ʼಕಾಟೇರʼ ಕೂಡ ಇದೇ ಥಿಯೇಟರ್ ನಲ್ಲಿ 50 ದಿನಗಳನ್ನು ಪೊರೈಸಿದೆ. ಈ ಥಿಯೇಟರ್ 50 ವರ್ಷಗಳು ತುಂಬಿದೆ. ಇದರೊಂದಿಗೆ ʼಕಾಟೇರʼ 50 ದಿನಗಳನ್ನು ಪೊರೈಸಿದೆ. ಈ ಸಂಭ್ರಮವನ್ನು ಜೊತೆಯಾಗಿ ಚಿತ್ರತಂಡ ಇತ್ತೀಚೆಗೆ ಆಯೋಜನೆ ಮಾಡಿತ್ತು.
ಈ ವೇದಿಕೆಯಲ್ಲಿ ನಟ ದರ್ಶನ್ ಅವರು ಮಾತನಾಡಿದ್ದು, ʼರಾಬರ್ಟ್ʼ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ʼ”ಕಾಟೇರ ಕಥೆ ಬರೆಸಿದ್ದು ನಾನು, ಟೈಟಲ್ ಕೂಡ ನಾನೇ ಕೊಟ್ಟಿದ್ದು” ಎನ್ನುವ ಮಾತಿಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ದರ್ಶನ್ ಹೇಳಿದ್ದೇನು?: ವೇದಿಕೆಯಲ್ಲಿ ಮಾತನಾಡಿದ ಅವರು, “ಕೆಲವರು ಹೇಳಿದ್ರು ಕಥೆ ನಾನು ಮಾಡಿಸಿದೆ, ಟೈಟಲ್ ನಾನು ಕೊಟ್ಟೆ ಅಂತ. ಅಯ್ಯೋ ತಗಡೇ. ನಿನಗೆ ‘ರಾಬರ್ಟ್’ ಕಥೆ ಕೊಟ್ಟದ್ದೇ ನಾವು ಈಗ. ಯಾಕಂದರೆ ಕೊಟ್ಟಿದ್ದು ಮಾಡಿದ್ದು ಹೇಳಬಾರದು. ಯಾಕಂದರೆ ಇದೇ ರೀತಿ ಒಂದ್ಸಲ ಸಿಕ್ಕಿಹಾಕಿಕೊಂಡು ಹೇಳಿಸಿಕೊಂಡು ಬಾಯಿಇದ್ದಂಗೆ ಹೇಳಿಕೊಂಡು ಬುದ್ದಿ ಕಲಿಯಲಿಲ್ಲ ಅಂದ್ರೆ ನಾವು ಏನು ಹೇಳೋಣ. ಯಾಕಪ್ಪಾ ಬಂದು ಬಂದು ನಮ್ಮ ಕೈಯಲ್ಲಿ ಯಾಕೆ ಗುಮ್ಮಿಸಿಕೊಳ್ಳುತ್ತೀಯಾ? ಗುಮ್ಮಿಸಿಕೊಳ್ಳಬೇಡ, ಎಲ್ಲೋ ಚೆನ್ನಾಗಿದ್ದೀಯಾ. ಅಲ್ಲೇ ಇದ್ದುಬಿಡು” ಎಂದು ಖಾರವಾಗಿಯೇ ಹೇಳಿದರು.
“ನೀನು ಕಥೆ ಮಾಡಿಸಿದೆ ಅಲ್ವಾ? ಹಾಗಾದರೆ ಇಂತಹ ಒಳ್ಳೆ ಕಥೆ ಯಾಕೆ ಬಿಟ್ಟೆ? ನಿನ್ನ ಜಡ್ಜ್‌ಮೆಂಟ್ ಅಷ್ಟು ಚೆನ್ನಾಗಿದೆ ಗುಡ್. ನೀನು ಮಾಡಬಹುದಿತ್ತಲ್ಲ. ಟೈಟಲ್ ನಾನು ಕೊಟ್ಟೆ ಎನ್ನುತ್ತೀಯಾ. ಕಾಟೇರ ಟೈಟಲ್ ಕೊಟ್ಟಿದ್ದು ನಾನು ಅದಕ್ಕೂ ಸ್ಪಷ್ಟನೆ ಕೊಡುತ್ತೀನಿ. ಎಲ್ಲಾ ಆಧಾರ ಇಟ್ಟುಕೊಂಡೇ ಮಾತನಾಡಬೇಕು” ಎಂದು ನಿರ್ದೇಶಕ ಮಹೇಶ್ ಅವರನ್ನು ವೇದಿಕೆಗೆ ಕರೆದಿದ್ದಾರೆ.
