Darshan Thoogudeepa; ಬೇಲ್‌ ಕೆ ಬಾದ್:‌ ನಿರ್ಮಾಪಕದ ಮೊಗದಲ್ಲಿ ನಗು

Team Udayavani, Dec 14, 2024, 11:35 AM IST

Darshan Thoogudeepa; ಬೇಲ್‌ ಕೆ ಬಾದ್:‌ ನಿರ್ಮಾಪಕದ ಮೊಗದಲ್ಲಿ ನಗು

ದರ್ಶನ್‌ಗೆ ಜಾಮೀನು ಸಿಗುವ ಮೂಲಕ ಅವರ ಅಭಿಮಾನಿ ವರ್ಗ ಖುಷಿಯಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ನಡುವೆಯೇ ದರ್ಶನ್‌ ಅವರ ಸಿನಿಮಾ ಮಾಡಲು ಮುಂದಾಗಿದ್ದ ನಿರ್ಮಾಪಕರು ಕೂಡಾ ನಿಟ್ಟುಸಿರು ಬಿಟ್ಟಿದ್ದಾರೆ. ಈ ಮೂಲಕ ಹೊಸ ವರ್ಷದಲ್ಲಿ ಮತ್ತೆ ದರ್ಶನ್‌ ಸಿನಿಮಾ ಆರಂಭವಾಗುವ ನಿರೀಕ್ಷೆ ಇದೆ.

ಮುಖ್ಯವಾಗಿ ದರ್ಶನ್‌ ನಟನೆಯ “ಡೆವಿಲ್‌’ ಚಿತ್ರದ ಚಿತ್ರೀಕರಣ ಶೇ 30ರಷ್ಟು ಶೂಟಿಂಗ್‌ ಆಗಿತ್ತು. ಈ ಚಿತ್ರೀಕರಣದ ವೇಳೆ ಕೈಗೆ ಗಾಯವಾಗಿ ಶಸ್ತ್ರಚಿಕಿತ್ಸೆ ಕೂಡಾ ನಡೆದಿತ್ತು. ಇನ್ನೇನು ಚೇತರಿಸಿಕೊಂಡು ಚಿತ್ರೀಕರಣ ಆರಂಭವಾಗುವ ಹೊತ್ತಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಬಂಧನವಾಗುವ ಮೂಲಕ ಚಿತ್ರೀಕರಣ ನಿಂತು ಹೋಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್‌ನಲ್ಲಿ “ಡೆವಿಲ್‌’ ರಿಲೀಸ್‌ ಆಗಬೇಕಿತ್ತು. ಈ ಮಾತನ್ನು ಸ್ವತಃ ದರ್ಶನ್‌ ಹೇಳಿದ್ದರು. ಆದರೆ, ದರ್ಶನ್‌ ಬಂಧನವಾಗುವ ಮೂಲಕ ಸಿನಿಮಾ ನಿಂತುಹೋಗಿತ್ತು. ಈಗ ದರ್ಶನ್‌ಗೆ ಜಾಮೀನು ಸಿಕ್ಕಿದೆ. ಈ ಮೂಲಕ ಮತ್ತೆ ದರ್ಶನ್‌ ಸಿನಿ ಚಟುವಟಿಕೆ ಗರಿಗೆದರುವ ನಿರೀಕ್ಷೆ ಇದೆ.

ದರ್ಶನ್‌ ಬೆನ್ನು ನೋವಿನಿಂದ ಸುಧಾರಿಸಿಕೊಂಡು ಮತ್ತೆ ದೈಹಿಕವಾಗಿ ಫಿಟ್‌ ಆಗಲು ಕೆಲವು ಸಮಯ ಹಿಡಿಯಲಿದೆ. ಆ ಬಳಿಕ ಚಿತ್ರೀಕರಣ ಮತ್ತೆ ಆರಂಭವಾಗಲಿದೆ. “ಕಾಟೇರ’ ಚಿತ್ರದ ಭರ್ಜರಿ ಹಿಟ್‌ ಬಳಿಕ ದರ್ಶನ್‌ ಸಿನಿಮಾದ ಮೇಲಿನ ನಿರೀಕ್ಷೆ ಕೂಡಾ ಹೆಚ್ಚಿತ್ತು.

