ದರ್ಶನ್ ಪತ್ನಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಅಮೂಲ್ಯ
Team Udayavani, Nov 11, 2018, 4:52 PM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಡದಿ ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬದ ಪ್ರಯುಕ್ತ ಗೋಲ್ಡನ್ ಗರ್ಲ್ ನಟಿ ಅಮೂಲ್ಯ ಜಗದೀಶ್ ಶುಭಾಶಯ ಕೋರಿದ್ದಾರೆ. ನಟಿ ಅಮೂಲ್ಯ ತಮ್ಮ ಟ್ವೀಟರ್ ಖಾತೆಯಲ್ಲಿ ವಿಜಯಲಕ್ಷ್ಮಿ ಅವರ ಜೊತೆಗಿದ್ದ ಫೋಟೋಗಳನ್ನು ಪೋಸ್ಟ್ ಮಾಡಿ ಶುಭಾಶಯವನ್ನು ತಿಳಿಸಿದ್ದಾರೆ.
“ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು ಅಕ್ಕ. ನೀವು ಯಾವಾಗಲೂ ಸಂತೋಷದಿಂದ ಇರಬೇಕು’ ಎಂದು ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ಈ ವರ್ಷ ಅಮೂಲ್ಯರ ಹುಟ್ಟುಹಬ್ಬವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಟುಂಬ ಆಚರಿಸಿತು.
ಸದಾ ಟ್ವಿಟ್ಟರ್ನಲ್ಲಿ ಆ್ಯಕ್ಟಿವ್ ಆಗಿರೋ ವಿಜಯಲಕ್ಷ್ಮಿ, ಟ್ವಿಟ್ಟರ್ ಮೂಲಕ ಅಮೂಲ್ಯಗೆ ವಿಶ್ ಕೂಡ ಮಾಡಿದ್ದರು. ಅಲ್ಲದೇ ಅಮೂಲ್ಯ, ವಿಜಯಲಕ್ಷ್ಮಿ ಮತ್ತು ನಟ ದರ್ಶನ್ ಪಾರ್ಟಿಗಳಲ್ಲಿ ಆಗಾಗ ಭೇಟಿಯಾಗುತ್ತಿರುತ್ತಾರೆ. ಅದರಲ್ಲೂ ಅಮೂಲ್ಯ ಮತ್ತು ವಿಜಯಲಕ್ಷ್ಮಿ ಅವರು ಆತ್ಮೀಯರಾಗಿದ್ದು, ಅಮೂಲ್ಯ ಯಾವಾಗಲೂ ಅವರನ್ನು ಅಕ್ಕ ಎಂದು ಕರೆಯುತ್ತಾರೆ. ಇನ್ನು ದರ್ಶನ್ ತಮ್ಮ ಪತ್ನಿಗೆ ಏನು ಉಡುಗೊರೆ ಕೊಡ್ತಾರೆ ಅಂತ ಕಾದು ನೋಡಬೇಕು.
Happiest bday @vijayaananth2 … stay happy Akka … lots of love to you … ❤️ pic.twitter.com/AC1q1BUb1I
— Amulya (@Amulya_moulya) November 11, 2018
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kashima; ನೀ ನಂಗೆ ಎಂದ ಕಾಶಿಮಾ…; ನಾಯಕಿ ಹೆಸರು ಘೋಷಣೆ
Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್ ಸ್ಟಾರ್
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.