Nagabhushan ಟಗರು ಪಲ್ಯಕ್ಕೆ ದರ್ಶನ್ ಸಾಥ್


Team Udayavani, Oct 20, 2023, 4:58 PM IST

Nagabhushan ಟಗರು ಪಲ್ಯಕ್ಕೆ ದರ್ಶನ್ ಸಾಥ್

ನಟ ಧನಂಜಯ್‌ “ಟಗರು ಪಲ್ಯ’ ಎಂಬ ಸಿನಿಮಾ ನಿರ್ಮಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದು, ಅ.27ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ನಟ ದರ್ಶನ್‌ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

“ಟ್ರೇಲರ್‌ ನೋಡಿದಾಗ ಖುಷಿ ಆಯಿತು. 7 ಸ್ಟಾರ್‌ ಸುಲ್ತಾನ್‌ ಚೆನ್ನಾಗಿ ನಟನೆ ಮಾಡಿದೆ. ನಾಯಕಿ ಅಮೃತಾ ಅವರಿಗೆ ಸ್ವಾಗತ. ನಮ್ಮದು ಚಿಕ್ಕ ಇಂಡಸ್ಟ್ರಿ. ನೀಟ್‌ ಇಂಡಸ್ಟ್ರಿ. ಇದು ನಮ್ಮ ಮಣ್ಣಿನ ಸೊಗಡಿನ ಸಿನಿಮಾ. ಟ್ರೇಲರ್‌ನಲ್ಲಿ ಸಿನಿಮಾ ಏನೋ ಅನ್ನೋದು ಹೇಳಬಹುದು. ನಗಲು ಏನು ಬೇಕು ಎಲ್ಲವೂ ಇದೆ. ಸಿನಿಮಾ ಚೆನ್ನಾಗಿ ಆಗಲಿ. ಹೀರೋಗಳು ಏನು ಮಾಡುತ್ತಿದ್ದಾರೆ ಎಂದು ತುಂಬಾ ಜನ ಕೇಳುತ್ತಾರೆ. ನಾವು ಪ್ರೊಡ್ನೂಸ್‌ ಮಾಡುತ್ತೇವೆ. ಈ ಸಾಲಿನಲ್ಲಿ ಡಾಲಿ ಅವರು ಮೊದಲು ನಿಲ್ಲುತ್ತಾರೆ. ಇದು ಧನಂಜಯ್‌ ನಿರ್ಮಾಣದ ಮೂರನೇ ಸಿನಿಮಾ. ಆತ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಬಡವರ ಮಕ್ಕಳು ದೊಡ್ಡವರು ಆಗಬೇಕು. ಡಾಲಿ ಪಿಕ್ಚರ್ಸ್‌ ದೊಡ್ಡ ಪ್ರೊಡಕ್ಷನ್‌ ಆಗಿ ಬೆಳೆಯಲಿ. ನಾಗಭೂಷಣ್‌ ಫ್ಯಾನ್‌ ನಾನು. ನಾವು ಚಿಕ್ಕ ಕಲಾವಿದರು ನಿಮ್ಮ ಬ್ಯಾನರ್‌ನಡಿ ನನಗೂ ಅವಕಾಶ ಕೊಡಿ’ ಎನ್ನುತ್ತಾ ಶುಭ ಹಾರೈಸಿದರು.

ಧನಂಜಯ್‌ ಮಾತನಾಡಿ, “ಎಲ್ಲಾ ಸಂಬಂಧಗಳನ್ನು ನೆನಪಿಸುವ ಸಿನಿಮಾವೇ ಟಗರು ಪಲ್ಯ. ಇಡೀ ತಂಡಕ್ಕೆ ಧನ್ಯವಾದ ಹೇಳಬೇಕು. ನನಗೆ ಉಮೇಶ್‌ ಅವರು ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ಒಳ್ಳೆ ಪ್ರತಿಭೆಗಳಿಗೆ ಬಂಡವಾಳ ಹಾಕುವುದು ಖುಷಿ ನನಗೆ ಇದೆ. ಅವರವರ ಪ್ರತಿಭೆಗಳು ಅವರನ್ನ ಮೇಲೆ ಕರೆದುಕೊಂಡು ಬರುತ್ತಿದೆ. ಇಡೀ ತಂಡ ನನಗೆ ಅದ್ಭುತವಾಗಿ ಸಹಕರಿಸಿದೆ. ನಾಗಭೂಷಣ್‌ ಯಾವುದೇ ಪಾತ್ರ ಕೊಟ್ಟರು ತೂಗಿಸಿಕೊಂಡು ಹೋಗುವ ನಟ. ಟಗರು ಪಲ್ಯದಲ್ಲಿ ನೀವು ಬೇರೆ ನಾಗಭೂಷಣ್‌ ನೋಡಬಹುದು. ಅಮೃತಾ ಲುಕ್‌ ಟೆಸ್ಟ್‌ ಮಾಡಿದಾಗ ಸ್ಯಾಂಡಲ್‌ವುಡ್‌ ಮಹಾಲಕ್ಷ್ಮೀ ತರ ಕಾಣಿಸುತ್ತಾರೆ. ನನ್ನ ಬೆನ್ನು ತಟ್ಟಲು ಇವತ್ತು ಒಬ್ಬರು ಅಣ್ಣ ಬಂದಿದ್ದಾರೆ. ಯಾವಾಗ ಸಿಕ್ಕರು ಖುಷಿಯಿಂದ ತಬ್ಬಿಕೊಂಡು ಚೆನ್ನಾಗಿ ಕೆಲಸ ಮಾಡುತ್ತಿದ್ದೀಯಾ.. ಮಾಡು ಖುಷಿಪಡುತ್ತೇನೆ ಎನ್ನುತ್ತಾರೆ’ ಎಂದು ದರ್ಶನ್‌ ಅವರ ಬಗ್ಗೆ ಹೇಳಿದರು.