ಆತಂಕದಲ್ಲಿದ್ದ ನಿರ್ಮಾಪಕರು

ದರ್ಶನ್‌ ಜೈಲಿಗೆ ಹೋಗುತ್ತಿದ್ದಂತೆ ಅವರ ಜೊತೆ ಸಿನಿಮಾ ಮಾಡಲು ಮುಂದಾಗಿದ್ದ ನಿರ್ಮಾಪಕರು ಆತಂಕಕ್ಕೆ ಒಳಗಾಗಿದ್ದರು. ಏಕೆಂದರೆ ಕೋಟಿಗಟ್ಟಲೇ ಅಡ್ವಾನ್ಸ್‌ ನೀಡುವ ಮೂಲಕ ದರ್ಶನ್‌ ಸಿನಿಮಾ ಮಾಡುವ ಕನಸು ಕಂಡಿದ್ದರು. ಏಕಾಏಕಿ ದರ್ಶನ್‌ ಜೈಲು ಸೇರುವ ಮೂಲಕ ಸಿನಿಮಾದ ಕನಸಿನ ಜೊತೆಗೆ ಬಂಡವಾಳದ ಚಿಂತೆ ಕಾಡಿತ್ತು. ಸದ್ಯ ದರ್ಶನ್‌ ಗೆ ಬೇಲ್‌ ಸಿಗುವ ಮೂಲಕ ನಿರ್ಮಾಪಕರು ನಿರಾಳರಾಗಿದ್ದಾರೆ.

ಡಿ ಬಾಸ್‌ ದರ್ಶನ್‌ ಟ್ರೆಂಡಿಂಗ್‌

ದರ್ಶನ್‌ಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ದರ್ಶನ್‌ ಬಂಧನವಾದಾಗಿನಿಂದ ಟ್ವೀಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಪರ-ವಿರೋಧದ ಮಾತು, ಚರ್ಚೆಗಳು ನಡೆಯುತ್ತಲೇ ಇದ್ದವು. ಈಗ ಅವರಿಗೆ ಸಂಪೂರ್ಣ ಜಾಮೀನು ದೊರೆತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ದರ್ಶನ್‌ಗೆ ಜಾಮೀನು ದೊರೆತ ಬೆನ್ನಲ್ಲೆ ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡರು. ರಾಜ್ಯಾದ್ಯಂತ ಅಲ್ಲಲ್ಲಿ ಅವರ ಕಟೌಟ್‌, ಫೋಟೋಗಳಿಗೆ ಹೂವಿನ ಹಾರ ಹಾಕಿ, ಪೂಜೆ ಮಾಡಿದರು.

ನಮೋ ಶಂಕರ ಎಂದ ದರ್ಶನ್‌ ಪತ್ನಿ ವಿಜಯಲಕ್ಷ್ಮೀ

ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು, ಜಾಮೀನು ಸುದ್ದಿ ತಿಳಿಯುತ್ತಿದ್ದಂತೆ ದೇವರ ಹೂವಿನ ಪ್ರಸಾದ ಹಿಡಿದಿರುವ ಫೋಟೋ ಹಂಚಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ನಮೋ ಶಂಕರಾ ಎಂಬ ಹಾಡನ್ನು ಹಾಕಿದ್ದಾರೆ. ಅವರ ಮಗ ವಿನೀಶ್‌ ಕೂಡ ಅಪ್ಪನ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ.

ತಾರೆಯರ ಸಂಭ್ರಮ

ನಟ ದರ್ಶನ್‌ ಅವರಿಗೆ ಜಾಮೀನು ದೊರೆತಿರುವುದರ ಬಗ್ಗೆ ಅವರ ಕುಟುಂಬದವರಷ್ಟೇ ಅಲ್ಲ, ಸಿನಿಮಾ ತಾರೆಯರು ಹಾಗೂ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಟಿ ರಕ್ಷಿತಾ ಪ್ರೇಮ್‌ ಇದೊಂದು “ಹ್ಯಾಪಿ ನ್ಯೂಸ್‌’ ಎಂದು ಬರೆದುಕೊಂಡಿ ದ್ದಾರೆ. ನಟ ಧನ್ವೀರ್‌ “ಉಸಿರಿರುವವರೆಗೆ ನಿಮ್ಮ ಹಿಂದೆ ಇರುತ್ತೇವೆ’ ಎಂದು ಪೋಸ್ಟ್‌ ಮಾಡಿದ್ದಾರೆ. ತರುಣ್‌ ಸುಧೀರ್‌ ಮಾತನಾಡುತ್ತ, “ದರ್ಶನ್‌ ಹಾಗೂ ಅವರ ಅಭಿಮಾನಿಗಳ ಸಂಬಂಧ ಬಹಳ ಗಟ್ಟಿಯಾಗಿದೆ. ಸದಾ ದರ್ಶನ್‌ಗೆ ಪ್ರೀತಿ ತೋರಿಸಿದ್ದಾರೆ. ಅವರ ಆರೋಗ್ಯ ಬೇಗ ಸುಧಾರಿಸಲಿ. ಅದೇ ಮೊದಲ ಆದ್ಯತೆ. ಜೊತೆಗೆ ಆರೋಪದಿಂದಲೂ ಬೇಗ ಮುಕ್ತರಾಗಲಿ’ ಎಂದು ಮಾತನಾಡಿದ್ದಾರೆ.