ಮದಗಜ ಟೈಟಲ್ ರಾಮಮೂರ್ತಿ ಸರ್ ಬಳಿ ಇತ್ತು. ಅದನ್ನು ತೆಗೆದುಕೊಳ್ಳಲು ‘ಕಾಟೇರ’ ಟೈಟಲ್ ಅನ್ನು ಉಮಾಪತಿ ಸರ್ ಕೊಟ್ಟರು. ಮದಗಜ ಟೈಟಲ್ ಅನ್ನು ರಾಮಮೂರ್ತಿ ಸರ್ ನನಗೆ ಕೊಟ್ಟರು” ಎಂದು ಮಹೇಶ್ ಹೇಳಿದ್ದಾರೆ.
ʼಕಾಟೇರʼ ಟೈಟಲ್ ನ್ನು ಮೊದಲು ತಮ್ಮ ಬ್ಯಾನರ್‌ನಲ್ಲಿ ರಿಜಿಸ್ಟರ್ ಮಾಡಿಸೋಕೆ ನೀವು ಹೇಳಿದ್ರಿ. ಆದರೆ ನನ್ನ ಬ್ಯಾನರ್‌ನಲ್ಲಿ ಜಾಗ ಇರಲಿಲ್ಲ ಎನ್ನುವ ಕಾರಣಕ್ಕೆ ಸರಿ, ಅದು ನಮ್ಮ ಬ್ಯಾನರ್ ಎಂದು ಉಮಾಪತಿ ಬ್ಯಾನರ್‌ನಲ್ಲಿ ರಿಜಿಸ್ಟರ್ ಮಾಡಿಸಿದೆವು. ಆದರೆ ಟೈಟಲ್ ಕೊಟ್ಟಿದ್ದು ನೀವೇ(ದರ್ಶನ್) ಎಂದು ನಿರ್ದೇಶಕ ತರುಣ್ ಸುಧೀರ್ ವೇದಿಕೆಯಲ್ಲಿ ಹೇಳಿದ್ದಾರೆ.
ಅಷ್ಟಕ್ಕೂ ಉಮಾಪತಿ ಹೇಳಿದ್ದೇನು?: ʼಕಾಟೇರʼ ಸಿನಿಮಾದ ಕಥೆ ಬರೆಸಿದವನು ನಾನು. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಮಕ್ಕಳಿಗೆ ಪರೀಕ್ಷೆ ಇದ್ದ ಕಾರಣಕ್ಕೆ ನಾನು ಸಿನಿಮಾವನ್ನು ನೋಡಲು ಆಗಿಲ್ಲ. ʼಕಾಟೇರʼ ಕಥೆ ಹಾಗೂ ಟೈಟಲ್ ಕೊಟ್ಟವನು ನಾನೇ. ಯಾರಿಗೆ ಏನು ಧಕ್ಕಬೇಕೋ ಅದು ದಕ್ಕುತ್ತದೆ” ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
ದರ್ಶನ್ ಅವರ ಮಾತಿನ ಬಳಿಕ ಮಾಧ್ಯಮವೊಂದರ ಜೊತೆ ಮಾತನಾಡಿರುವ ಉಮಾಪತಿ “ನಟ ದರ್ಶನ್ ಗೆಲುವಿಗೆ ನಮ್ಮಿಂದ ಏನು ಕೊಡುಗೆ ಇಲ್ಲ ಬಿಡಿ. ಸಮಯ ಸಂದರ್ಭ ಬಂದಾಗ ಈ ಬಗ್ಗೆ ಮಾತನಾಡುತ್ತೇನೆ. ಈಗ ಎಲ್ಲದಕ್ಕೂ ಉತ್ತರ ಕೊಟ್ಕೊಂಡು ಕೂರಲು ಆಗಲ್ಲ. ಮಾಡಲು ಬೇಕಾದಷ್ಟು ಕೆಲಸವಿದೆ. ದರ್ಶನ್ ಅವರಷ್ಟು ನಾವು ದೊಡ್ಡವರು ಆಗಿಲ್ಲ. ಆ ಹಂತಕ್ಕೆ ಬಂದಾಗ ಉತ್ತರಿಸ್ತೀವಿ” ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.