ನಟ ನಾಗಭೂಷಣ್‌ ಮಾತನಾಡಿ, “ನಾನು ಹೀರೋ ಆಗಬೇಕು ಎಂದು ಚಿತ್ರರಂಗಕ್ಕೆ ಬಂದವನಲ್ಲ. ಕ್ಯಾರೆಕ್ಟರ್‌ ಆರ್ಟಿಸ್ಟ್‌ ಆಗಬೇಕು ಎಂದು ಬಂದವನು. ನನ್ನ ಪುಣ್ಯ. ಅಂದು ಇಕ್ಕಟ್‌ ಸಿನಿಮಾ. ಈಗ ಟಗರು ಪಲ್ಯ ಸಿಕ್ಕಿದೆ. ಟಗರು ಪಲ್ಯ ಸಿನಿಮಾದ ಪಾತ್ರ ನನಗೆ ತೃಪ್ತಿ ಕೊಟ್ಟ ಪಾತ್ರ. ನಾನು ಒಬ್ಬ ಹಳ್ಳಿ ಹುಡುಗ. ನಾನು ಬೆಳೆದು ಬಂದ ಪರಿಸರವನ್ನು ಪ್ರತಿನಿಧಿಸುವುದು, ನಮ್ಮೂರು ಕಥೆ ಇರುವುದರಿಂದ ಈ ಸಿನಿಮಾ ಮತ್ತಷ್ಟು ಕನೆಕ್ಟ್ ಆಗಿದೆ’ ಎಂದರು.

“ದರ್ಶನ್‌ ಅವರ ಕಡೆಯಿಂದ ನನ್ನ ಮೊರ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿರುವುದು ಬಹಳ ಖುಷಿ ಇದೆ. ಈ ಕ್ಷಣ ನನಗೆ ಲೈಫ್ ಲಾಂಗ್‌ ನೆನಪು ಇರುತ್ತದೆ’ ಎಂದರು.

ಚಿತ್ರಕ್ಕೆ ಉಮೇಶ್‌ ಕೆ ಕೃಪ ನಿರ್ದೇಶನವಿದೆ. ನಾಗಭೂಷಣ, ಅಮೃತಾ ಪ್ರೇಮ್‌ ಜೊತೆಗೆ ರಂಗಾಯಣ ರಘು, ತಾರಾ, ಶರತ್‌ ಲೋಹಿತಾಶ್ವ, ವೈಜನಾಥ್‌ ಬಿರಾದಾರ್‌, ವಾಸುಕಿ ವೈಭವ್‌ ಸೇರಿದಂತೆ ದೊಡ್ಡ ತಾರಾಬಳಗವಿದೆ. ಅಕ್ಟೋಬರ್‌ 27ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಮಂಜು ಬಿಗ್ ಬಾಸ್ ಮನೆಯ ಫಿಟ್ಟಿಂಗ್ ಮಾಸ್ಟರ್ ಎಂದ ಚೈತ್ರಾ

BBK11: ಮಂಜು ಬಿಗ್ ಬಾಸ್ ಮನೆಯ ಫಿಟ್ಟಿಂಗ್ ಮಾಸ್ಟರ್ ಎಂದ ಚೈತ್ರಾ

Sapthami Gowda is joins the cast of ‘Halagali’

Sapthami Gowda: ʼಹಲಗಲಿʼಗೆ ಸಪ್ತಮಿ ನಾಯಕಿ; ಡಾಲಿಗೆ ಕಾಂತಾರ ಬೆಡಗಿ ಜೋಡಿ

abhimanyu kashinath ellige payana yavudo daari movie

Ellige Payana Yavudo Daari Movie; ದಾರಿ ಹೊಸದಾಗಿದೆ ಗೆಲುವು ಬೇಕಾಗಿದೆ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

BBK11: ಬಿಗ್ ಬಾಸ್ ‌ಮನೆಯಲ್ಲಿ ಮತ್ತೆ ಹೊಡೆದಾಟ; ಅರ್ಧದಲ್ಲೇ ನಿಂತೋಯಿತು ಟಾಸ್ಕ್

BBK11: ಬಿಗ್ ಬಾಸ್ ‌ಮನೆಯಲ್ಲಿ ಮತ್ತೆ ಹೊಡೆದಾಟ; ಅರ್ಧದಲ್ಲೇ ನಿಂತೋಯಿತು ಟಾಸ್ಕ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

police crime

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.