ಟಾಪ್ ನ್ಯೂಸ್

ಎದೆ ನಡುಗಿಸಿದ ಪ್ರೇಮಕಥೆಯೊಂದಿಗೆ ಬಂದ ತರುಣ್‌ ಸುಧೀರ್‌

Tharun Sudhir: ಎದೆ ನಡುಗಿಸಿದ ಪ್ರೇಮಕಥೆಯೊಂದಿಗೆ ಬಂದ ತರುಣ್‌ ಸುಧೀರ್‌

daskath tulu movie review

Tulu Movie Review; ಹೇಗಿದೆ ಈ ವಾರ ತೆರೆಗೆ ಬಂದ ತುಳು ಸಿನಿಮಾ ʼದಸ್ಕತ್‌ʼ

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

6-aids

AIDS: ಏಡ್ಸ್‌ -ಜಾಗೃತಿಯೇ ಮೂಲ ಮಂತ್ರವಾಗಿರಲಿ…

Pakistan Cricket: Mohammad Amir bids farewell to international cricket again

Pakistan Cricket: ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ಮೊಹಮ್ಮದ್‌ ಅಮೀರ್

4-kananda

Kannada: ಕನ್ನಡ ಅಂದ್ರೆ ಹಿಂಜರಿಕೆ ಯಾಕೆ ?

Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್‌ ದಾಟುವ ಸಾಹಸಿ ಕನ್ನಡತಿ

Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್‌ ದಾಟುವ ಸಾಹಸಿ ಕನ್ನಡತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎದೆ ನಡುಗಿಸಿದ ಪ್ರೇಮಕಥೆಯೊಂದಿಗೆ ಬಂದ ತರುಣ್‌ ಸುಧೀರ್‌

Tharun Sudhir: ಎದೆ ನಡುಗಿಸಿದ ಪ್ರೇಮಕಥೆಯೊಂದಿಗೆ ಬಂದ ತರುಣ್‌ ಸುಧೀರ್‌

Prakruthi Soundarya; ಪ್ರಕೃತಿ ಮಡಿಲಿಗೆ ಹೊಸ ಸಿನಿಮಾ

Prakruthi Soundarya; ಪ್ರಕೃತಿ ಮಡಿಲಿಗೆ ಹೊಸ ಸಿನಿಮಾ

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Renukaswamy Case: High Court grants bail to Darshan, Pavithra Gowda

Renukaswamy Case: ದರ್ಶನ್‌, ಪವಿತ್ರಾಗೌಡಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

ಎದೆ ನಡುಗಿಸಿದ ಪ್ರೇಮಕಥೆಯೊಂದಿಗೆ ಬಂದ ತರುಣ್‌ ಸುಧೀರ್‌

Tharun Sudhir: ಎದೆ ನಡುಗಿಸಿದ ಪ್ರೇಮಕಥೆಯೊಂದಿಗೆ ಬಂದ ತರುಣ್‌ ಸುಧೀರ್‌

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

daskath tulu movie review

Tulu Movie Review; ಹೇಗಿದೆ ಈ ವಾರ ತೆರೆಗೆ ಬಂದ ತುಳು ಸಿನಿಮಾ ʼದಸ್ಕತ್‌ʼ

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

6-aids

AIDS: ಏಡ್ಸ್‌ -ಜಾಗೃತಿಯೇ ಮೂಲ ಮಂತ್ರವಾಗಿರಲಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.